ಮ೦ಸೋರೆಯವರ ಚಿತ್ರಕ್ಕೂಂದು ಕಥೆ

ಮ೦ಸೋರೆಯವರ ಚಿತ್ರಕ್ಕೂಂದು ಕಥೆ

ಅವಳು ಬೇಗ ಬೇಗ ನಡೆದು ಹೋಗುತ್ತಿದ್ದಳು ತಟ್ಟನೆ ಅವಳ ಕಣ್ಣುಗಳು ಏನನ್ನೊ ನೋಡಿ ಬೆಚ್ಚಿದವಳಂತೆ ಮತ್ತೆ ಹಿಂದೆ ತಿರುಗಿ ನೋಡಿದಳು ಅರೆ ಇದು ಅವನ ಮುರ್ತಿನೆ ಅಲ್ವೆ. ಎಷ್ಟೊ ಸಾರಿ ಅವನನ್ನು ದಾರಿಯಲ್ಲಿ ಧರಣಿ ಅದು ಇದು ಎಂದು ಹೋರಾಡುತಿದ್ದಿದ್ದನ್ನು ಕಣ್ಣಾರೆ ನೋಡಿದ್ದಳು, ಅವನಲ್ಲಿರುವ ಉತ್ಸಾಹವನ್ನು ಮೆಚ್ಚಿದ್ದಳು. ಇಂಥವರು ಈಗಿನ ಕಾಲದಲ್ಲಿ ಇದ್ದಾರ ಅನಿಸುತ್ತಿತ್ತು.. ಬಡವರಿಗೋಸ್ಕರ ತನ್ನ ಪ್ರಾಣವನ್ನ್ನೆ ಮೀಸಲು ಇಟ್ಟಿದ್ದಾನೆ ಪಾಪ ಎಂದು ಕೆಲವರು, ಬುದ್ಧಿ ಇಲ್ಲ ರಾಜಕೀಯದವರ ವಿರುದ್ದ ಹೋರಡಕಾಗುತ್ತ....ಎಂದು ಕೆಲವರು ಮಾತನಾಡಿಕೊಳ್ಳುತಿದ್ದಿದು ಇವಳ ಕಿವಿಗು ಬಿದ್ದಿತ್ತು........ತನ್ನ ಕಣ್ಣನ್ನೆ ನಂಬದಾದಳು, ಸುತ್ತಲು ನೋಡಿದಳು ಇದು ಬಡಬಗ್ಗರ ಏರಿಯ ಎಂದು ಯಾರಿಗಾದರು ತಿಳಿಯುತಿತ್ತು.... ದಾರಿಯಲ್ಲಿ ಎಷ್ಟೊ ಬಾರಿ ನಡೆದು ಹೋಗಿದ್ದಳು ಆದರೆ ಎಂದು ಅಷ್ಟಾಗಿ ಗಮನ ಹರಿಸಿರಲಿಲ್ಲ ಇಂದೊ ಏತಕ್ಕೊ ನೋಡುವಂತಾಯಿತು (ತಿಂಗಳಿಮ್ದ ತಾನು ಕಡೆ ಬಾರದಿದ್ದದ್ದು ನೆನಪಾಯಿತು ಅಷ್ತರಲ್ಲಿ ಎಷ್ಟೊಂದು ಬದಲಾವಣೆ) ಹಾಗೆ ದಿಟ್ಟಿಸಿದಳು.....ಹೌದ್ ಮೊದಲೆಲ್ಲ ಹೊಟ್ಟೆಗು ಇಲ್ಲದೆ ಬರೆ ಮೊಳೆಗಳಂತೆ ಇದ್ದವರು ಇಂದು ಕೈ ಕಾಲು, ಮೈ ತುಂಬಿಕೊಂಡು ಸಂತೋಷದಿಂದ ಓಡಾಡುತ್ತಿದ್ದಾರೆ....ಅವರ ಏರಿಯವೆಲ್ಲ ಸ್ವಚ್ಚವಾಗಿದೆ.... ಹೊಸತಾಗಿ ಸ್ಥಾಪಿಸಿದ ಹೊಸ ಮುರ್ತಿ ಅನಾವರಣಕ್ಕು ಅವರ ಸಂತೋಷಕ್ಕು ಕಾರಣ ಕೇಳುವಂತಾಯಿತು.....ಅಲ್ಲೆ ಮರದ ಕೆಳಗೆ ಕುಳಿತಿದ್ದ ಒಬ್ಬ ಮಧ್ಯಮ ವಯಸ್ಸಿನ ಹೆಂಗಸನ್ನು ಕೇಳಿದಳು... ಹೆಂಗಸು ಮುರ್ತಿಗೆ ಕೈ ಮುಗುಯುತ್ತ ದ್ಯಾವ್ರು ತಾಯಿ ಇವರು ನಮ್ಮ್ ಪಾಲಿಗೆ , ಕೊನೆ ಉಸ್ರು ಗಂಟ ನಮ್ಮಂತ ಬಡುರ್ ಗೋಸ್ಕರ ಸರ್ಕಾರದ ವಿರುದ್ದ ಹೋರಾಡಿ ನಮಿಗೆಲ್ಲ ಒಂದು ನೆಲೆ ಉಳ್ಸಿ....ಜೀವ್ನುಕ್ಕೆ ಅಂತ ಒಂದು ದಾರಿನು ಮಾಡಿ ತಮ್ಮ ಪಿರಾಣ ಬಿಟ್ಟವರೆ.....ಏನ್ ಮಾಡ್ತೀರ ದ್ಯಾವ್ರು ಅವ್ರ್ ಪಿರಾನನೆ ತಗಂಬಿಟ್ಟ...ಎಂದು ಮತ್ತೊಮ್ಮೆ ಕೈ ಮುಗಿದಳು..ಒಳ್ಳೆಯವ್ರಿಗೆ ಕಾಲ ಇಲ್ಲ ರಾಜಕೀಯದವರು ನಮಿಗೆ ಇವ್ರು ಇಷ್ಟೆಲ್ಲ ಮಾಡಿದುಕ್ಕೆ ಇವ್ರ್ ಪಿರಾಣನೆ ತಗ........ಎಂದು ಕಥೆ ಹೇಳುತಿದ್ದಳು ಅವಳು ಮುಂದೆ ಹೇಳಿದ ಯಾವ ಮಾತುಗಳು ತನ್ನ ಕಿವಿಗೆ ಬೀಳಲೆ ಇಲ್ಲ, ಮನಸ್ಸು ಏಕೊ ಮುದುಡಿದಂತಾಯಿತು..ತನಗೆ ಗೊತ್ತಿಲ್ಲದೆ ಕಣ್ಣುಗಳು ಮಂಜಾದವು ಸುಮ್ಮನೆ ಮುಂದೆ ನಡೆದು ಹೋದಳು ......

Rating
No votes yet

Comments