*ಹೊಂಬಿಸಿಲು*

*ಹೊಂಬಿಸಿಲು*

ಕವನ

ಸುಂದರ ಸಂಜೆಯ ಪಡುವಣ ದಿಕ್ಕಿಗೆ

ಮೂಡಿದೆ ಬೆರಗಿನ ಹೊಂಬಿಸಿಲು

ಸಂಧ್ಯಾ ಕಾಲದಿ ಭೂರಮೆ ಅನುಪಮ

ರೂಪವ ಧರಿಸುತ ಮೆರೆದಿಹಳು||

 

ಮೆಲ್ಲನೆ ನೇಸರ ನಿದಿರೆಗೆ ಜಾರಲು

ಅಂಬರ ಹೊದ್ದಿದೆ ಹೊಂಬಿಸಿಲು

ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು

ತಳಮಳಗೊಳ್ಳಲು ಮನಮುಗಿಲು||

 

ದಿನಕರ ಮುಳುಗಲು ಧರೆಯಲಿ ಕವಿಯಿತು

ಕಂಡಿಹ ಕನಸಿನ ಸವಿಗತ್ತಲು

ಪ್ರಿಯಕರ ಪ್ರೇಮಿಯ ಹೃದಯವ ತಣಿಸಲು

ಸುತ್ತಲು ಮೌನವು ಆವರಿಸಿತು||

 

-ಶ್ರೀ ಈರಪ್ಪ ಬಿಜಲಿ 

 

ಚಿತ್ರ್