ನಾವು ಆರೋಗ್ಯ, ಆಯುಷ್ಯ, ಸಂಪತ್ತು ಏಕೆ ಬಯಸಬೇಕು?

 

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಹಿಂದೆ  ಇಳಿಸಿಕೊಂಡ ಒಂದು ಪುಸ್ತಕವನ್ನು ಓದುತ್ತಿದ್ದೆ.  ಒಂದು ಕಡೆ ಒಂದು ಪಾತ್ರವು ಮುಂದಿನ ಮಂತ್ರವನ್ನು ಹೇಳಿತು . 

ಅಗ್ನೇ ನಯ ಸುಪಥಾರಾಯೇ ಅಸ್ಮಾನ್ ವಿಶ್ವಾನಿ ದೇವ 
ಯುಯೋದ್ಧಸ್ಮಜ್ಜು ಹುರಾಣಮೇನೋ ಭೂಯಿಷ್ಠಾಂತೇ 
ನಮ ಉಕ್ತಿಂ ವಿಧೇಮ

ಅನೇಕಸಲ ಬರಹಗಾರರು ಇಂಗ್ಲಿಷ್ ಸಂಸ್ಕೃತ ಮತ್ತು ಬೇರೆ ಬೇರೆ ಯಾವುದೋ  ಭಾಷೆಯಿಂದ ವಾಕ್ಯಗಳನ್ನು ಬರೆದಿರುತ್ತಾರೆ ಆದರೆ ಅರ್ಥವನ್ನು ತಿಳಿಸುವ ವಿಚಾರ ಅವರಿಗೆ ಬಂದಿರುವುದಿಲ್ಲ. ತಮಗೆ ಗೊತ್ತಿರುವ ಇನ್ನೊಂದು ಭಾಷೆ ಓದುಗರಿಗೆ ಗೊತ್ತಿರಲಿಕ್ಕಿಲ್ಲ ಎಂಬುದು ಅವರಿಗೆ ಹೊಳೆಯುವುದಿಲ್ಲವೇನೋ. 

ಒಂದು ಚಿತ್ರಕ್ಕೆ ಎರಡು ಗಝಲ್ ಗಳ ಸಂಭ್ರಮ

ಗಝಲ್ ೧

 

ಒಲವಿನಲಿ ಪ್ರೇಮರಾಗವ ಮೋಹದಲಿ

ಹಾಡುತಿರಲು ನಾ ಬಂದೆ|

ಚೆಲುವಿನ ಸಿರಿಯನು ನೋಡುತ್ತ

ಕುಳಿತಿರಲು ನಾ ಬಂದೆ||

 

ಝೆನ್ ಪ್ರಸಂಗ: ಧರ್ಮದ ಮರ್ಮ

ಎಂಬತ್ತು ವರುಷ ವಯಸ್ಸಿನ ಕನ್‌ಫ್ಯೂಷಿಯನ್ ಪಂಡಿತನೊಬ್ಬ, ತಾನೆಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಭಾವಿಸಿದ್ದ.

ದೂರದ ರಾಜ್ಯದಲ್ಲಿ ಝೆನ್ ಗುರುವೊಬ್ಬರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಈ ಸಂಗತಿ ತಿಳಿದಾಗ, ಆತನ ಜ್ನಾನ ತನ್ನದಕ್ಕಿಂತ ಮಿಗಿಲಾದುದೇ ಎಂದು ಪರೀಕ್ಷಿಸಬೇಕೆಂಬ ತುಡಿತ ಬಲವಾಯಿತು ಪಂಡಿತನಲ್ಲಿ. ಕೊನೆಗೊಂದು ದಿನ ಆ ರಾಜ್ಯಕ್ಕೆ ಪ್ರಯಾಣ ಆರಂಭಿಸಿದ.

