ನೆಲೆ ಕಾಣಲಿ.. ಮತ್ತು ಒಂದು ಗಝಲ್

ನೆಲೆ ಕಾಣಲಿ.. ಮತ್ತು ಒಂದು ಗಝಲ್

ಕವನ

ನೆಲೆ ಕಾಣಲಿ

ಗಿಡ ಮರದಲಿ

ನೆಲ ಹೊಲದ ಬದಿಯಲಿ

ಕದ ಇರುತಲಿ

ಮನೆ ಎದುರಲಿ

ಮನ ಭಯವು ಹೋಗಲಿ

 

ಇಳಿ ವಯಸಲಿ

ಹೊಸ ಭಯಕೆಯು

ಕುರೆ ತೆರೆಯೆ ತನುವಲಿ

ಹುಸಿ ಮುನಿಸದು

ತಲೆ ತಿನ್ನುತ

ಸವಿ ತಿನಿಸು ಎದುರಲಿ

 

ಕಿವಿ ಒಳಗಡೆ

ಹುಳು ಹೋಗಲು

ಕುರು ಬೆಳೆಯು ಜೀವದಿ

ಕರು ಕಾಣದೆ 

ಹಸು ಕೂಗಲು

ತುರು ನಲಿಯು ಚೆಂದದಿ

 

ಹಸಿ ಮಣ್ಣಲಿ

ಕುಶಿ ಎದ್ದಿದೆ

ಇಳಿ ಕನಸು ನನಸಲಿ

ಹುಳಿ ಬಾರದೆ

ಬಿಳಿ ಹರಡಲಿ

ಹಿರಿ ಅರಸ ಬದುಕಲಿ

 

ಈ ಛಂದಸ್ಸು ರಹಿತ ಕವನದಲ್ಲಿ ಬರುವ ಮಾತ್ರಕ್ಷರ ಗಣ ಹೀಗಿದೆ 

೨+೪

೨+೪

೨+೩+೪

೨+೪

೨+೪

೨+೩+೪

ಈ ರೀತಿಯಿಂದ  ನನ್ನದೇ ಗೇಯತೆ , ಲಯ, ತಾಳ ಯತಿ ಕ್ರಮವನ್ನಿಟ್ಟುಕೊಂಡು ಬರೆದ ಕವನ .

***

ಗಝಲ್

ಮತ್ತೆ ಮದಿರೆಯ ಜೊತೆಗೆ ನಾಟ್ಯವನಾಡಲು ನನ್ನವಳೇ ಇಲ್ಲ

ಹೊತ್ತಲ್ಲದ ಹೊತ್ತಿನಲ್ಲಿ ಬಾಗಿಲಬಡಿದರೂ ಚಿಲಕ ತೆಗೆಯಲು ನನ್ನವಳೇ ಇಲ್ಲ

 

ದೇಹದ ತುಂಬಾ ಮತ್ತೇರಿದೆ ಅವಳುಡುಗೆಯ ತೊಡುಗೆ ಕಾಣದೆ

ಕಾಣದ ಕಡಲಿನೊಳಗಣ ಭಾವನೆಗಳನ್ನು ಹಂಚಿಕೊಳ್ಳಲು ನನ್ನವಳೇ ಇಲ್ಲ

 

ತುಡಿತವೇ ಇಲ್ಲದ ಚೆಲುವಿನಾಳದೊಳು ಒಲವು ಮೂಡುವುದಾದರೂ ಹೇಗೆ

ಕಷ್ಟಗಳ ಅರಿವಿನೊಳಗಿನ ಕಣ್ಣ ತೆರೆದುಕೊಳ್ಳಲು ನನ್ನವಳೇ ಇಲ್ಲ

 

ಉತ್ಕರ್ಷಣಗಳ ನಡುವೆ ಅಂಧಕಾರವು ಸಹಜವಾಗಿ ಬೆಳೆಯುತ್ತದೆ

ಚಿಂತನೆಯ ನಡುವೆ ಚಿಂತೆಯೇ ಸೇರಿ ಹೋದಾಗ ಸಂತೈಸಲು ನನ್ನವಳೇ ಇಲ್ಲ

 

ಈಶನ ಹೆಗಲಾಗಲು ಇದ್ದ ಕೊಂಡಿಯೊಂದು ಕಳಚಿ ಹೋಗಿದೆ ನಡು ರಸ್ತೆಯಲಿ

ಪ್ರೀತಿಯಿರದ ಬರಡು ದೇಹದಲ್ಲಿ ಪ್ರೇಮ ಚಿಗುರಲು ನನ್ನವಳೇ ಇಲ್ಲ

 

-ಹಾ ಮ ಸತೀಶ

 

ಚಿತ್ರ್