ಕನ್ನಡದ ಸಿನೆಮ 'ಯೋಧ'ದಲ್ಲಿ 'ಕಾಜೋಲ್ ' ಇದ್ದಾಳೆ ಗೊತ್ತಾ!!

Submitted by Rakesh Shetty on Mon, 06/29/2009 - 15:30

ಹ್ಞೂ ರೀ , 'ಕಾಜೋಲ್' ದರ್ಶನ್ ಅವರ 'ಯೋಧ'ದಲ್ಲಿ ಕುಣಿದಿದ್ದಾಳೆ.ಅದ್ಯಾಕೆ ಈ ವಿಷಯನ ಮುಚ್ಚಿಟ್ಟವ್ರೋ ಗೊತ್ತಿಲ್ಲಪ್ಪ ;) . ಆಕೆಯ ಮುಖವನ್ನು ತೋರಿಸುವುದಿಲ್ಲ, ಕ್ಯಾಮೆರಾ ಎತ್ತರದಲ್ಲಿ ಇಟ್ಟು ಶೂಟ್ ಮಾಡಿರಬೇಕು ಅನ್ನಿಸುತ್ತೆ, ನೋಡ್ತಾ ನೋಡ್ತಾ ಅದು 'ಫನಾ' ಚಿತ್ರದ 'ದೇಸ್ ರಂಗೀಲಾ' ಹಾಡಿನ ತರ ಕಾಣಿಸಿದ್ರೆ ಅದು ನಮ್ಮ ತಪ್ಪಲ್ಲ, ಯಾಕೆಂದ್ರೆ ಅದೇ ಹಾಡಿನ ಸೆಟ್ಟು,ಅದೇ ಡ್ರೆಸ್ಸು ಅದೇ ಪಟಾಲಮ್ಮಿನೊಂದಿಗೆ ಕಾಜೋಲ್ ಕುಣಿದಿದ್ದಾಳೆ, ಕ್ಯಾಮೆರಾ ಎತ್ತರದಲ್ಲಿದ್ದರೆ ಸ್ಟೇಜ್ನಲ್ಲಿ 'ಕಾಜೋಲ್' ತಲೆ ಬಗ್ಗಿಸಿ
ಕುಣಿಯುತ್ತಾಳೆ (ಗೊತ್ತಾಗದಿರಲಿ ಅಂತ ಇರ್ಬೇಕು ;) ) ಅದೇ ಕ್ಯಾಮೆರಾ ಕೆಳಗೆ ಬಂದ ತಕ್ಷಣ ಅಲ್ಲಿ ಚಿತ್ರದ ನಾಯಕಿ 'ನಿಖಿತ' ಹಾಜರ್!!. ನಿರ್ದೇಶಕರು ಕೇವಲ ಸ್ಟೇಜ್ನ ಮೇಲೆ ಮಾತ್ರ ಗಮನವಿಟ್ಟಿದ್ದರಿಂದಲೋ ಏನೋ , ಅವಳ ನೃತ್ಯವನ್ನು ಹಿಂದೆಯಿಂದ ನೋಡುತ್ತಾ ನಿಲ್ಲುವ 'ಆಮೀರ್ ಖಾನ್'ಗೆ ಕನ್ನಡ ಸಿನೆಮಾದಲ್ಲಿ ಕಾಣಿಸುವ ಭಾಗ್ಯ ಸಿಕ್ಕಿಲ್ಲ ;). ಹಿಂಗೆ ಹೇಳದೆ ಕೇಳದೆ 'ಕಾಜೋಲ್' ಬಂದು ಹೋಗಿದ್ದಕ್ಕೆ ಕಾರಣ 'ಆರ್ಥಿಕ ಹಿಂಜರಿತ'ವಿರಬೇಕು ;)

ಇಡಿ ಚಿತ್ರದಲ್ಲಿ ನನಗೆ ಹಿಡಿಸಿದ್ದು 'ಅವಿನಾಶ್' ಅವರ 'ರಾಜಕಾರಣಿಗಳ' ಜನ್ಮ ಜಾಲಾಡುವ ಮಾತುಗಳು ಮಾತ್ರ.
ನಿರ್ದೇಶಕ ಮಹಾಶಯ ಚಿತ್ರವನ್ನು ರೀಲುಗಟ್ಟಲೆ ಸುತ್ತಿ ,ಸುತ್ತಿದ್ದನ್ನು ಒಮ್ಮೆಯೂ ನೋಡದೆ ನಮಗೆ 'ದರ್ಶನ' ಭಾಗ್ಯ ಕರುಣಿಸಿದನೋ ಏನೋ?

ಕಡೆಗೆ ಚಿತ್ರ ಮಂದಿರದಿಂದ ಹೊರ ಬರುವಾಗ ಗೆಳೆಯ ಹೇಳಿದ 'ಇನ್ಮೆಲೇ ಕನ್ನಡ ಚಿತ್ರ ಸ್ವಲ್ಪ ದಿನ ಥಿಯೇಟರ್ನಲ್ಲಿದ್ದರೆ ಮಾತ್ರ ನೋಡುವುದು'

ರಾಕೇಶ್ ಶೆಟ್ಟಿ :)

ಬ್ಲಾಗ್ ವರ್ಗಗಳು

Comments