(Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !

(Liberty Bell) ಸ್ವಾತಂತ್ರ್ಯದ ಕುರುಹಾದ ಘಂಟೆ !

ಬರಹ

Liberty Bell

ಕ್ರಿ.ಶ. ೧೭೭೬ ರಲ್ಲಿ ಅಮೆರಿಕದೇಶದ ಸ್ವಾತಂತ್ರ್ಯೋತ್ಸವದ ದುಂದುಭಿಯನ್ನುಹೊಡೆದಾಗ ಪ್ರತಿಧ್ವನಿಸಿದ ಲಿಬರ್ಟಿಬೆಲ್,ನ ಪ್ರತಿರೂಪದ ಘಂಟೆಯೊಂದನ್ನು ಪ್ರದರ್ಶನಕ್ಕೆ ಮೀಸಲಾಗಿಡಲಾಗಿದೆ. ಅಮೆರಿಕದೇಶ, ಗ್ರೇಟ್ ಬ್ರಿಟನ್ ದೇಶದ ವಜ್ರಮುಷ್ಟಿಯಿಂದ ಬಿಡುಗಡೆಹೊಂದಿದಾಗ, ಟ್ರೆಝರಿ ಕಾರ್ಯದರ್ಶಿಗಳಾಗಿದ್ದ, ಮಿ. ಜಾನ್. ಡಬ್ಲ್ಯೂ. ಸಿಂಡರ್ ರವರು ಆ ಮಹಾನ್ ಘಟನೆಯ ಜ್ಞಾಪಕಾರ್ಥವಾಗಿ ಮಿಸ್ಸೂರಿರಾಜ್ಯದ ಜನತೆಗೆ ಈ ಐತಿಹಾಸಿಕ-ಘಂಟೆಯನ್ನು ಪ್ರಾನ್ಸ್ ದೇಶದಿಂದ ತರಿಸಿ ದಾನಮಾಡಿದ್ದರು. ಫ್ರಾನ್ಸ್ ದೇಶ ಕ್ರಿ.ಶ. ೧೯೫೦ ರಲ್ಲಿ ೫೩ ಅಂತಹಘಂಟೆಗಳನ್ನು ಎರಕಹೊಯ್ದು ತಯಾರುಮಾಡಿದ್ದನ್ನು ಅಮೆರಿಕದೇಶದ ರಾಷ್ಟ್ರಭಕ್ತಸಮುದಾಯದವರು ತರಿಸಿ, ಜನತೆಗೆ ದಾನವಾಗಿಕೊಟ್ಟಿದ್ದರು.

-ನಾನು ತೆಗೆದ ಚಿತ್ರ