ಹೃದಯದ ಬದಲಿಗೆ...
ಗಂಡು: ಹೃದಯದ ಬದಲಿಗೆ ಕೊಡಲು ಬೇರೇನಿದೆ,
ಏನಿದೆ ಏನಿದೆ, ನನ್ನ ಬಳಿಯಲಿ ಏನಿದೆ ?
ಹೆಣ್ಣು : ಜೀವಕೆ ಜೀವವು ಕೊಡುವ ಪ್ರೀತಿಯಿದೆ,
ಕಣ್ಣಿಗೆ ಕಾಣದ ಆದರ್ಶ ಪ್ರೀತಿಯಿದೆ.
1) ಗಂಡು: ದೇವರು ಬೆಸೆದ ನಮ್ಮೀ ಪ್ರೀತಿಯ ಬಂಧನಾ
ಬಿಡಲಾರೆ ನಿನ್ನ ನಾ
ಹೆಣ್ಣು: ಬಾಳಿನ ಆಸರೆ ಬಯಸುತ ನಿನ್ನಲಿ ಬಂದೆ ನಾ,
ಸ್ವೀಕರಿಸು ಈ ಕ್ಷಣ..
ಗಂಡು: ಪ್ರೀತಿ ಹುಟ್ಟೋದೆ ಕಣ್ಣಲಿ / ಹೂವು ಅರಳೋದೆ ಮುಳ್ಳಲಿ
ಹೆಣ್ಣು: ಅರಿತೆ ನಾ ಅರಿತೆ ನಾ / ನಿನ್ನ ಪ್ರೀತಿಯ ಸ್ಪಂದನಾ..
ನಿನ್ನ ಈ ಪ್ರೇಮಕೆ ಶರಣು ಶರಣೆಂದೆನಾ..
// ಹೃದಯದಾ ಬದಲಿಗೆ //
2) ಹೆಣ್ಣು: ಈ ನನ್ನ ಜೀವ ನಿನಗೆ ಅರ್ಪಿಸುವೆ ಪ್ರಿಯ..
ಅರ್ಪಿಸುವೆ ಪ್ರಿಯ...
ಗಂಡು: ಪ್ರೀತಿಯ ಮಾತಿದು ಹೃದಯದಿ ಬಚ್ಚಿಡುವೆ ಪ್ರಿಯೆ..
ಬಚ್ಚಿಡುವೆ ಪ್ರಿಯೆ...
ಹೆಣ್ಣು: ಸಾವಿರ ಜನುಮ ಬೇಡುವೆ / ನಿನ್ನನೆ ನಾನು ಕೇಳುವೆ
ಗಂಡು: ಗೊತ್ತಿದೆ ಗೊತ್ತಿದೆ ನಿನ್ನ ಮಾತದು ಗೊತ್ತಿದೆ..
ತಿಳಿದಿದೆ ತಿಳಿದಿದೆ ಅದರರ್ಥವು ತಿಳಿದಿದೆ..
// ಹೃದಯದಾ ಬದಲಿಗೆ //
- Log in to post comments