ಸುಮ್ನೆ ತಮಾಷೆಗಾಗಿ...
4-5 ದಿನದ ಮೊದಲು *ಮಾಸ್ಕ್* ಮನೆಯಲ್ಲೇ ಮರೆತು ಹೋಗಿದ್ದೆ. ಸರ್ಕಲ್'ನಲ್ಲಿ ಪೋಲಿಸರು ಹಿಡಿದರು, ಪೈನ್ ಕಟ್ಟುವಂತೆ ಹೇಳಿದರು
ಹಾಗೋ....ಹೀಗೋ, ಪುಸಲಾಯಿಸಿದ ಮೇಲೆ 500 ರಿಂದ 50 ರೂಪಾಯಿಗೆ ನಮ್ಮ ಒಪ್ಪಂದ ಆಯಿತು.
ನಾನು ನನ್ನ ಬೈಕ್ ಹಿಡಿದುಕೊಂಡು ಗಡಿಬಿಡಿಯಲ್ಲಿ ಅಲ್ಲಿಂದ ಹೊರಟೆ....! ಸುಮಾರು 100 ಮೀಟರ್ ದೂರ ಬಂದಿರಬಹುದು. ನನ್ನ ತಲೆಯಲ್ಲಿ ಭಯಂಕರವಾದ ಒಂದು ಆಲೋಚನೆ ಬಂದಿತು. ಮುಂದೆ ಯಾರಾದಾರೂ ಪೊಲೀಸರು ನಿಂತಿದ್ದರೆ....? ಕೂಡಲೇ ಬೈಕ್'ನ್ನು ತಿರುಗಿಸಿದೆ, ಮೊದಲಿದ್ದ ಪೋಲಿಸ್ ಹತ್ತಿರ ಬಂದು ಕೇಳಿದೆ. ಸರ್....ಮುಂದೆ ಯಾರಾದಾರೂ ನಿಂತಿದ್ದರೆ....? ಅದಕ್ಕೆ ಅವರು ಹೇಳಿದರು,
ಮುಂದೆ ಯಾರಾದಾರೂ ನಿಂತಿದ್ದರೆ , ಹಿಂದಿನವರಿಗೆ *ಜ್ಯೂಸ್* ಕುಡಿಸಿದ್ದೇನೆ ಅಂತ ಹೇಳಿ ಬಿಡು...
ಇವತ್ತು ನೋಡಿ.....ಮಜಾ.....ಬಂತು.
ದಿನವಿಡೀ ಮಾಸ್ಕ್ ಧರಿಸದೇ ತಿರುಗಿದ್ದೆ ತಿರುಗಿದ್ದು.
ಹಿಂದಿನವರಿಗೆ *ಜ್ಯೂಸ್* ಕುಡಿಸಿದ್ದೇನೆ ಅಂತ ಹೇಳಿದ್ದೇ ಹೇಳಿದ್ದು.
ಅವರೆಲ್ಲರೂ ನನ್ನ ಮಾತು ಕೇಳಿ ಮುಂದೆ ಬಿಟ್ಟದ್ದೇ ಬಿಟ್ಟದ್ದು. !!
ಮತ್ತೆ ತಪ್ಪಿನಿಂದಾಗಿ ನಿನ್ನೆಯಂತೆ ಇಂದೂ ಮಾಸ್ಕ್ ಮರೆತು ಮನೆಯಲ್ಲೇ ಬಿಟ್ಟು ಹೋದೆ.
ಪೋಲಿಸರನ್ನು ನೋಡುತ್ತಲೇ ನನಗೇನು ಹೆದರಿಕೆ ಆಗಲಿಲ್ಲ.
ನನಗೆ ಫಾರ್ಮುಲಾ ಗೊತ್ತಿತ್ತಲ್ಲ...
ಪೊಲೀಸ್ ನನ್ನ ಗಾಡಿ ನಿಲ್ಲಿಸಿದರು.
ನಾನು ಸ್ವಲ್ಪ ಜೋಶ್ ನಲ್ಲೇ ಅದೇ ಹಳೆಯ ಡೈಲಾಗ್'ನ್ನು ಹೇಳಿದೆ.
*ಹಿಂದಿನವರಿಗೆ ಜ್ಯೂಸ್ ಕುಡಿಸಿದ್ದೇನೆ*
ಪೋಲಿಸ್ ಸ್ವಲ್ಪ ಜೋರಾಗಿಯೇ ನಗಾಡಿದರು....
ಹೋಗು ಪೋಲಿಸ್ ವ್ಯಾನ್' ಲ್ಲಿ ಕುಳಿತುಕೋ ಮಗಾ ....ಅಂದರು.
*ಇವತ್ತಿನ ಕೊಡ್ ವರ್ಡ್. ಮಜ್ಜಿಗೆ*
(ಸಂಗ್ರಹ)