ನಮ್ಮ ಹೆಮ್ಮೆಯ ಭಾರತ (15 - 16)

೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ.
ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು ಈಶಾನ್ಯ ರಾಜ್ಯಗಳ ಜನರ ಉಡುಪುಗಳಂತೂ ವರ್ಣಮಯ.

ಪ್ರತಿಯೊಬ್ಬನು ಧರಿಸುವ ಉಡುಪು ಆತನ/ ಆಕೆಯ ವಾಸಸ್ಥಳ, ಸ್ಥಳೀಯ ಪದ್ಧತಿ, ಹವಾಮಾನ ಮತ್ತು ಸಾಮಾಜಿಕ ಅಂತಸ್ತು ಅವಲಂಬಿಸಿ ಬದಲಾಗುತ್ತದೆ. ಭಾರತದ ಉದ್ದಗಲದಲ್ಲಿ ಮಹಿಳೆಯರು ಸೀರೆ ಧರಿಸುವುದು ಸಾಮಾನ್ಯ; ಆದರೆ ಅದನ್ನು ಉಡುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ!

Image

‘ಚಂದಮಾಮ' ಪುಸ್ತಕದ ಚಿತ್ರ ಕಲಾವಿದ ಶಂಕರ್ ನೆನಪಿದೆಯೇ?

ಚಂದಮಾಮ, ಬಾಲಮಿತ್ರ, ಬೊಂಬೆಮನೆ ಎಂಬ ಹೆಸರುಗಳನ್ನು ಕೇಳಿದ ಕೂಡಲೇ ನನ್ನಂತಹ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಚಲಿಸಲು ಶುರು ಮಾಡುತ್ತದೆ ಎಂಬುವುದು ಶೇಕಡಾ ನೂರಕ್ಕೆ ನೂರು ನಿಜ. ಕಳೆದ ಶತಮಾನದಲ್ಲಿ ಮಕ್ಕಳಾಗಿದ್ದ ಎಲ್ಲರ ಮೇಲೂ ಪ್ರಭಾವ ಬೀರಿದ ಮಕ್ಕಳ ಪುಸ್ತಕಗಳಲ್ಲಿ ಚಂದಮಾಮ ಒಂದು. ಆಗಿನ ಮದ್ರಾಸ್ (ಚೆನ್ನೈ) ನಿಂದ ಮುದ್ರಣಗೊಂಡು ಬರುತ್ತಿದ್ದ ಈ ಪುಸ್ತಕಕ್ಕೆ ಸಹಸ್ರಾರು ಓದುಗರಿದ್ದರು. ಸುಮಾರು ಹನ್ನೆರಡು ಭಾಷೆಯಲ್ಲಿ ಹೊರ ಬರುತ್ತಿದ್ದ ಚಂದಮಾಮ ಕನ್ನಡದಲ್ಲೂ ಪ್ರಕಟವಾಗುತ್ತಿತ್ತು. ನಾವೆಲ್ಲಾ ಸಣ್ಣವರಿರುವಾಗ ಮೊಬೈಲ್, ಇಂಟರ್ನೆಟ್ ಎಂಬ ಜಂಜಾಟವಿಲ್ಲದೇ ಚಂದಮಾಮದಂತಹ ಪುಸ್ತಕ ಓದುವುದರಲ್ಲೇ ಸಮಯ ಕಳೆಯುತ್ತಿದ್ದೆವು. 

Image

ಮಂಡೂಕ ಮಹಾರಾಜ

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ ಪುಸ್ತಕದ ಕಥೆಗಳೂ ಅವೇ ಸಾಲಿಗೆ ಸೇರುತ್ತವೆ. ಪುಟ್ಟ ಪುಟ್ಟ ಕಥೆಗಳು ಮಕ್ಕಳಿಗೆ ಓದಲೂ ಚೆನ್ನ, ಮಕ್ಕಳಿಗೆ ಕಥೆಯನ್ನು ಓದಿ ಹೇಳುವ ಹಿರಿಯರಿಗೂ ಅನುಕೂಲ.ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. 

ಅಭಿಜ್ಞಾ ಗೌಡರ ಕವನಗಳ ಲೋಕ

ಸ್ವೀಕೃತಿ

ಜಗದ ವೇದಿಕೆಯಲಿ ಜನನ ಹೊಂದಿ

ಮೊಗದಿ ಕಿಲಕಲ ನಗುವ ಬಿತ್ತರಿಸಿ

ಹಗೆತನ ಬಿಡುತಲಿ ಕೂಡುತ ಸ್ನೇಹದಿ 

ನಗು ನಗುತ ಎಲ್ಲರ ಒಂದಾಗಿಸಿ..

 

ಬಾಳಿಗೊಂದು ಚಿಂತನ - 2

ಸತ್ಯ, ನ್ಯಾಯ, ತ್ಯಾಗ, ಅಹಿಂಸೆ, ಸಹಕಾರ, ಮಾನವತೆ, ಆರ್ದ್ರತೆ ಇವೆಲ್ಲವುಗಳು ಮಾನವೀಯ ಮೌಲ್ಯಗಳ ಬೇರುಗಳು.ಒಂದು ತುಂಡಾದರೂ ಬದುಕು ದುರ್ಬಲ. ಬಹಳಷ್ಟು ಮಂದಿ ಆಸೆಗೆ ಬಲಿಬಿದ್ದು ಎಲ್ಲವನ್ನೂ ಕಳಕೊಂಡು ಬೀದಿಗೆ ಬೀಳುವುದು ನಾವು ಕಂಡಿದ್ದೇವೆ. ಆಸೆಯೇ ಇಲ್ಲದಿದ್ದರೆ ಆರಾಮ ಅಲ್ಲವೇ? ಒಳ್ಳೆಯ ಕೆಲಸಕ್ಕೆ ಹಣ ಬೇಕಾದರೆ ನೂರೆಂಟು ಸಬೂಬು, ಆಕ್ಷೇಪಣೆಯನ್ನು ಹೇಳುವುದಿದೆ.ತ್ಯಾಗಕ್ಕಿಂತ ಶ್ರೇಷ್ಠವಾದ ಯೋಗವಿಲ್ಲ. ಭೋಗ ಒಂದು ರೋಗವಿದ್ದಂತೆ.

