ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಮೂಡುಬಿದ್ರೆಯ ಬಳಿ ಇರುವ ಡಾ. ಸೋನ್ಸ್ ರವರ ಫಾರ್ಮ್ ಜಗತ್ಪ್ರಸಿದ್ಧ. ದೇಶ ವಿದೇಶಗಳಿಂದ ರೈತರು, ವಿದ್ಯಾರ್ಥಿಗಳು ಹಾಗು ಯಾತ್ರಿಗಳು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ. ಸುಮಾರು ಮೂವತ್ತು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಪ್ರಯೋಗಗಳ ಕುರಿತು ಡಾ. ಸೋನ್ಸ್ ರವರೊಂದಿಗಿನ ಸಂಪದ ಮಾತುಕತೆ ಇಲ್ಲಿದೆ. ವೀಕ್ಷಿಸಿ.

ವಿಧಿ ಚಿತ್ತ

ಬಸ್ಸಿನಿಂದ ಇಳಿದು ಇನ್ನೇನು ಮುಂದೆ ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲೇ ಡಿಕ್ಕಿ ಹೊಡದ ಯುವತಿಯೊಬ್ಬಳು I'm sorry  ಅನ್ನುತ್ತ ಬಿದ್ದ ಸಾಮಾನುಗಳನ್ನು ಜೋಡಿಸಲು ಅನುವಾದಳು. ಪರವಾಗಿಲ್ಲ ಬಿಡಿ ಎನ್ನುತ್ತಾ ತನ್ನ ವಸ್ತುಗಳನ್ನೆಲ್ಲ ತಾನೇ ಜೋಡಿಸಲು ಅನುವಾದನು ಆನಂದ. ಅವಳು ಜೋಡಿಸಿದ ಸಾಮಾನುಗಳನ್ನು ಅವನಿಗೆ ಕೊಟ್ಟು ಮುಂದೆ ನಡೆದಳು. ಮೇಲೆದ್ದ ಆನಂದ ಅವಳಿಗೆ ಕೃತಜ್ಞತೆ ಸಲ್ಲಿಸಲೆಂದು ತಲೆಯೆತ್ತಿದ್ದರೆ ಅವಳು ಅಲ್ಲಿಂದ ಕದಲಿದ್ದಳು. ಅವಳು ಕಾಣಿಸುತ್ತಿದ್ದರೂ ತನ್ನ ಸ್ವರ ಅವಳಲ್ಲಿಗೆ ತಲುಪಲಾರದು ಎಂದು ತಿಳಿದಿದ್ದ ಆನಂದ ಅಲ್ಲಿಗೆ ಸುಮ್ಮನಾದನು. ಆದರೆ ದೂರದಲ್ಲಿ ನಡೆಯುತ್ತಿದ್ದ ಆಕೆಯ ನಡಿಗೆ ಯಾಕೊ ಚಿರಪರಿಚಿತ ಎನಿಸಿತು. ಆ ನಡಿಗೆಯನ್ನು ಬಹಳ ಹತ್ತಿರದಲ್ಲಿ ಕಂಡಿದ್ದೇನೆ ಅನಿಸಿತು. yes ಇದು ಅವಳದೇ ನಡಿಗೆ.

Image

ದಿನಕ್ಕೆ ರೂಪಾಯಿ ೪ ಕೋಟಿ ನಷ್ಟ !

ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀರು ಸಂಗ್ರಹಿಸಿ, ಕೃಷಿಗಾಗಿ ಬಳಸಿ.

ಆದರೆ ಈ ಬಗ್ಗೆ ನಾವೆಲ್ಲರೂ ಕೇಳಲೇ ಬೇಕಾದ ಪ್ರಶ್ನೆಗಳಿವೆ: ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಲಾಶಯಗಳಿಂದ ಆಗಿರುವ ಪ್ರಯೋಜನಗಳೇನು? ಅವುಗಳ ನಿರ್ಮಾಣದ ಮುಂಚೆ ಆಶ್ವಾಸನೆ ನೀಡಿದ್ದ ಪ್ರಯೋಜನಗಳು ಸಿಕ್ಕಿವೆಯೇ?

Image

ಶುಭ ಹಾರೈಕೆಗಳು

ಓ ದೇವಕನ್ಯೆ! ನಿನಗಿದೊ ಸ್ವಾಗತ
ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ
ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ 
ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ?
ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ?
ಕ್ಷೇಮ ಸಮಾಚಾರ ವಿಚಾರಿಸಿದಿರಾ? ಒಂದು 
ಸಣ್ಣ ಲಿಫ್ಟ್ ಕೇಳಿದ್ದರೂ ನಡೆಯುತ್ತಿತ್ತು 

ಎನ್ನಾಸೆ

ಪ್ರಕೃತಿಯ ಮಡಿಲಲಿ ಮಗುವಾಗುವಾಸೆ.
ಪ್ರಕೃತಿಯ ಐಸಿರಿಯಲಿ ಒಂದಾಗುವಾಸೆ.
ಸೃಷ್ಠಿಯ ಜೀವಿಗಳಿಗೆ ಮುದ ನೀಡುವಾಸೆ.
ಪ್ರಕೃತಿ ತಾಳುವ ವಿಕೋಪಕೆದರಿ ಚಿಗುರದಿದೆ ಎನ್ನಾಸೆ.

