ಗೀತಾಮೃತ - 16

ಗೀತಾಮೃತ - 16

*ಅಧ್ಯಾಯ ೫*

     *ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯ:/*

*ಸರ್ವಭೂತಾತ್ಮಭೂತಾತ್ಮಾ ಕುರ್ವನ್ನಪಿ ನ ಲಿಪ್ಯಂತೇ//೭//*

       ಯಾರ ಮನಸ್ಸು ತನ್ನ ವಶದಲ್ಲಿದೆಯೋ,ಯಾರು ಜಿತೇಂದ್ರಿಯನೋ ಹಾಗೂ ವಿಶುದ್ಧವಾದ ಅಂತ:ಕರಣವುಳ್ಳವನೋ ಹಾಗೂ ವಿಶುದ್ಧವಾದ ಅಂತ:ಕರಣವುಳ್ಳವನೋ ಮತ್ತು ಸಮಸ್ತ ಪ್ರಾಣಿಗಳ ಆತ್ಮರೂಪೀ ಪರಮಾತ್ಮನೇ ಯಾರ ಆತ್ಮವಾಗಿದ್ದಾನೋ ಅಂತಹ ಕರ್ಮ ಯೋಗಿಯು ಕರ್ಮಮಾಡುತ್ತಿದ್ದರೂ ಕೂಡ ಲಿಪ್ತನಾಗುವುದಿಲ್ಲ.

   ‌‌*ನೈವಕಿಂಚಿತ್ಕರೋಮೀತಿ ಯುಕ್ತೋ ಮನೇತ ತತ್ತ್ವವಿತ್/*

*ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ನಶ್ನನ್ ಗಚ್ಛನ್ ಸ್ವಪನ್ ಶ್ವಪನ್//೮//*

     ತತ್ವವನ್ನು ಅರಿತಿರುವ ಸಾಂಖ್ಯಯೋಗಿಯಾದರೋ ನೋಡುವಾಗಲೂ, ಕೇಳುವಾಗಲೂ,ಮುಟ್ಟುವಾಗಲೂ,ಮೂಸುವಾಗಲೂ,ಭೋಜನ ಮಾಡುವಾಗಲೂ,ನಡೆಯುವಾಗಲೂ,ನಿದ್ರಿಸುವಾಗಲೂ ,ಉಸಿರಾಡುವಾಗಲೂ ಇಂದ್ರಿಯಗಳು ವರ್ತಿಸುತ್ತಿರುತ್ತವೆ.

***

 *ಪ್ರಲಪನ್ ವಿಸೃಜನ್ ಗೃಹ್ಣನ್ನುನ್ಮಿಷನ್ನಿಮಿಷನ್ನಪಿ/*

*ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂಡ ಇತಿ ಧಾರಯನ್//೯//*

  ಮಾತನಾಡುವಾಗಲೂ,ತ್ಯಾಗ ಮಾಡುವಾಗಲೂ ಹಾಗೂ ಕಣ್ಣುಗಳನ್ನು ತೆರೆಯುವಾಗಲೂ ಮತ್ತು ಮುಚ್ಚಿಕೊಳ್ಳುವಾಗಲೂ ಕೂಡ ಎಲ್ಲ ಇಂದ್ರಿಯಗಳು ತಮ್ಮ ತಮ್ಮ ಅರ್ಥಗಳಲ್ಲಿ ವರ್ತಿಸುತ್ತಿರುತ್ತವೆ.ಈ ಪ್ರಕಾರವಾಗಿ ತಿಳಿದುಕೊಂಡು ನಿಸ್ಸಂದೇಹವಾಗಿ ನಾನು ಏನನ್ನೂ ಮಾಡುವುದಿಲ್ಲ ಎಂಬುದಾಗಿ ತಿಳಿಯಬೇಕು.

    *ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯ:/*

*ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ//೧೦//*

   ಯಾವ ಪುರುಷನು ಎಲ್ಲ ಕರ್ಮಗಳನ್ನು ಪರಮಾತ್ಮನಲ್ಲಿ ಅರ್ಪಣೆ ಮಾಡಿ ಮತ್ತು ಆಸಕ್ತಿಯನ್ನು ತ್ಯಾಗಮಾಡಿ ಕರ್ಮವನ್ನು ಮಾಡುತ್ತಾನೋ ಆ ಪುರುಷನು ನೀರಿನಲ್ಲಿ ಇರುವ ಕಮಲದೆಲೆಯು ನೀರಿನಿಂದ ಲಿಪ್ತವಾಗುವುದಿಲ್ಲವೋ ಅದರಂತೆ ಪಾಪದಿಂದ ಲಿಪ್ತನಾಗುವುದಿಲ್ಲ.

***

 *ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ/*

*ಯೋಗೀನ: ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶದ್ಧಯೇ//೧೧//*

      ಕರ್ಮಯೋಗಿಗಳು ಮಮತ್ವ ಬುದ್ಧಿರಹಿತರಾಗಿ ಕೇವಲ ಇಂದ್ರಿಯಗಳುಮನಸ್ಸು,ಬುದ್ಧಿ ಮತ್ತು ಶರೀರದ ಮೂಲಕ ಆಗುವ ಎಲ್ಲ ಕ್ರಿಯೆಗಳಲ್ಲಿ ಆಸಕ್ತಿಯನ್ನು ತ್ಯಾಗಮಾಡಿ ಅಂತ:ಕರಣದ ಶುದ್ಧಿಗಾಗಿ ಕರ್ಮವನ್ನು ಮಾಡುತ್ತಾರೆ.

