ಆಸರೆ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ. ಮ. ಸತೀಶ್, ಗೂಡಿನಬಳಿ
ಪ್ರಕಾಶಕರು
ಮಂಗಳ ಕಲಾ ಸಾಹಿತ್ಯ ವೇದಿಕೆ, ಗೂಡಿನಬಳಿ, ಬಂಟ್ವಾಳ
ಪುಸ್ತಕದ ಬೆಲೆ
ರೂ.35.00. ಮುದ್ರಣ: 1997

*ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*

 "ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ. ಅಮೃತ ಸೋಮೇಶ್ವರರ ಮುನ್ನುಡಿ ಮತ್ತು ಕವಿ, ಗಮಕಿ ಬೆಳ್ತಂಗಡಿಯ ಟಿ. ಸುಬ್ರಹ್ಮಣ್ಯ ಭಟ್ ಅವರ ಬೆನ್ನುಡಿ ಇದೆ.

ಬಾಳಿಗೊಂದು ಚಿಂತನೆ (4) - ಸಾಧನೆ

ಸಾಧನೆ ಎಂದರೆ ಸಾಧಿಸುವುದು, ತಕ್ಷಣ ನಾವು ಅಂದುಕೊಳ್ಳುತ್ತೇವೆ. ಇಲ್ಲಿ ಸಾಧನೆ ಅಂದರೆ ತಪಸ್ಸು, ಯಾವುದರ ಬಗ್ಗೆ ಚಿಂತನೆಯೋ ಅದರ ಉದ್ದಗಲದ ಪರಿಜ್ಞಾನ ನಮಗಿರಬೇಕು. ಹಿಂದಿನ ಋಷಿಮುನಿಗಳು ಕಠಿಣವಾದ, ಘೋರ ತಪವನ್ನಾಚರಿಸಿ ಸಾಧನೆ ಮಾಡಿದ್ದರು ನಾವು ಓದಿದ ವಿಷಯ. ಆದರೆ ಈಗಿನ ಕಾಲಘಟ್ಟದಲ್ಲಿ ಸಾಧನೆ- ಬರೇ ಶೂನ್ಯ ಅಂಥ ಒಮ್ಮೊಮ್ಮೆ ಅನಿಸುವುದುಂಟು.

Image

ಹಾ. ಮ. ಸತೀಶ್ ಅವರ ಗಝಲ್ ಮತ್ತು ಹನಿಗಳು

ಗಝಲ್

ಚೆಲುವಿರಲು ಮೊಗದೊಳಗೆ ವಿಷವು ಹೋಗದೇ ಇರಲಿ

ಬಲವಿರಲು ತನುವೊಳಗೆ ಶಕುತಿ ಬಾಗದೇ ಇರಲಿ

 

ಛಲವಿರಲು ಭವದೊಳಗೆ ಈಜಿ ನಡೆಯಲೀ ಹೀಗೆ 

ಕಸುವಿರಲು ಕನಸೊಳಗೆ ಪಯಣ ಸಾಗದೇ ಇರಲಿ

 

ನಲ್ಲೆಯ ಕೋಪ (ಚಂಪಕಮಾಲ ವೃತ್ತ)

ಹರಿಯುತ ಲಕ್ಷ್ಯವಂ  ತರುಣಿಯಂದದ

ನೋಟದಿ ಕಂಗಳಲ್ಲಿಯುಂ |

ಕರೆದೆನು ನಲ್ಲೆಯಂ ಪ್ರಣಯದಾಟಕೆ

ಮಂಚಕೆ ಕಾದನಲ್ಲಿಯೇ|

ಮರುಚಣದಲ್ಲಿಯೇ ಮುನಿಸುತಾಳಲು

ಝೆನ್ ಪ್ರಸಂಗ: ಹಗಲು ನಿದ್ದೆಯ ಅವಾಂತರ

ಝೆನ್ ಗುರು ಸೋಯೆನ್ ಶಕುವಿನ ಶಿಷ್ಯರು, ಬಿರು ಬೇಸಗೆಯಲ್ಲಿ ಕೆಲವೊಮ್ಮೆ ಸೆಕೆ ತಾಳಲಾಗದೆ ಹಗಲು ಹೊತ್ತಿನಲ್ಲೇ ನಿದ್ದೆ ಮಾಡುತ್ತಿದ್ದರು. ಸೋಯೆನ್ ಶಕು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಆತ ಮಾತ್ರ ದಿನವಿಡೀ ಸದಾ ಚಟುವಟಿಕೆಯಿಂದಿರುತ್ತಿದ್ದ. ಇದಕ್ಕೆ ಕಾರಣ ಆತ ಶಿಷ್ಯನಾಗಿದ್ದಾಗ ನಡೆದ ಒಂದು ಘಟನೆ.

