ಅಂದದ ಕೈಗೆ ಬಣ್ಣದ ಬಳೆಗಳು

ಅಂದದ ಕೈಗೆ ಬಣ್ಣದ ಬಳೆಗಳು

ಕವನ

ನಾರಿಯ ಮೈಯಲಿ ಗರಿಗರಿ ಸೀರೆಯು

ಮಿರಮಿರ ಮಿಂಚಿದೆ ಮದುವೆಯಲಿ

ಪೋರಿಯ ಕೈಯಲಿ ಬಣ್ಣದ ಬಳೆಗಳು

ಮಿನುಗಿವೆ ಫಳಫಳ ಹೊಳೆಯುತಲಿ||

 

ಹಸಿರಿನ ಬಣ್ಣದ ಬಳೆಗಳು ಹೇಳಿವೆ ತವರಿನ ಹರ್ಷದ ನೆನೆಪುಗಳ

ಉಸಿರಿಗೆ ಉಸಿರಿನು ಕೊಡುತಿಹ ನಲ್ಲನ

ಭರವಸೆ ಹೃದಯದಿ ಛಾಪುಗಳು||

 

ಪಂಚಮಿ ಹಬ್ಬದ ಸುಂದರ ಕ್ಷಣಗಳು

ಉಕ್ಕುತ ಬರುತಿವೆ ಕಂಗಳಲಿ

ಸಂಚನು ಮಾಡದ ಬಾಲ್ಯದ ಸಖಿಯರ

ಸವಿನಯ ಮೈತ್ರಿಯು ಎದೆಯಲ್ಲಿ||

 

ಅಂದದ ಚೆಂದದ ಬಣ್ಣದ ಬಳೆಗಳು

ಮುತ್ತೈದೆ ಭಾಗ್ಯವು ಹೆಂಗಳಿಗೆ

ಮಂದಾರ ಪುಷ್ಪದ ಚೆಲುವದು ಹೊಮ್ಮಿದೆ

ಬಂಧನಗೊಳ್ಳುವ ಸುಮಂಗಳೆಗೆ||

 

*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್