"ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ

"ನೀರ ನಿಶ್ಚಿಂತೆ!" ಕಾರ್ಯಕ್ರಮದ ಎರಡನೇ ಸಂಚಿಕೆ: ಮಂಗಳೂರಿನಲ್ಲಿ

ಕನ್ನಡ ವಾಟರ್ ಪೋರ್ಟಲ್ ಸಮುದಾಯ ಹಾಗು ಮಂಗಳೂರಿನ ಮಿತ್ರರ ಸಹಯೋಗದಲ್ಲಿ
ಮಂಗಳೂರಿನಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ.

ಈ ಸಂಚಿಕೆಯ ಉದ್ದೇಶ: ಮಾಹಿತಿ ತಂತ್ರಜ್ಞಾನ ಬಳಸಿ ನೀರ ಸುತ್ತ ವಿಷಯಗಳ ಕುರಿತು ಬರೆಯುವುದು,
ಪರಿಣಾಮಕಾರಿಯಾಗಿ ಮಾಹಿತಿ ಹಂಚಿಕೊಳ್ಳುವುದರ ಕುರಿತು.

ದಿನಾಂಕ: ಜನವರಿ  4, ಭಾನುವಾರ
ಸಮಯ: ಬೆಳಿಗ್ಗೆ 10.00 ಗಂಟೆಗೆ

ಕಾರ್ಯಕ್ರಮದ ವಿವರ ಕೆಳಗಿನಂತೆ:

10.00 PM - 10.45 PM - ಮುನ್ನುಡಿ, ಸ್ಥಳೀಯ ಸಮುದಾಯಗಳತ್ತ ಒಂದು ನೋಟ.
(ಶ್ರೀ ಪಡ್ರೆ, ಅಡೂರ್ ಕೃಷ್ಣರಾವ್ ಮತ್ತು ಮಿತ್ರರು)
10.45 PM - 1.00 PM - ಆನ್ಲೈನ್ ಸಮುದಾಯಗಳು, ಬ್ಲಾಗ್ಸ್, ಹೊಸ ತಂತ್ರಜ್ಞಾನ - ಪರಿಚಯ.
(ನಡೆಸಿಕೊಡುವವರು: ಸಿ ಎಸ್ ಶಾರದಾಪ್ರಸಾದ್, ವಸಂತ ಕಜೆ,
ಹರಿ ಪ್ರಸಾದ್ ನಾಡಿಗ್ ಮತ್ತು ಮಿತ್ರರು
)

2.00 PM - 3.30 PM - ಸಾಕ್ಷ್ಯಚಿತ್ರ: "ಕಾಲೀ ಬೇಯ್ನ್" - ಪಂಜಾಬಿನ ಸಂತ ಬಲಬೀರ್
ಸಿಂಗ್ ನದಿಯೊಂದನ್ನು ಸ್ವಚ್ಛಗೊಳಿಸಿದ ಸಾಹಸಗಾಥೆ.
3.30 PM - 5.00 PM - ಚರ್ಚೆ, ಪ್ರಶ್ನೋತ್ತರ.

ಸ್ಥಳ:
Karnataka Bank Employees Association Hall
Opp:BALIGA STORES,
Near KSRTC Bus Stand
Kapikad Road, BEJAI
MANGALORE 575 004

ಕಾರ್ಯಕ್ರಮದ ಮತ್ತಷ್ಟು ವಿವರಗಳಿಗಾಗಿ ನಮಗೊಂದು ಸಂದೇಶ ಕಳುಹಿಸಿ ಅಥವ kannada@indiawaterportal.org ವಿಳಾಸಕ್ಕೆ ಮೇಯ್ಲ್ ಮಾಡಿ. ಕಾರ್ಯಕ್ರಮಕ್ಕೆ
ನೋಂದಣಿ ಉಂಟು, ಕಾರ್ಯಕ್ರಮದ ದಿನದಂದೇ ನೋಂದಾಯಿಸಿಕೊಳ್ಳಲೂಬಹುದು.

([:http://kannada.indiawaterportal.org/%E0%B2%A8%E0%B3%80%E0%B2%B0-%E0%B2%A8%E0%B2%BF%E0%B2%B6%E0%B3%8D%E0%B2%9A%E0%B2%BF%E0%B2%82%E0%B2%A4%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E2%80%98%E0%B2%AC%E0%B3%8D%E0%B2%B2%E0%B2%BE%E0%B2%97%E0%B3%80%E0%B2%A6%E0%B2%BE%E0%B2%B0%E0%B2%B0%E0%B3%81%E2%80%99|ನೀರ ನಿಶ್ಚಿಂತೆ ಕಾರ್ಯಕ್ರಮದ ಮೊದಲ ಸಂಚಿಕೆ ಧಾರವಾಡದಲ್ಲಿ ನಡೆದಿತ್ತು])

ನಿಮ್ಮ ಗಮನಕ್ಕೆ:
೧) ಕಾರ್ಯಕ್ರಮಕ್ಕೆ ನಿಮ್ಮ ಸ್ನೇಹಿತರನ್ನೂ ಅಹ್ವಾನಿಸಬಹುದು.
೨) ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ  ಪ್ರಾಥಮಿಕ ಪರಿಚಯ ನೀಡುವುದಿಲ್ಲ, ಬದಲಿಗೆ ಮಾಹಿತಿ
ತಂತ್ರಜ್ಞಾನವನ್ನು ಜನರಿಗೆ ಉಪಯೋಗವಾಗಬಹುದಾದ ಮಾಹಿತಿ ಹಂಚಿಕೊಳ್ಳಲು ಉತ್ತಮವಾಗಿ
ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು. ಭಾಗವಹಿಸುವವರಿಗೆ ಕಂಪ್ಯೂಟರ್ ಬಳಕೆ ಪರಿಚಿತವಾಗಿದ್ದಲ್ಲಿ ಮಾತ್ರ ಕಾರ್ಯಕ್ರಮ ಉಪಯುಕ್ತವಾಗಬಹುದು.
೩) ಈ ಕಾರ್ಯಕ್ರಮ ಕಂಪ್ಯೂಟರ್ ಬಳಕೆಯ ಪರಿಚಯವಿರುವ ಪತ್ರಕರ್ತರಿಗೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹಳ
ಉಪಯುಕ್ತವಾಗಬಲ್ಲುದು. ಹೊಸ ಬ್ಲಾಗ್ ಪ್ರಾರಂಭಿಸಲು ಆಸಕ್ತಿ ಇಟ್ಟುಕೊಂಡವರಿಗೆ,
ಈಗಾಗಲೇ ಬ್ಲಾಗ್ ಒಂದರಲ್ಲಿ ಬರೆಯುತ್ತ ತಮ್ಮ ಬರಹಗಳನ್ನು ಹಂಚಿಕೊಳ್ಳುತ್ತಿರುವವರಿಗೆ
ಈ ಕಾರ್ಯಕ್ರಮ ಉಪಯುಕ್ತವಾಗುವುದು.
೪) ಕಾರ್ಯಕ್ರಮದ ನೋಂದಣಿಗೆ ಶುಲ್ಕವಿಲ್ಲ, ಆದರೆ  ಊಟ/ಉಪಾಹಾರ ಹಾಗೂ ಸಾಂದರ್ಭಿಕ ಖರ್ಚುಗಳಿಗೆ ಸಿದ್ಧವಾಗಿರಿ.