ನಿನ್ನ ನೆನಪೊಂದೇ ಶಾಶ್ವತ !
ನಿನ್ನೆಗಳ ಸವಿ ನೆನಪಿನೊಂದಿಗೆ
ನಾಳೆಯ ನಿರೀಕ್ಷೆಗಳೆಲ್ಲ
ಮೌನದಾಳಕ್ಕೆ ಜಾರತೊಡಗಿದಾಗ...
ಬರಡೆನಿಸುವ ಬದುಕಲ್ಲಿ
ಬರಿಯ ಕಂಬನಿ ಧಾರೆ!
ಸುತ್ತ ನಿರ್ಮಲತೆ ಹರಡಿದ್ದರೂ
ಮತ್ತೆ ಕುರೂಪತೆ ಕಾಡಿ,
ಮರುಕಳಿಸುವ ನೋವಿಗೆ
ಒಂದಾಗಿ ನಾಂದಿ ಹಾಡಿ,
ಕೃಶವಾಗಿಸುವುದು ಕನಸ!
- Read more about ನಿನ್ನ ನೆನಪೊಂದೇ ಶಾಶ್ವತ !
- 13 comments
- Log in or register to post comments