ಆಗ ಸೊಯೇನ್ ಶಕುವಿಗೆ ಹನ್ನೆರಡರ ವಯಸ್ಸು. ಆತ “ತೆಂಡೆ" ತತ್ತ್ವಜ್ನಾನ ಕಲಿಯುತ್ತಿದ್ದ. ಅದೊಂದು ಬೇಸಗೆಯ ನಡುಹಗಲು. ಉರಿ ಬಿಸಿಲು. ದಣಿದಿದ್ದ ಸೋಯೆನ್ ಶಕುವಿಗೆ ತಂಪುಗಾಳಿ ಬೀಸಿದಾಗ ಮಂಪರು. ಆಶ್ರಮದ ಹೊಸ್ತಿಲಲ್ಲೇ ಮಲಗಿ ಬಿಟ್ಟ.

Image

ಕೊರೋನಾ : ಈಗ ನಾವು ಮಾಡಬಹುದಾದದ್ದು ಏನು ?

ಇಲ್ಲಿಂದ ಮುಂದೆ ಕೊರೋನಾ ಕಥೆ ಏನು ?

ಬದುಕು ಸಹಜತೆಯೆಡೆಗೆ ಸಾಗುತ್ತಿದೆ ಎಂದು ಭಾವಿಸಬೇಕೆ ?

ಇನ್ನೂ ಹೆಚ್ಚಾಗುತ್ತಿದೆ ಎಂದು ಆತಂಕ ಪಡಬೇಕೆ ?

ಲಸಿಕೆ ಬರುವವರೆಗೂ ಭಯದಲ್ಲೇ ಬದುಕಬೇಕೆ ?

Image

ಥಾಮಸ್ ಎಡಿಸನ್ ಅವರ ಉದಾತ್ತ ಚಿಂತನೆಗಳು

ಥಾಮಸ್ ಆಲ್ವ ಎಡಿಸನ್ ಯಾರಿಗೆ ಗೊತ್ತಿಲ್ಲ? ಎಡಿಸನ್ ಓರ್ವ ಅಮೇರಿಕಾದ ವಿಜ್ಞಾನಿ ಹಾಗೂ ಸಂಶೋಧಕ. ಅವರು ಹಲವಾರು ವಸ್ತುಗಳನ್ನು ಸಂಶೋಧಿಸಿದ ಖ್ಯಾತ ಅನ್ವೇಷಕ ಎಂದು ಹೆಸರುವಾಸಿ. ಎಡಿಸನ್ ೧೮೪೭ ರಿಂದ ೧೯೩೧ರ ಕಾಲಘಟ್ಟದಲ್ಲಿ ಬದುಕಿದ್ದರು. ಬಾಲ್ಯದ ಬಡತನದ ಜೀವನ, ದಡ್ಡ ಹುಡುಗ ಎಂಬೆಲ್ಲಾ ಕೀಳಿರಿಮೆಗಳಿಂದ ಹೊರಬಂದು ಅವರು ಗಳಿಸಿದ ಕೀರ್ತಿ ಸದಾ ಅನುಕರಣೀಯ. ಅವರ ಬಾಳಿನ ಎರಡು ಘಟನೆಗಳನ್ನು ಇಲ್ಲಿ ಬರೆಯುತ್ತಿರುವೆ. ಅದರಿಂದ ಎಡಿಸನ್ ಅವರ ವ್ಯಕ್ತಿತ್ವ ಎಂಥದ್ದು ಎಂದು ಅರ್ಥವಾಗುತ್ತದೆ.

