ನೌಕರಿ ಬೇಟೆ ?

ನೌಕರಿ ಬೇಟೆ ?

ಎಲ್ಲ ಸಂಪದಿಗರಿಗೂ ವಂದನೆಗಳು.

ಈ ಕಾರ್ಯಕ್ರಮದ ಅಡಿ ಬರಹದಲ್ಲಿ ಹೀಗೊಂದು ನೌಕರಿ ಬೇಟೆ ಮಾಡಿದರೆ, ಸಂಪದಿಗರಿಗಷ್ಟೆ ಅಲ್ಲದೆ ಅವರ ಸಹೋದ್ಯೋಗಿಗಳು, ಬಂಧು, ಮಿತ್ರರು ಎಲ್ಲರಿಗೂ ಇದರಿಂದ ಅನುಕೂಲವಾಗಬಹುದು.

ನೀವು ಮಾಡಬೇಕಿರುವುದು ಇಷ್ಟೆ, ನೀವು ಕೆಲಸ ಮಾಡುವ ಕಂಪೆನಿಗಳಲ್ಲಿ ಕೆಲವು ನೌಕರಿಗಳು ಖಾಲಿ ಇರಬಹುದು, ಅದಕ್ಕೆ ಸರಿಯಾದ ತೂಕದ ವ್ಯಕ್ತಿ ಸಿಗದಿರಬಹುದು, ಅಥವಾ ಇನ್ನಿತರೆ ಯಾವುದೇ ಕೆಲಸಗಳು ಅಥವಾ ಪ್ರಾಜೆಕ್ಟ್ ಮಾಡಲು ನಿಮಗೆ ಅನಾನುಕೂಲವಿದ್ದು ಅದನ್ನು ಬೇರೆಯವರಿಗೆ ವಹಿಸಿಕೊಳ್ಳಲು ಇಚ್ಚಿಸಬಹುದು, ಹೀಗೆ ಸುಮ್ಮನೆ ಮಾತನಾಡುವಾಗ ಇನ್ನಿತರಿಗೆ ಯಾರಿಗೊ ಸಹಾಯವೂ ಆಗಬಹುದಲ್ಲವೇ ?

ಹೀಗಿರುವಾಗ ನಮ್ಮ ಕನ್ನಡಿಗರಿಗೆ ಕನ್ನಡಿಗರಿಂದ ಒಂದು ಸಹಕಾರ, ಇದಕ್ಕೆ ಪರಿಚಯಸ್ಥರೇ ಆಗಬೇಕಂದಿಲ್ಲವಲ್ಲ.

ನಿಮ್ಮ ಪ್ರತಿಕ್ರಿಯೆಗಳಿಗಾಗಿ ಕಾಯುತ್ತಿದ್ದೇನಿ.

ಆಸಕ್ತಿದಾರರು ಕೆಲಸ ಖಾಲಿ ಇದ್ದ ಮಾಹಿತಿ ಇದ್ದವರು ದಯವಿಟ್ಟು ಕೆಳಗಿನ ವಿಳಾಸಕ್ಕೆ
abhimanihuduga@gmail.comಗೆ ಕಳುಹಿಸಿ ಮತ್ತು ಹಾಗೇನಾದ್ರೂ ಆ ನೌಕರಿ ಖಾಲಿಯಿದ್ದು ಸ್ವಲ್ಪ ದಿನದ ನಂತರ ತುಂಬಿದ್ದರೆ ಅದನ್ನು ನಿಮ್ಮ ಅಮೂಲ್ಯ ಮಾಹಿತಿಯನ್ನು ತಿಳಿಸಿ.

ಇಂದಿನ ನೌಕರಿ ಪರಿಸ್ಥಿತಿಯ ಬಗ್ಗೆ ಕಳಕಳಿಯಿಂದ ಅಷ್ಟೆ.