Image

ಅಗಲಿದ ಸಾಹಿತಿ, ವಿಮರ್ಶಕ ಡಾ. ಜಿ.ಎಸ್. ಆಮೂರ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್ನು ಮೊದಲು ಪ್ರಾರಂಭಿಸಿದ್ದು ಆಂಗ್ಲ ಭಾಷೆಯಲ್ಲೇ. ಹಲವಾರು ಕನ್ನಡ ಲೇಖಕರಂತೆ ಆಮೂರರೂ ತಮ್ಮ ಸಾಹಿತ್ಯ ಕೃಷಿಯನ್ನು ಆಂಗ್ಲ ಭಾಷೆಯಲ್ಲಿ ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕನ್ನಡಕ್ಕೆ ಹೊರಳಿದರು. ಆಮೂರರ ವಿಮರ್ಶೆ ಎಂದರೆ ಅದೊಂದು ಪರಿಪೂರ್ಣ ವಿದ್ವತ್ ಪೂರ್ಣ ಲೇಖನದಂತೆ, ಗ್ರಂಥದಂತೆ ಭಾಸವಾಗುತ್ತಿತ್ತು. ಆಮೂರರು ಬದುಕಿನ ಕೊನೆಯ ದಿನಗಳಲ್ಲಿ ಸ್ವಲ್ಪ ಆಧ್ಯಾತ್ಮದತ್ತ ಹೊರಳಿದಂತೆ ತೋರುತ್ತಿತ್ತು.

Image

ಬಾಳಿಗೊಂದು ಚಿಂತನೆ

ನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾದನೆ, ಮೋಕ್ಷ ಸಾಧನೆಯ ಗುರಿಯನ್ನು ತಲುಪುತ್ತಾರೋ ಹಾಗೆ ನಮಗೆ ದಕ್ಕಿದೆ ಈ ಜನ್ಮ. ನಾವು ಮಾತ್ರ ಬೆಳೆದು ದೊಡ್ಡವರಾದಂತೆ ನಾನು, ನನ್ನದು, ಎಲ್ಲಾ ನನಗೇ ಇರುವುದು, ಅವ ನನಗೇನೂ ಅಲ್ಲ ಎಂಬ ಭಾವನೆಗಳನ್ನು ಮೈಗೂಡಿಸಿಕೊಂಡು ಕಣ್ಣಿದ್ದೂ ಕುರುಡರಾಗುತ್ತೇವೆ.

Image

ಶಂಕರಾನಂದ ಹೆಬ್ಬಾಳರ ಗಝಲ್ ಗಳ ಲೋಕ!

ಗಝಲ್-೧

ಜೀವನದ ನೌಕೆಯು ದೌರ್ಭಾಗ್ಯದಲಿ

ಸಾಗುತಲಿದೆ ದೇವರೆ|

ನೋವಿನೊಡಲ ಸುಮವದು ಕಿಚ್ಚಿನಲಿ

ಸುಡುತಲಿದೆ ದೇವರೆ||

 

ಕಣಿಲೆ ಮತ್ತು ಹಲಸಿನ ಬೀಜದ ಸುಕ್ಕ

Image

ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ ಕಡಿಮೆಯಾಗುತ್ತದೆ. ಹಲಸಿನ ಬೀಜಗಳನ್ನು ಸಣ್ಣದಾಗಿ ಕತ್ತರಿಸಿಟ್ಟು, ನಂತರ ಈ ಕತ್ತರಿಸಿದ ಕಣಿಲೆ ಮತ್ತು ಹಲಸಿನ ಬೀಜವನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ೨-೩ ಶೀಟಿ ಬೇಯಿಸಿದರೆ ಸಾಕು. 

ಬೇಕಿರುವ ಸಾಮಗ್ರಿ

ಕಣಿಲೆ ಅಥವಾ ಕಳಿಲೆ (ಎಳೆ ಬಿದಿರು) ೧ ಕಪ್, ಹಲಸಿನ ಬೀಜ ೭-೮, ತೆಂಗಿನ ತುರಿ - ಅರ್ಧ ಕಪ್, ಹುಣಸೆ ಹುಳಿ- ಸ್ವಲ್ಪ, ಹುರಿದ ಕೆಂಪು ಮೆಣಸು- ೭-೮, ಕೊತ್ತಂಬರಿ ೨ ಚಮಚ, ಮೆಂತೆ ಅರ್ಧ ಚಮಚ, ಉದ್ದಿನ ಬೇಳೆ ೨ ಚಮಚ. ರುಚಿಗೆ ಉಪ್ಪು, ಒಗ್ಗರಣೆಗೆ ಹರಿಬೇವಿನ ಸೊಪ್ಪು, ಸ್ವಲ್ಪ ಎಣ್ಣೆ ಹಾಗೂ ಸಾಸಿವೆ.