ನಮ್ಮೊಳಗಿನ ನಾವು!

ನಮ್ಮೊಳಗಿನ ನಾವು!

ನಮ್ಮೊಳಗಿನ ನಾವು!

ಹತ್ತಿರವಿದ್ದು ದೂರವೆ ನಿಲುವೆವು
ನಮ್ಮ ಅಹಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
- ಜಿ.ಎಸ್.ಶಿವರುದ್ರಪ್ಪ

ಮೇಲಿನದು ಕವಿವಾಣಿ. ಕವಿಗೆ ಮನುಷ್ಯನ ಹೊಂದಿಕೊಂಡು ಹೋಗಲಾಗದ ಸ್ವಭಾವದ ಬಗ್ಗೆ ಸೋಜಿಗವಿದೆ. ಆದರೆ ಮನುಷ್ಯನ ಈ ಸ್ವಭಾವ ಸ್ವಂತದ್ದಲ್ಲ. ಒತ್ತಡದಿಂದ ನಿರ್ಮಾಣವಾದದ್ದು.

ಮನುಷ್ಯನ ಭಾವನೆಗಳು ಹಾಗೂ ಅವನ ವರ್ತನೆಗಳು ಒಂದಕ್ಕೊಂದು ಪೂರಕವಾಗಿದ್ದಾಗ ಮನುಷ್ಯ ನೆಮ್ಮದಿಯಾಗಿ ಇರುತ್ತಾನೆ. ಹಾಗೆಯೇ ಅವನ ಮೌಲ್ಯಗಳು ಮತ್ತು ಕನಸುಗಳು ಕೂಡ ವಾಸ್ತವಿಕ ನೆಲೆಗಟ್ಟಿನ ಮೇಲೆ ಇರಬೇಕು.

ಮನುಷ್ಯ ಸಂಬಂಧಗಳು ಗಟ್ಟಿಯಾಗಿ, ಸಂತೋಷದ ಮತ್ತು ಹೊರೆಯೆನ್ನಿಸದ ಸಂಬಂಧಗಳಾಗಬೇಕಾದರೆ ವ್ಯಕ್ತಿಗಳ ವರ್ತನೆಗಳು ಸ್ಪಷ್ಟವಾಗಿರಬೇಕು.

ಮನುಷ್ಯ ವರ್ತನೆಗಳು, ಅದರ ಹಿಂದಿನ ಭಾವನೆಗಳು ಮತ್ತು ಅದರ ಹಿಂದಿನ ಯೋಚನೆಗಳು ಸರಿಯಾಗಿದ್ದರೆ ಅವನು ತನ್ನ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೆ ಕಹಿ ಭಾವನೆ ಉಂಟುಮಾಡದೆ ತಾನು ಅವರಿಂದ ಕಹಿ ಭಾವನೆ ಅನುಭವಿಸದೆ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬುದು ಹಳೆಯ ಗಾದೆ ಮಾತು. ಜಗಳವಾಗದಂತೆ ಮಾತನಾಡುವುದು ಹೇಗೆ? ನಮ್ಮ ಸುತ್ತಲಿನ (ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ, ಗೆಳೆಯರು, ಸಹೋದ್ಯೋಗಿಗಳು... ಹೀಗೆ) ಜನರೊಂದಿಗೆ ನಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳುವುದು ಹೇಗೆ?

ಅದಕ್ಕಾಗಿ ಮೊದಲು ನಮ್ಮ ವ್ಯಕ್ತಿತ್ವದ, ನಮ್ಮ ಸಂವಹನ ಸಾಮರ್ಥ್ಯದ, ನಮಗಿರುವ ಒತ್ತಡಗಳ, ನಮಗಿರುವ ಶಾಪಗಳ ವಿಶ್ಲೇಷಣೆಯಾಗಬೇಕು.

ಈ ನಿಟ್ಟಿನಲ್ಲಿ ಧಾನ್ಯ ಸಂಸ್ಥೆಯು ದಿನಾಂಕ ೧೩ ಮತ್ತು ೧೪ ನೇ ಡಿಸೆಂಬರ್ ೨೦೦೮ ರಂದು ತುಮಕೂರಿನಲ್ಲಿ ಒಂದು ಕಾರ್ಯಾಗಾರವನ್ನು ಆಯೋಜಿಸಿದೆ. ಜಗತ್ತಿಗೆ ಸಹಜ ಕೃಷಿಯ ಬೆಳಕು ತೋರಿಸಿದ ಮಸನೊಬು ಫುಕುವೋಕಾರನ್ನು ತಮ್ಮ ’ಒಂದು ಹುಲ್ಲಿನ ಕ್ರಾಂತಿ’ ಪುಸ್ತಕದ ಅನುವಾದದಿಂದ ಕನ್ನಡಿಗರಿಗೆ ಪರಿಚಯಿಸಿದ ಸಂತೋಷ್ ಕೌಲಗಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುತ್ತಿದ್ದಾರೆ.

೧೮ ವರ್ಷ ಮೇಲ್ಪಟ್ಟ ಯಾರಾದರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ೨೦ ಜನರಿಗೆ ಮಾತ್ರ ಅವಕಾಶ. ಆಸಕ್ತರು ೯೩೪೨೧ ೮೪೮೫೫ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.