ಹಕ್ಕಿಯಾಗಿ ಹಾರಿ ಎಲ್ಲೆಡೆ ಸಂಚರಿಸುವಾಸೆ.
ಬಾನಂಗಳಕೆ ಹಾರಿ ಮೋಡಗಳೊಡನೆ ತೇಲುವಾಸೆ.
ಎತ್ತರಕೆ ಹಾರಿ ಭೂರಮೆಯ ವೀಕ್ಷಿಸುವಾಸೆ.
ಬೇಡನ ಬಲೆಗೆದರಿ ಗರಿಗೆದರದಿದೆ ಎನ್ನಾಸೆ.

ಮಧುರಕಂಠವನೋಲುವ ಕೋಗಿಲೆಯಾಗುವಾಸೆ.
ಇಂಪಾದ ಧನಿಬೆರೆಸಿ ಹಾಡುವಾಸೆ.
ಸಂಗೀತ ಪ್ರಿಯರ ಮನತಣಿಸುವಾಸೆ.
ಕೋಗಿಲೆ ಬಣ್ಣಕೆದರಿ ಧನಿಗೂಡದಿದೆ ಎನ್ನಾಸೆ.

ಭಾಗ - ೧೯ ಮನುವಿನ ಧರ್ಮ, ನಮಗೆ ಬೇಡವಾದ ಮನು - ಪುಸ್ತಕಕ್ಕೆ ಬರೆದ ಮುನ್ನುಡಿ

ಚಿತ್ರ

ಮನುವಿನ ಧರ್ಮ, ನಮಗೆ ಬೇಡವಾದ ಮನು
ಲೇಖಕರ ಪರಿಚಯ 
ಹೆಸರು : ಎಂ.ವಿ.ಆರ್. ಶಾಸ್ತ್ರಿ
ಜನನ: ೨೨ ಏಪ್ರಿಲ್, ೧೯೫೨; ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ, ಆಂಧ್ರ ಪ್ರದೇಶ್
೧೯೭೫ರಲ್ಲಿ ಆಂಧ್ರಜ್ಯೋತಿಯಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಾಗಿ (ಮೊಫಸಿಲ್ ವಿಲೇಕರಿ - ತೆಲುಗು) ಅಡಿಯಿರಿಸಿ ಆ ತಳಮಟ್ಟದ ಸ್ಥಾಯಿಯಿಂದ ಮೇಲ್ದರ್ಜೆಯ ಸ್ಥಾಯಿಗೆ ಏರಿದ್ದಾರೆ.
೧೯೭೮ರಿಂದ ೧೯೯೦ರವರೆಗೆ ’ಈ ನಾಡು’ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯವರೆಗೆ ವಿವಿಧ  ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 

ಅವಳಿಗೆ…

ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ

ನಾನಿನ್ನ ದೂರದ ಗೆಳೆಯನಾಗಿದ್ದರೂ…

ಕೆಲವೊಂದು ಬಂಧಗಳ ದೂರಮಾಡಲಾರೆ

ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು

ಎಂದೆನಿಸಿದ್ದರೂ...

ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ 

ಅನಿಸಿದ್ದೆಲ್ಲವ ಹೇಳಿಬಿಟ್ಟಿದ್ದೆ, ಕೆಲವೊಮ್ಮೆ

ಹೇಳಬೇಕಿರುವುದನ್ನು ಹಾಗೇ ಉಳಿಸಿಕೊಂಡಿದ್ದೆ…

ಗೆಳೆತನವ ಬಯಸಿದ್ದ ನನ್ನಲ್ಲಿ 

ನನಗ್ಯಾವ ತಪ್ಪೂ ಕಂಡಿಲ್ಲ, ಎಂದೂ

ವಿಜ್ಞಾಪನೆಯಷ್ಟೇ ನಿನ್ನಲ್ಲಿ, ಈ ಮೂಕ

ಮುಗ್ದತೆಯ ಮೂರ್ಖ ಸಂವೇದನೆಗಳ 

ಸಾಧ್ಯವಾದರೆ ಸಹಿಸು ಎಂದೂ…

ನಿನಗೆ ನಾನೊಬ್ಬ ಸಾಮಾನ್ಯ ಗೆಳೆಯನಿರಬಹುದು, 

ಆದರೆ ನಾ ಹಚ್ಚಿಕೊಂಡವರಲ್ಲಿ

ನಿನಗೊಂದು ವಿಶೇಷ ಸ್ಥಾನವಿದೆ…

೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್

ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷಿಯಲ್ಲಿ ತೊಡಗಿದರು. ಕಳೆದ ೧೧ ವರುಷಗಳ ಅವರ ಕಾಯಕದ ಫಲ: ಸಾವಯವ ಕೃಷಿ ಲಾಭದಾಯಕವೆಂದು ಸಾಬೀತು ಮಾಡಿರುವುದು.
ಹಸುರು ಕ್ರಾಂತಿಯ ಅವಧಿಯಲ್ಲಿ ಲಕ್ಷಗಟ್ಟಲೆ ಕೃಷಿಕರು ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕಗಳನ್ನು ತಮ್ಮ ಹೊಲಗಳಿಗೆ ಸುರಿದು ಫಸಲಿನ ಪ್ರಮಾಣ ಹೆಚ್ಚಿಸಿದ್ದನ್ನು ಅವರು ಕಂಡಿದ್ದರು. ಕೆಲವೇ ವರುಷಗಳ ರಾಸಾಯನಿಕ ಕೃಷಿಯಿಂದಾಗಿ ಮಣ್ಣಿನ ಆರೋಗ್ಯ ಹದಗೆಟ್ಟು ಸಾವಿರಾರು ಎಕ್ರೆ ಕೃಷಿಜಮೀನು ಕೃಷಿಗೆ ನಿರುಪಯುಕ್ತ ಆದದ್ದನ್ನೂ ಕಂಡಿದ್ದರು.

Image