ಒಂದು ಒಳ್ಳೆಯ ನುಡಿ (22) - ಸುಭಾಷಿತಗಳು

ಒಂದು ಒಳ್ಳೆಯ ನುಡಿ (22) - ಸುಭಾಷಿತಗಳು

ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇ/

ವಿಕ್ರಮಾರ್ಜಿತ ಸತ್ವ ಸ್ಯ ಸ್ವಯಮೇವ ಮೃಗೇಂದ್ರತಾ//

ಕಾಡಿನ ವಾಸಿಯಾದ ಸಿಂಹಕ್ಕೆ ಯಾರೂ ಸಂಸ್ಕಾರ ಮಾಡಿ ಪಟ್ಟ ಕಟ್ಟಿದ್ದಲ್ಲ. ತನ್ನ ಪರಾಕ್ರಮದಿಂದಲೇ ಅದು, ಪ್ರಾಣಿಗಳ ಬಳಗದಲ್ಲಿ ಗೆದ್ದು, ಬಲಿಷ್ಠವಾಗಿ, ಕಾಡಿನರಾಜ, ಮೃಗರಾಜ ಎಂದು ಗುರುತಿಸಲ್ಪಟ್ಟಿದೆ. ಈ ಬಿರುದು ಸ್ವತಃ ಸಿದ್ಧವಾಗಿ ಅದಕ್ಕೆ ಬಂದಿದೆ. ಮಹಾಪುರುಷರು ಸ್ವತಃ, ಸತ್ವಪೂರ್ಣವಾಗಿ, ಅರ್ಥವತ್ತಾಗಿ ತಿಳಿದವರಾಗಿರುವರು. ಒಬ್ಬ ಕವಿಯು ಮಹಾಮಹಿಮರ ಕುರಿತು ವರ್ಣಿಸುವಾಗ *ಸಿಂಹ*ದ ಸ್ವಪರಾಕ್ರಮದ ಬಗ್ಗೆಯೇ ಹೇಳುವನು. ಮಹಾಪುರುಷರಿಗೆ ಬೇರೆಯವರ ಸಹಕಾರವಾಗಲಿ, ಬಲವಾಗಲಿ ಬೇಡ. ಇನ್ನೊಬ್ಬರ ಮಧ್ಯಸ್ಥಿಕೆಯ ಅಗತ್ಯವಿಲ್ಲ. ಸ್ವಂತಿಕೆ ಎನ್ನುವುದು ಅವರ ಹುಟ್ಟುಗುಣ.

***

ವಜ್ರಾದಪಿ ಕಠೋರಾಣಿ  ಮೃದೂನಿ ಕುಸುಮಾದಪಿ/

ಲೋಕೋತ್ತರಾಣಾಂ ಚೇತಾಂಸಿ ಕೋಹಿವಿಜ್ಞಾತುಮರ್ಹತಿ//

ಸಜ್ಜನರ, ಒಳ್ಳೆಯವರ ಮನಸ್ಸು, ಒಂದೊಂದರಿ ಸಮಯ ಸಂದರ್ಭಕ್ಕೆ ಅನುಗುಣವಾಗಿ, ವಜ್ರಕ್ಕಿಂತಲೂ ಕಠಿಣ ಆವುತ್ತು. ಹಾಗೆ ಹೇಳಿಕೊಂಡು ಕೆಲವು ಸಂದರ್ಭದಲ್ಲಿ ಹೂವಿನ ಎಸಳಿನಷ್ಟು ಮೃದುತ್ವ, ಕೋಮಲತೆ ಆಗಲೂ ಸಾಕು. ಸಜ್ಜನಿಕೆ ಹೇಳುವುದು ಯಾವಾಗಲೂ ಪುಟಕ್ಕಿಟ್ಟ *ಚಿನ್ನ* ದ ಹಾಗೆ. ಅದು ಲೋಕೋತ್ತರ ಮತ್ತು ವಿಶಾಲವಾದ್ದು. 

(ಸಾರ ಸಂಗ್ರಹ) ರತ್ನಾ ಭಟ್ ತಲಂಜೇರಿ