*ಯುಕ್ತ: ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್/*

*ಆಯುಕ್ತ: ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ//೧೨//*

    ಕರ್ಮಯೋಗಿಯು ಕರ್ಮಗಳ ಫಲಗಳನ್ನು ತ್ಯಾಗಮಾಡಿ ಭಗವತ್ಪ್ರಾಪ್ತಿ ರೂಪವಾದ ಶಾಂತಿಯನ್ನು ಪಡೆಯುತ್ತಾನೆ ಮತ್ತು ಸಕಾಮಪುರುಷನು ಕಾಮನೆಯ ಪ್ರೇರಣೆಯಿಂದ ಫಲದಲ್ಲಿ ಆಸಕ್ತನಾಗಿ ಬಂಧಿತನಾಗುತ್ತಾನೆ.

***

 *ಸರ್ವ ಕರ್ಮಾಣಿ ಮನಸಾ ಸಂನ್ಯಾಸ್ಯಾಸ್ತೇ ಸುಖಂ ವಶೀ*

*ನವದ್ವಾರೇ ಪುರೇ ದೇಹೀ ನೈವ ಕರ್ವನ್ನಕಾರಯನ್//೧೩//*

     ಅಂತ:ಕರಣವು ಯಾರ ವಶದಲ್ಲಿದೆಯೋ ಅಂತಹ ಸಾಂಖ್ಯಯೋಗವನ್ನು ಆಚರಿಸುವ ಪುರುಷನು ಮಾಡದೇ ಮತ್ತು ಮಾಡಿಸದೇ ಇರುತ್ತಲೇ ನವದ್ವಾರಗಳುಳ್ಳ ಶರೀರರೂಪೀ ಪುರದಲ್ಲಿ ಎಲ್ಲ ಕರ್ಮಗಳನ್ನು ಮನಸ್ಸಿನಿಂದ ತ್ಯಜಿಸಿ,ಆನಂದಪೂರ್ವಕವಾಗಿ ಸಚ್ಚಿದಾನಂದಘನ ಪರಮಾತ್ಮನ ಸ್ವರೂಪದಲ್ಲಿ ಸ್ಥಿತನಾಗಿರುತ್ತಾನೆ.

      *ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭು:/*

*ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ//೧೪//*

         ಪರಮೇಶ್ವರನು ಮನುಷ್ಯರ ಕರ್ತೃತ್ವವಾಗಲೀ ಕರ್ಮಗಳಾಗಲೀ ಮತ್ತು ಕರ್ಮಫಲಸಂಯೋಗವಾಗಲೀ ರಚಿಸುವುದಿಲ್ಲ. ಆದರೆ ಪ್ರಕೃತಿಯೇ ವರ್ತಿಸುತ್ತಿದೆ.ಅರ್ಥಾತ್ ಗುಣಗಳೇ ಗುಣಗಳಲ್ಲಿ ವರ್ತಿಸುತ್ತಿವೆ.

***

*ನಾದತ್ತೇ ಕಸ್ಯಚಿತ್ಪಾಪಂ ನ ಚೈವ  ಸುಕೃತಂ ವಿಭು:/*

*ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವ://೧೫//*

  ಸರ್ವವ್ಯಾಪಿಯಾದ ಪರಮೇಶ್ವರನು ಯಾರ ಪಾಪಕರ್ಮವನ್ನಾಗಲೀ ಮತ್ತು ಶುಭಕರ್ಮವನ್ನಾಗಲೀ ಸ್ವೀಕರಿಸುವುದಿಲ್ಲ.ಆದರೆ ಅಜ್ಞಾನದ ಮೂಲಕ ಜ್ಞಾನವು ಮುಚ್ಚಲ್ಪಟ್ಟಿದೆ,ಆದ್ದರಿಂದಲೇ ಎಲ್ಲ ಅಜ್ಞಾನೀ  ಮನುಷ್ಯರು ಮೋಹಿತರಾಗುತ್ತಿದ್ದಾರೆ.

     *ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನ:/*

*ತೇಷಾಮಾದಿತ್ಯವಜ್ಞಾನಂ  ಪ್ರಕಾಶಯತಿ ತತ್ಪರಮ್//೧೬//*

       ಆದರೆ ಯಾರ ಆ ಅಜ್ಞಾನವು ಪರಮಾತ್ಮನ ತತ್ವಜ್ಞಾನದ ಮೂಲಕ ನಾಶಮಾಡಲ್ಪಟ್ಟಿದೆಯೋ ಅವನ ಆ ಜ್ಞಾನವು ಸೂರ್ಯನಂತೆ ಆ ಸಚ್ಚಿದಾನಂದಘನನಾದ  ಪರಮಾತ್ಮನನ್ನು ಪ್ರಕಾಶಗೊಳಿಸುತ್ತದೆ.

***

(ಸಾರ ಸಂಗ್ರಹ)

-ವಿಜಯಾ ಶೆಟ್ಟಿ, ಸಾಲೆತ್ತೂರು