ಒಂದು ಗಝಲ್ - ಬೆಳಕು!

ಒಂದು ಗಝಲ್ - ಬೆಳಕು!

ಕವನ

ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು

ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು

 

ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ

ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು

 

ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ

ನೊಂದ ಎದೆಯಲಿ ಗೆಲುವಿನ ರಂಗೋಲಿ ಬಿಡಿಸದೇ ಬೆಳಕು

 

ಮುಳ್ಳುಗಳ ದಾರಿಯನು ಮಾಡಿದವರ ಮೇಲೇಕೆ ಸೇಡು

ಕಲ್ಮಷದ ಕೊಳದಿಂದ ಮೇಲೆತ್ತಿ ಮುಕ್ತಿ ಕೊಡಿಸದೇ ಬೆಳಕು

 

ಕಾಲಹರಣವು ಸೋಲ ಸಾಲಾಗಿದೆ ಕೃಷ್ಣನಿಗಿದೆ ಅರಿವು

ಜ್ಞಾನದ ಕಾವಲಲಿ ಮೌಢ್ಯಕೆ ಬೇಡಿ ತೊಡಿಸದೇ ಬೆಳಕು

 

- *ಕಾ.ವೀ.ಕೃಷ್ಣದಾಸ್* ಕೊಂಚಾಡಿ

 

ಚಿತ್ರ್