ದೂರದ ಪ್ರಯಾಣ ಮಾಡುವವರಿಗಾಗಿ ಸಿಂಪಲ್ ಟಿಪ್ಸ್

ದೂರದ ಪ್ರಯಾಣ ಮಾಡುವವರಿಗಾಗಿ ಸಿಂಪಲ್ ಟಿಪ್ಸ್

ದೂರದ ಪ್ರಯಾಣ ಮಾಡುವಾಗ ವಾಂತಿ ಬಂದಂತಾಗುತ್ತದೆಯೇ? ಹಾಗಾದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ. ಕೆಲವರಿಗೆ ವಾಹನದಲ್ಲಿ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವುದು ಆಗುತ್ತದೆ. ಕೆಲವರಿಗೆ ತಲೆ ತಿರುಗಿದಂತಾಗುತ್ತದೆ. ಈ ರೀತಿ ಸಮಸ್ಯೆ ಇರುವವರಿಗೆ ಎಲ್ಲಿಯೂ ದೂರ ಹೋಗುವುದೇ ಬೇಡ ಎನಿಸುತ್ತದೆ. ಮಾರುಕಟ್ಟೆಯಲ್ಲಿ ಇಂತಹ ಸಮಸ್ಯೆ ಇರುವವರಿಗೆ ಮಾತ್ರೆಗಳೂ ಸಿಗುತ್ತದೆ. ಆದರೆ ಮಾತ್ರೆಗಳಿಗಿಂತ ಇವುಗಳಿಗೆ ಮನೆ ಮದ್ದು ಬೆಸ್ಟ್. ಇಲ್ಲಿ ಕೆಲವೊಂದು ಮನೆ ಮದ್ದು ಬರೆಯಲಾಗಿದೆ. ಇನ್ನು ಮುಂದೆ ದೂರದ ಪ್ರಯಾಣ ಮಾಡುವಾಗ ಹೊಟ್ಟೆ ತೊಳೆಸುವುದು, ವಾಂತಿ ಬಂದಂತಾಗುವ ಸಮಸ್ಯೆ ಇರುವವರು ಮನೆಯಿಂದ ಹೊರಡುವ ಮುನ್ನ ಇವುಗಳನ್ನು ತೆಗೆದುಕೊಂಡು ಹೋರಡಿ.

*ನಿಂಬೆ ಹಣ್ಣನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿರಿ. ವಾಹನ ಹತ್ತಿದ ತಕ್ಷಣ ನಿಂಬೆ ಹಣ್ಣಿನ ಪರಿಮಳವನ್ನು ತೆಗೆದುಕೊಳ್ಳುತ್ತಿರಿ. ಆಗ ವಾಂತಿ ಬಂದಂತಾಗುವುದಿಲ್ಲ. ತಲೆ ಸುತ್ತುವುದೂ ಇಲ್ಲ.

*ಒಂದು ಕಪ್ ನಿಂಬೆ ಜ್ಯೂಸಿಗೆ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿಯನ್ನು ಹಾಕಿಕೊಂಡು. ಅದನ್ನು ಪ್ರಯಾಣ ಬೆಳಸುವ ಮುನ್ನ ಸೇವಿಸಿದರೆ ವಾಂತಿ ಬಂದಂತಾಗುವುದಿಲ್ಲ.

*ಒಂದು ಬಾಟಲಿಯಲ್ಲಿ ನೀರನ್ನು ಹಾಕಿಕೊಂಡು ಅದಕ್ಕೆ ಚಿಟಿಕೆ ಏಲಕ್ಕಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನೀವು ಪ್ರಯಾಣ ಆರಂಭಿಸಿದ ತಕ್ಷಣ ಅದನ್ನು ಸೇವಿಸಬೇಕು. ವಾಂತಿ ಬರುವುದಿಲ್ಲ.

*ಅಡಿಕೆಯನ್ನು ಚಿಕ್ಕ ಚಿಕ್ಕ ಹೋಳುಗಳಾಗಿ ತುಂಡು ಮಾಡಿಕೊಂಡು ಅದಕ್ಕೆ ಲವಂಗದ ಪುಡಿ ಸೇರಿಸಿಕೊಳ್ಳಿ. ವಾಹನ ಏರಿದ ತಕ್ಷಣ ಅದನ್ನು ಬಾಯಿಯಲ್ಲಿ ಹಾಕಿಕೊಂಡು ಕುಳಿತುಕೊಳ್ಳಿ.

*ಊಟ ಆದ ತಕ್ಷಣ ಪ್ರಯಾಣ ಬೆಳಸುವುದಾದರೆ ಶುಂಠಿ ತುಂಡನ್ನು ಜಗಿದು, ನೀರನ್ನು ಕುಡಿದು ನಂತರ ಹೊರಡಬೇಕು. ಶುಂಠಿ ಆಹಾರ ಜೀರ್ಣವಾಗುವಂತೆ ಮಾಡುತ್ತದೆ.

*ಹೊರಗಡೆ ಹೋಗುವಾಗ ಬ್ಯಾಗ್ ನಲ್ಲಿ ಪುದೀನಾ ಎಲೆಗಳನ್ನು ಇಟ್ಟುಕೊಳ್ಳಿರಿ. ಏಕೆಂದರೆ ಪುದೀನಾ ಪರಿಮಳ ನಿಮಗೆ ವಾಂತಿ ಬರದಂತೆ ತಡೆಯುತ್ತದೆ ಮತ್ತು ಪುದೀನಾ ಎಲೆಗಳನ್ನು ತಿಂದರೂ ವಾಂತಿಯಾಗುವುದಿಲ್ಲ.

 (ಮಾಹಿತಿ ಸಂಗ್ರಹ) 

ಚಿತ್ರ ಕೃಪೆ: ಇಂಟರ್ನೆಟ್ ತಾಣದಿಂದ