ಎರಡು ಮೋಹಕ ಕವನಗಳು
ಹೆಣ್ಣು ಇವಳು ಕೋಟಿಗೊಬ್ಬಳು
ಹಂಸಿ ಇವಳು ಹೆಡಸುತದ ನೀರೆ
ಹೆಗಲಿಗೆ ಹೆಗಲುಕೊಟ್ಟು ನಡೆವ ಸೂರೆ
ಹಣಿವಿಲ್ಲದೆ ಮುನ್ನುಗ್ಗುವ ಧೀರೆ
ಹೊಮ್ಮನೊಳು ಮೆರೆವ ಶೂರೆ.!
- Read more about ಎರಡು ಮೋಹಕ ಕವನಗಳು
- Log in or register to post comments
ಹೆಣ್ಣು ಇವಳು ಕೋಟಿಗೊಬ್ಬಳು
ಹಂಸಿ ಇವಳು ಹೆಡಸುತದ ನೀರೆ
ಹೆಗಲಿಗೆ ಹೆಗಲುಕೊಟ್ಟು ನಡೆವ ಸೂರೆ
ಹಣಿವಿಲ್ಲದೆ ಮುನ್ನುಗ್ಗುವ ಧೀರೆ
ಹೊಮ್ಮನೊಳು ಮೆರೆವ ಶೂರೆ.!
ನಮ್ಮ ಸುತ್ತ ಮುತ್ತ ಇರುವ ಹಲವಾರು ಪಕ್ಷಿಗಳನ್ನು ನಾವು ದಿನಂಪ್ರತಿ ನೋಡುತ್ತಾ ಇರುತ್ತೇವೆ. ಕೆಲವೊಂದು ಹಕ್ಕಿಗಳನ್ನು ಟಿವಿಯಲ್ಲೂ, ಪುಸ್ತಕಗಳಲ್ಲೋ ನೋಡಿ ಆನಂದ ಪಡುತ್ತೇವೆ. ಪ್ರತಿಯೊಂದು ಹಕ್ಕಿಗೆ ಅದರದ್ದೇ ಆದ ವಿಶೇಷತೆ, ಬಣ್ಣ, ಆಕಾರ ಹಾಗೂ ಜೀವನ ಕ್ರಮ ಇದೆ. ಹಿಮಾಲಯದಲ್ಲಿ ಅಧಿಕವಾಗಿ ಕಂಡು ಬರುವ ಬ್ಲಾಕ್ ಬಾಝಾ ಅಥವಾ ಕಪ್ಪು ಬಾಝಾ ಹಕ್ಕಿಗಳೂ ತಮ್ಮ ತಲೆಯ ಮೇಲಿರುವ ವಿಶೇಷ ಜುಟ್ಟಿನ ಕಾರಣದಿಂದ ಖ್ಯಾತಿ ಪಡೆದಿದೆ. ಈ ಹಕ್ಕಿಗೆ ಕರಿಗ್ರದ್ಧ ಎಂದೂ ಕರೆಯುತ್ತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು ಅವಿಸೆಡಾ ಲಿಫೋಟೆಸ್ (Aviceda Liuphotes).
ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಂ/
ಮೌನಿನಃ ಕಲಹೋ ನಾಸ್ತಿ ನ ಭಯಂ ಜಾಸ್ತಿ ಜಾಗೃತಃ//
ಝೆನ್ ಗುರು ಮೊಕುಸೆನ್ ಬಳಿಗೆ ಅವನ ಅನುಯಾಯಿಯೊಬ್ಬ ಬಂದ. ತನ್ನ ಸಂಕಟಗಳನ್ನು ಹೇಳಿಕೊಂಡು, ಕೊನೆಗೆ ತನ್ನ ಮಡದಿಯ ಜಿಪುಣ ಬುದ್ಧಿಯ ಬಗ್ಗೆ ತಿಳಿಸಿದ.
ಮುಂದೊಂದು ದಿನ ಅವನ ಮನೆಗೆ ಗುರು ಮೊಕುಸೆನ್‌ನ ಆಗಮನ. ಅವನ ಪತ್ನಿಯೆದುರು ನಿಂತು, ತನ್ನ ಕೈಯನ್ನು ಅವಳ ಮುಖದೆದುರು ಎತ್ತಿ ಹಿಡಿದು ಮುಷ್ಟಿ ಬಿಗಿ ಮಾಡಿದ.
ಅವಳಿಗೆ ಗೊಂದಲ. ಕೆಲವು ಕ್ಷಣಗಳ ನಂತರ ಇದೇನೆಂದು ಅವಳು ಕೇಳಿದಾಗ, ಮೊಕುಸೆನ್‌ನ ಪ್ರಶ್ನೆ: "ನಾನು ಯಾವಾಗಲೂ ಹೀಗೇ ಮುಷ್ಟಿ ಬಿಗಿ ಹಿಡಿದಿದ್ದರೆ, ನೀನು ಏನನ್ನುತ್ತಿ?” ಅವಳ ಉತ್ತರ, “ಅದೊಂದು ವಿಕಲತೆ ಅಂತೇನೆ.”
