ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ನೋಡು ಬಾ ನೋಡು ಬಾ ನಮ್ಮೂರ"

ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ನೋಡು ಬಾ ನೋಡು ಬಾ ನಮ್ಮೂರ"

ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ನೋಡು ಬಾ ನೋಡು ಬಾ ನಮ್ಮೂರ"

ಕಳೆದ ೨ ವರುಷಗಳಿಂದ ಕ್ಯಾಲಿಫೋರ್ನಿಯ ಸ್ಯಾನ್‍ಫ್ರಾನ್‍ಸಿಸ್ಕೊ ಪ್ರದೇಶದಲ್ಲಿ Stanford KZSU 90.1 itsdiff radio ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಬಂದಿದೆ. ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಕರ್ನಾಟಕ ಇತಿಹಾಸದ ಬಗ್ಗೆ ಒಂದು ವಿಹಂಗಮ ನೋಟ, ಪಿ. ಬಿ. ಶ್ರೀನಿವಾಸ್, ನಾಗಭರಣ, ಡಾ. ಕಾಪ್ಸೆ ಅವರೊಂದಿಗೆ ಸಂದರ್ಶನ ಹಾಗು ಶಾಸ್ತ್ರೀಯ ಸಂಗೀತ, ಭಾವ ಗೀತೆ ಮತ್ತು ಗಮಕವಾಚನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ.

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html

ಈಗ ಡಿಸೆಂಬರ್ ೧೭ರಂದು ಕನ್ನಡನಾಡಿನ ಊರು ಹಾಗು ಇತರ ತಾಣಗಳನ್ನು ನೆನಪಿಸುವ ಕನ್ನಡ ಗೀತೆಗಳನ್ನೊಳಗೊಂಡ ಕಾರ್ಯಕ್ರಮ ಪ್ರಸಾರ ಮಾಡಲಿದೆ. ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ನೀವೂ ದೂರವಾಣಿಯ ಮೂಲಕ ಕಾಲ್ ಮಾಡಿ ವಿಶ್ವಕನ್ನಡಿಗರೊಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು. ದೂರವಾಣಿ ಸಂಖ್ಯೆಯನ್ನು ಪ್ರಸಾರದ ಸಮಯದಲ್ಲಿ ನೀಡಲಾಗುವುದು.

ತನ್ನ ಐವತ್ತೆರಡನೆಯ ರಾಜ್ಯೋತ್ಸವವನ್ನು ಆಚರಿಸಿದ "ಸುಂದರ ನದಿ ವನಗಳ ನಾಡಾದ" ಕರ್ನಾಟಕ ಐತಿಹಾಸಿಕ ಸ್ಥಳಗಳಿಗೆ, ರಮ್ಯ ನೈಸರ್ಗಿಕ ತಾಣಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆ. ಅಂತಹ ಜಾಗಗಳನ್ನು ನೀವು ನೋಡಿ ಆನಂದಿಸಿರಬಹುದು ಅಥವ ನೀವು ಅಲ್ಲಿಯೇ ಹುಟ್ಟಿ ಬೆಳೆದಿರಲೂ ಬಹುದು. ಅಷ್ಟೇಕೆ ನೀವು ಹುಟ್ಟಿ ಬೆಳೆದ ಊರು ಯಾವುದಾದರೂ ಅದರ ಬಗ್ಗೆ ನಿಮಗೆ ಆತ್ಮೀಯ ಭಾವನೆ ಇರುವುದು ಸಹಜವೆ. ವಿಶ್ವದ ಬೇರೆ ಬೇರೆ ಜಾಗಗಳಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ನಿಮ್ಮ ಅನುಭವ ಮತ್ತು ನೆನಪುಗಳನ್ನು ಹಂಚಿಕೊಳ್ಳಲು ಇದು ಒಂದು ಅವಕಾಶ.

ಸಂಪದಿಗರನೇಕರು ಇಂತಹ ವಿಷಯದ ಬಗ್ಗೆ ಆಸಕ್ತಪೂರ್ಣವಾಗಿ ಬರೆದಿರುವುದು ಬ್ಲಾಗಿಗರಿಗೆ ತಿಳಿದೇ ಇದೆ. ನೀವು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಕಾರ್ಯಕ್ರಮವು ಹೆಚ್ಚು ಆಕರ್ಷಕವಾಗಿ ಮೂಡುವುದರಲ್ಲಿ ಸಂದೇಹವಿಲ್ಲ.

ವಿವರಗಳು: ನೋಡು ಬಾ ನೋಡು ಬಾ ನಮ್ಮೂರ
ಬಾನುಲಿ ಕೇಂದ್ರ: ಸ್ಟಾನ್‍ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‍ಫ್ರಾನ್‍ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ: http://www.itsdiff.com (Listen from anywhere in the world. In the website at the top left corner please see in red and yellow "To Listen Live Click Below. Choose 128k or 56k based on your internet bandwidth." )
ದಿನಾಂಕ: 2008 ಡಿಸೆಂಬರ್ 17 ಬುಧವಾರ
ಸಮಯ: ಬೆಳಗ್ಗೆ 7.30ರಿಂದ 8.30 ರವರೆಗೆ. (ಕ್ಯಾಲಿಫೋರ್ನಿಯ ಸಮಯ) [ 7.30 AM to 8.30 AM PST in California]
ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ

ಭಾರತೀಯ ಕಾಲಮಾನ: ಬುದವಾರ ರಾತ್ರಿ ೯.೦೦ ರಿಂದ ೧೦.೦೦

ಧನ್ಯವಾದಗಳು