ಹಲವಾರು ದಿನಗಳು ನಡೆದು ಆ ರಾಜ್ಯ ತಲಪಿದ ಪಂಡಿತ. ಝೆನ್ ಗುರುಗಳನ್ನು ಕಂಡು, ತನ್ನ ಭೇಟಿಯ ಉದ್ದೇಶ ತಿಳಿಸಿದ. ತಾನು ಕಲಿತ ವಿಷಯಗಳನ್ನು ಝೆನ್ ಗುರುಗಳಿಗೆ ವಿವರಿಸಿದ. ಅದೆಲ್ಲವನ್ನೂ ಝೆನ್ ಗುರುಗಳು ಮೌನವಾಗಿ ಕೇಳಿದರು.

Image

ಚೈತ್ರೋದಯ ನೃತ್ಯ ಗೀತೆ

ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ

   ಹಾಡಿ ಕುಣಿಯುವ ಬನ್ನಿರಿ

ಸುಗ್ಗಿ ಬಂದಿದೆ ಹಿಗ್ಗು ತಂದಿದೆ

   ನೋಡಿ ನಲಿಯುವ ಬನ್ನಿರಿ

 

‌ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ

ರತ್ನಾ ಭಟ್ ಅವರ ಒಂದು ನ್ಯಾನೋ ಕಥೆ

ಹುತಾತ್ಮ

ಬೆಳಗಿನ ತಿಂಡಿಯ ಗಡಿಬಿಡಿಯಲ್ಲಿದ್ದ ವನಜಮ್ಮನ ಕಿವಿಗೆ ದೂರವಾಣಿಯ ಸದ್ದು ಎಚ್ಚರಿಸಿತು. ಸೆರಗಲ್ಲಿ ಕೈ ಒರೆಸುತ್ತಾ ಬಂದು, ಯಾರು ಎಂದು ಕೇಳಿದಾಗ, ಅತ್ತಕಡೆಯಿಂದ ಹೇಳಿದ ಸುದ್ಧಿ ಕೇಳಿ,ಹಾಗೆಯೇ ಕುಸಿದು ಬಿದ್ದುಬಿಟ್ಟರು.

Image

ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಕುಸಿಯುತ್ತಿದೆಯೇ?

ಇದು ಕೆಲವು ವರ್ಷಗಳ ಹಿಂದಿನ ಕಥೆ. ನಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತೀ ವರ್ಷ ನಡೆಯುತ್ತದೆ. ಆಯೋಜಕ ಸಮಿತಿಯು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಕಳೆದ ಹಲವಾರು ವರ್ಷಗಳಿಂದ ನಾನು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸುವ ತಂಡದ ಸದಸ್ಯನಾಗಿದ್ದೇನೆ. ಪ್ರತೀ ವರ್ಷ ಭಕ್ತಿ ಗೀತೆ, ಜಾನಪದ ನೃತ್ಯ, ಭರತನಾಟ್ಯ, ರಂಗೋಲಿ ಹೀಗೆ ಸ್ಪರ್ಧೆಗಳು ನಡೆಯುತ್ತವೆ. ಸ್ಪರ್ಧೆಗಳಲ್ಲಿ ಸ್ವಲ್ಪ ಬದಲಾವಣೆ ಇರಲಿ ಎಂದು ಒಂದು ವರ್ಷ ನಾನು ರಸ ಪ್ರಶ್ನೆ ಅಥವಾ ಕ್ವಿಜ್ ಸ್ಪರ್ಧೆ ನಡೆಸುವ ಎಂದು ಸಲಹೆ ನೀಡಿದೆ. ಸಮಿತಿಯು ಒಪ್ಪಿಗೆ ನೀಡಿ ಪ್ರಶ್ನೆಗಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ನನ್ನ ಹೆಗಲಿಗೇ ಹಾಕಿತು.

