ನಾಸ್ತಿಕತೆಯ ಸೆಳೆತ By Anantha Ramesh on Sun, 06/21/2015 - 21:32 ಕವನ ದೇವರ ಇರುವಿಕೆಯ ತರ್ಕ ತತ್ವ ಸಿದ್ಧಾಂತ ಮಂಡಿಸುವ ಮಂದಿಯ ಮಡಿ ಮುಡಿ ಗಂಧ ಬೂದಿ ಹಣೆ ಬಣ್ಣ ಉಡು-ತೊಡುಗೆ ವೇಷ ಭೂಷಣ ತೇಲ್ಗಣ್ಣು ಮೇಲ್ಗಣ್ಣ ಮುದ್ರೆ ಮಂತ್ರ ಯಂತ್ರ ತಂತ್ರ ಮಾತು ಕೃತಿ ಕಸರತ್ತು ಕಂಡರೆ ಅನ್ನಿಸುತ್ತದೆ ಪರಮ ಶ್ರೇಷ್ಠತೆ ನಾಸ್ತಿಕನಾಗಿದ್ದುಬಿಡುವುದೆ ! Log in or register to post comments