ದ್ವಂದ್ವ - ಒಂದು ಕಲ್ಪನೆ....!!

Submitted by vijay on Fri, 11/06/2009 - 23:12

ದ್ವಂದ್ವ


"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ....
ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ..."

ಎಂಬ ಈ ಸಾಲುಗಳಲ್ಲಿ ಎಂತಹ ನೋವು ಅಡಗಿದೆ...ಎಂತಹ ಅರ್ಥ ಅಡಗಿದೆ....

ಒಮ್ಮೆ ಹಿಂದಿರುಗಿ ನೋಡಿದರೆ...ಜೀವನದಲ್ಲಿ ಏರಿ ಬಂದ ಮೆಟ್ಟಿಲುಗಳು ಒಂದೇ ಎರಡೇ...ಎಷ್ಟು ಉದ್ದದ ಮೆಟ್ಟಿಲು ಸಾಲುಗಳು....
ಇಷ್ಟೆಲ್ಲಾ ಮೆಟ್ಟಿಲುಗಳನ್ನು ಏರುವಾಗ ನಾವು ಮರೆತಿದ್ದೇನು...ಸಾಧಿಸಿದ್ದೇನು..

ಒಂದು ಕಾಲದಲ್ಲಿ ನನ್ನ ಜೊತೆ ಯಾರಿದ್ದರು...ಹೇಗಿದ್ದರು....
ಯಾರು ಇಲ್ಲದ ಕಾಲದಲ್ಲಿ ಎಲ್ಲ ಜೊತೆಯಲ್ಲಿದ್ದರು...
ಇಂದು ಎಲ್ಲ ಇರುವ ಕಾಲದಲ್ಲಿ ಯಾರು ಜೊತೆಗಿಲ್ಲ...

ನನ್ನ ಜೊತೆ ಯಾರಿಲ್ಲ ಅನ್ನುವುದು ಯಾರಿಗೂ ತಿಳಿಯುತ್ತಿಲ್ಲ ಯಾಕೆ....?
ಅಥವಾ ಯಾರೂ ನನ್ನ ಜೊತೆಯಲ್ಲಿಲ್ಲ ಎಂಬ ಕಟು ಸತ್ಯ ಈಗ ನನಗೆ ಅರಿವಾಗುತ್ತಿದೆಯಾ ?
ಎಲ್ಲರು ನನ್ನ ಸುತ್ತ ಮುತ್ತ ಇದ್ದರು ಎಂಬ ಭ್ರಮೆಯ ಪರದೆ ಇದೀಗ ಸರಿದು...ವಾಸ್ತವ ಏನು ಎಂಬುದು ಈಗ ನನಗೆ ಅರಿವಾಗುತ್ತಿದೆಯಾ?

ನಿಜವಾಗಿ ತಿಳಿಯದು...ಬ್ಲಾಗ್ ವರ್ಗಗಳು
ಸರಣಿ
Rating
No votes yet

Comments