ಆಸೆ

Submitted by theeta on Tue, 06/02/2009 - 12:52

ಆಸೆ

ರವಿಗಾಸೆ ಬಾನೊಡೆಯನಾಗಲು,
ನನಗಾಸೆ ಅವನ ಉದಯ ಕಿರಣವಾಗಲು,
ಚಂದಿರನಾಸೆ ಆಗಸ ಬೆಳಗಲು,
ನನಗಾಸೆ ಅವನ ಬೆಳದಿಂಗಳಾಗಲು,

ಚುಕ್ಕಿಗಾಸೆ ಪಟಪಟ ಮಿನುಗಲು,
ನನಗಾಸೆ ಆ ಹೊಳಪಲಿ ಹೊಳೆಯಲು,
ಸಾಗರದಾಸೆ ಅಲೆಯುಕ್ಕಿ ಬಾನ ಚುಂಬಿಸಲು,
ನನಗಾಸೆ ಆ ಅಲೆಯ ಚುಂಬಿಸಲು,

ಪ್ರೇಮಿಗಾಸೆ ಪ್ರೀತಿಸಲು,
ನನಗಾಸೆ ಆ ಪ್ರೀತಿಯ ಪ್ರತಿಯಾಗಲು,
ಹಕ್ಕಿಯಾಸೆ ಹಾರಾಡಲು,
ನನಗಾಸೆ ಆ ಹಾರಾಟದ ಎತ್ತರವಾಗಲು,

ರಸಿಕನಾಸೆ ಕನಸ ಕಾಣಲು,
ನನಗಾಸೆ ಆ ಕನಸಿನ ಮೂಲ ಕಾಣಲು,
ಕವಿಯಾಸೆ ಕವನ ರಚಿಸಲು,
ನನಗಾಸೆ ಆ ಕವನದ ಪದಪುಂಜವಾಗಲು,

ರಂಗಿನ ಚಿಟ್ಟೆಗಾಸೆ ಹೂ ಮಕರಂದ ಹೀರಲು,
ನನಗಾಸೆ ಆ ಚಿಟ್ಟೆ ಮೇಲಿನ ರಂಗು ಗೀಚಲು,
ಮೋಡದಾಸೆ ಚಲಿಸುತ ಮಳೆ ಹನಿಯಾಗಲು,
ನನಗಾಸೆ ಮುಗಿಲ ಹೆಗಲೇರ್ ಆ ಮೋಡವ ಹಿಡಿಯಲು,

ಬ್ಲಾಗ್ ವರ್ಗಗಳು

Comments