ಸಾಲದ ಶೂಲವದು ಶಿರವನು
ತುಳಿಯುತಿದೆ ದೇವ|
ಹನುಮನ ಬಾಲದಂತೆ ಬಡ್ಡಿಯು
ಬೆಳೆಯುತಿದೆ ದೇವ||
ಬಿತ್ತಿದ ಕಾಳದು ನೀರುಕಾಣದೆ
ಸೂರಿ ಎಂಬ ಲೇಖಕನ ಕತೆಗಳನ್ನು ಓದುವುದೆಂದರೆ ಬಿಂಬನಿಗೆ ಪಂಚಪ್ರಾಣ. ಕಳೆದ ಒಂದು ದಶಕದಿಂದ ಸೂರಿ ಕತೆಗಳನ್ನು ಬರೆಯುತ್ತಲೇ ಇದ್ದಾರೆ. ಬಿಂಬ ಓದುತ್ತಲೇ ಇದ್ದಾನೆ. ಸೂರಿಯ ಯಾವ ಪುಸ್ತಕದಲ್ಲೂ ಅವರ ಭಾವಚಿತ್ರವಾಗಲೀ, ಅವರ ಬಗ್ಗೆ ಅಧಿಕ ಮಾಹಿತಿಯಾಗಲೀ ಇಲ್ಲ. ಬಿಂಬನಿಗೆ ತನ್ನ ಪ್ರೀತಿಯ ಕಥೆಗಾರನನ್ನು ನೋಡಬೇಕೆಂಬ ತವಕ. ಆದರೆ ಸೂರಿಯಿರುವುದು ಬೆಂಗಳೂರಿನಲ್ಲಿ. ಬಿಂಬನಿರುವುದು ಉಡುಪಿಯ ಯಾವುದೋ ಮೂಲೆಯ ಒಂದು ಹಳ್ಳಿಯಲ್ಲಿ. ಹೀಗಾಗಿ ಅವರ ಭೇಟಿ ಸಾಧ್ಯವೇ ಆಗುತ್ತಿಲ್ಲ. ಇದೊಂದು ಕಾಲ್ಪನಿಕ ಕಥನ. ಆದರೂ ನಿಜ ಜೀವನದಲ್ಲಿ ಬರಹಗಾರನಿಗೆ ಹಾಗೂ ಓದುಗನಿಗೆ ಭೇಟಿಯಾಗುವುದು ಕಷ್ಟ ಸಾಧ್ಯವೇ. ಬರಹಗಾರ ಖ್ಯಾತನಾಮರೋ, ಉತ್ತಮ ವಾಗ್ಮಿಯೋ ಆಗಿದ್ದರೆ ಯಾರಾದರೂ, ಯಾವತ್ತಾದರೂ ಕಾರ್ಯಕ್ರಮಗಳಿಗೆ ಕರೆದಾರು.
ಗುರಿ ಬೇಕು ನಡೆಯಲ್ಲಿ
ಗುರಿ ಬೇಕು ನುಡಿಯಲ್ಲಿ
ಛಲ ಬೇಕು ಸಾಧನೆಯ ವಿಜ್ಞಾನ ಯುಗದಲ್ಲಿ//
"ಎಲ್ಲಕಾಲಕ್ಕೂ ಬರುವ ಕಥೆಗಳು " - ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡಿದ್ದ ಪುಸ್ತಕ. ಈಗ archive.org ನಲ್ಲಿ ಸಿಕ್ಕೀತು. ಇದು ಮಕ್ಕಳಿಗಾಗಿ ನ್ಯಾಷನಲ್ ಬುಕ್ ಟ್ರಸ್ಟ್ ನವರು ಹೊರತಂದ ಪುಸ್ತಕ.
ಇದರಲ್ಲಿ ಖಾಂಡವ ದಹನ , ಬಕಾಸುರನ ವಧೆ , ಉಪಮನ್ಯುವಿನ ಕಥೆ , ಪರೀಕ್ಷಿತನ ಕಥೆ ಮತ್ತು ಸತ್ಯವಾನ ಸಾವಿತ್ರಿ ಕಥೆ ಇವೆ.
ಇಲ್ಲಿನ ಕಥೆಗಳ ವಿಶೇಷ ಹೀಗಿವೆ: -
೧೯ ಸಪ್ಟಂಬರ್ ೨೦೨೦ರಂದು “ಐಎನ್‌ಎಸ್ ವಿರಾಟ್” ಯುದ್ಧನೌಕೆ ಮುಂಬೈಯಿಂದ ಗುಜರಾತಿನ ಅಲಾಂಗಿಗೆ ತನ್ನ ಕೊನೆಯ ಸಮುದ್ರಯಾನ ಆರಂಭಿಸಿತು. ಭಾರತದ ಹೆಮ್ಮೆಯ ವಿಮಾನವಾಹಕ ಯುದ್ಧನೌಕೆಯಾಗಿದ್ದ ಐಎನ್‌ಎಸ್ ವಿರಾಟ್ ಮುಂಬೈ ಹಡಗುಕಟ್ಟೆಯಿಂದ ಹೊರಟಾಗ ಭಾರತದ ನೌಕಾಸೇನೆಯ ಅಧಿಕಾರಿಗಳು ಭಾವುಕ ವಿದಾಯ ಸಲ್ಲಿಸಿದರು.
ವಿಮರ್ಶೆ ಮತ್ತು ನಾವು
ವಿಮರ್ಶೆ ಮನುಷ್ಯನನ್ನು
ಬದುಕಿಸಲಿ ಸಾಯಿಸಬಾರದು
ಬರಹಗಾರರನ್ನು ಉತ್ತೇಜಿಸಲಿ
ಹೊರತು ಅಳಿಸಬಾರದು