Image

ಬೆಂಕಿ ಇರುವೆಗಳೆಂಬ ಅಪಾಯಕಾರಿ ಕೀಟಗಳು

ಇದೇನು? ಬೆಂಕಿ ಇರುವೆಗಳು, ಇದರಿಂದ ಬೆಂಕಿ ಹುಟ್ಟಿಕೊಳ್ಳುತ್ತಾ ಅಥವಾ ಬೆಂಕಿಯನ್ನು ಉತ್ಪಾದಿಸುತ್ತಾ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಇರುವೆಗಳಿಂದ ಬೆಂಕಿ ಉತ್ಪಾದನೆಯಾಗುವುದಿಲ್ಲ ಆದರೆ ಕಚ್ಚಿದರೆ ಮಾತ್ರ ಜೀವಹಾನಿಯಾಗೋ ಸಾಧ್ಯತೆ ಇರುತ್ತದೆ.  ಬೆಂಕಿ ಇರುವೆ ಅಥವಾ ಫೈರ್ ಆಂಟ್ (Fire ant) ಎಂದು ಕರೆಯಲ್ಪಡುವ ಈ ಇರುವೆಗಳ ಮೈ ಬಣ್ಣ ಬೆಂಕಿ ಹೊಂಬಣ್ಣದಲ್ಲಿರುತ್ತದೆ. ನೋಡುವಾಗ ಉರಿಯುತ್ತಿರುವ ಕೆಂಡದಂತೆ ಕಾಣಿಸುವುದರಿಂದ ಈ ಇರುವೆಗಳನ್ನು ಬೆಂಕಿ ಇರುವೆಗಳೆಂದು ಕರೆಯುತ್ತಾರೆ. 

Image

ಒಂದು ಚಿತ್ರಕ್ಕೆ ಎರಡು ಕವನಗಳು

ವಯೋವೃದ್ದನ ಸ್ವಗತ

ನೋವಿನ ಅನುಭವ ನೋಡಿದೆ ಹೃದಯದಿ

ಸಾವದು ಬರದೆಯೆ ಕಾಯುತಲಿ|

ಬವಣೆಯ ಜೊತೆಯಲಿ ಬದುಕಿನ ಕಷ್ಟವ

ಸವಿಯುತ ಉಂಡೆನು ಗುಡಿಸಲಲಿ||

 

ಚಂದದ ನಗುವಿನ ಚಂದಣ್ಣ ಮೊಸಳೆ

ಚಂದಣ್ಣ ಮೊಸಳೆಯ ನಗು ಚಂದವೋ ಚಂದ. ಅದನ್ನು ಕಂಡ ವನ್ಯಮೃಗ ಫೋಟೋಗ್ರಾಫರರ ತಂಡದ ಸದಸ್ಯರು ಚಂದಣ್ಣ ಮೊಸಳೆಯ ನಗುವಿನ ಫೋಟೋ ತೆಗೆಯಲು ಬಂದರು.

“ಎಲ್ಲಿ ನೋಡೋಣ, ಚೆನ್ನಾಗಿ ನಗು" ಎಂದ ತಂಡದ ಮುಂದಾಳು. ಚಂದಣ್ಣ ಮೊಸಳೆ ಚಂದವಾಗಿ ನಗುತ್ತಿದ್ದಂತೆ ಲೈಟುಗಳು ಮಿನುಗಿದವು ಮತ್ತು ಕೆಮರಾಗಳು ಫೋಟೋ ಕ್ಲಿಕ್ಕಿಸಿದವು.

Image

ಮಾನವೀಯತೆಯ ಹಿಂದೆ…

ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ ಹಿಡಿದು ಕೊಂಡಿದ್ದರು. ಅವರನ್ನು ಗಮನಿಸಿದರೆ, ದೂರದಿಂದ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವ ಹಾಗನಿಸಿತು. ಅವರ ಕೈಯಲ್ಲಿ ಹಿಡಿದಿದ್ದ ಒಂದು ಚೂರು ಕಾಗದ ನೋಡುತ್ತಾ, *"ಇದು ಆನಂದ್ ಅವರ ಮನೇನಾ, ಯೋಗಾನಂದ ರಸ್ತೇನಾ"* ಅಂತ ಕೇಳಿದರು. 

Image