ಕನಕನ ಮಹಿಮೆ

ಕನಕನ ಮಹಿಮೆ

ಕವನ

( ಕುಸುಮ ಷಟ್ಪದಿ)

ಕನಕನಾ ಮಹಿಮೆಯಂ

ಕೊನೆತನಕ ಪೇಳುವೆನು

ಮನದಲ್ಲಿ ಕನಕನಾ ನೆನೆಯುತ್ತಲಿ

ಚಣದಲ್ಲಿ ಕೃಷ್ಣನನು

ವಿನಯದಲಿ ಕಾಣುತ್ತ

ದನಿಯಾಗಿ ಹಾಡಿದನು ಕೇಶವನಲಿ

 

ಹರಿಯನ್ನು ತನ್ನೆಡೆಗೆ

ಕರಮುಗಿದು ಸೆಳೆದಿಹನು

ಚರಣಕ್ಕೆ ಶಿರಬಾಗಿ ದೇಗುಲದಲಿ

ಧರೆಯಲ್ಲಿ ಪಾರ್ವರದು

ಕರಮುಗಿದು ಭಜಿಸಿಹರು

ದೊರೆಯಾದ ಕೇಶವನ ಪೂಜಿಸುತಲಿ

 

ಹರಿಯಿರದ ತಾಣವನು

ಶರವೇಗದೊಳು ಹುಡುಕಿ

ಹರಿಯನ್ನೊಲಿಸಿಕೊಂಡಿಹನು ಕನಕನು

ಹರಿಭಕ್ತಿ ಸಾರವನು

ಬರೆಯುತ್ತ ಕೃಷ್ಣನನು

ತಿರುಗಿಸಿದ ಕನಕನುಂ ಭಕ್ತಿಯಲ್ಲಿ

 

ಹಲವಿರುವ ಮತದಲ್ಲಿ

ಕುಲವನ್ನು ಹೇಳಿಹರು

ಛಲಬಿಡದ ಪಾರ್ವರದು ದೇಗುಲದಲಿ

ಜಲನೀರು ಮಾರುತಕೆ

ಕುಲವಿಲ್ಲ ನೋಡಲ್ಲಿ

ಕುಲಕುಲವೆನುತಲಿ ಹೋರಾಡುವರಲಿ

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್