Image

ಒಂದು ಒಳ್ಳೆಯ ನುಡಿ (8) - ಕೃತಜ್ಞತೆ ಹಾಗೂ ಕೃತಘ್ನತೆ

ನಾವು ಮಾಡಿದ ಯಾವುದೇ ಉತ್ತಮ ಕೆಲಸಕ್ಕೆ ಸಾಧನೆಗೆ ಅಭಿನಂದನೆಗಳು ಹೇಳುತ್ತೇವೆ. ಗಳಿಸಿದಾಗ, ಅದನ್ನು ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳು, ನಮನಗಳು, ವಂದನೆಗಳು, ಧನ್ಯವಾದಗಳು ಹೀಗೆ ಬೇರೆ ಬೇರೆ ಪದಗಳಿಂದ ಉಪಕಾರ ಸ್ಮರಣೆ ಮಾಡುತ್ತೇವೆ. ಕೆಲವರ ಮನೋಭಾವ ತೆಗೆದುಕೊಳ್ಳುವವರೆಗೆ ಮಾತ್ರ, ಸಿಕ್ಕಿದ ಮೇಲೆ ಒಂದು ಕೃತಜ್ಞತೆ ಸಹ ಹೇಳುವ ಅಭ್ಯಾಸವಿಲ್ಲ. ಇದನ್ನೇ ಕೃತಘ್ನತೆ ಹೇಳಬಹುದು. ಮಾಡಿದ ಉಪಕಾರ ಸ್ಮರಣೆ ಇಲ್ಲದವರೇ ಕೃತಘ್ನತೆಯನ್ನು ಹೊಂದಿದವರು.

Image

ಡಾ. ಎಂ. ಎಸ್. ವಿಜಯಾ ಹರನ್ ರವರು ಸಂಪಾದಿಸಿ ಹೊರತಂದ ಪುಸ್ತಕ, 'ನಮ್ಮ ಭೈರಪ್ಪನವರು' !

ಇದುವರೆಗೆ ನಡೆದುಬಂದ ಈ ಕವಿವರ್ಯರ ಜೀವನದಲ್ಲಿ ಅದೆಷ್ಟು ಅಮೂಲ್ಯ ಘಟ್ಟಗಳಿವೆ ? ಕನ್ನಡದ  ಸಾಮಾನ್ಯ ಬಡಕುಟುಂಬವನ್ನು ಪ್ರತಿನಿಧಿಸುವ ಇವರು ತಮ್ಮ ಪ್ರಾರಂಭಿಕ ಜೀವನದಲ್ಲೇ ತಂದೆ ತಾಯಿ ತಮ್ಮ ಎಲ್ಲರನ್ನು ಕಳೆದುಕೊಂಡು ಒಬ್ಬ ಅನಾಥರಂತೆ ಜೀವನದ ದಾರಿಯಲ್ಲಿ ಒಬ್ಬರೇ ಸಾಗುತ್ತಾರೆ. ಧರ್ಯ, ಜೀವನಪ್ರೀತಿ ಮತ್ತು ಎಲ್ಲವನ್ನೂ ತನಗೆ ತಾನೇ ಗ್ರಹಿಸಿ ತಿಳಿದುಕೊಳ್ಳುವ ಪರಿ ಅವರ ಜೀವನವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಇಂಗ್ಲಿಷ್ ಶಿಕ್ಷಕ. ಆರಿಸಿಕೊಂಡ ವಿಷಯ : ಫಿಲೊಸೊಫಿ. ಆದರೆ ಅವರು ಮಾಡಿದ ಕೃಷಿ ಕನ್ನಡ ಕಾದಂಬರಿಗಳನ್ನು ರಚಿಸುವುದರ ಮೂಲಕ. ಬರೆದ ೨೪ ಕಾದಂಬರಿಗಳೂ ಅವರ ಜೀವನದ ಅನುಭವದ ಕ್ಷಣಗಳನ್ನು ಹರಳುಗಟ್ಟಿಸಿ ಹೆಣೆದ ದಿವ್ಯ ವಸ್ತ್ರಗಳು. 

ಶಂಕರಾನಂದ ಹೆಬ್ಬಾಳರ ಕವನ - ಶಂಕರನ ನೃತ್ಯವಿನೋದ

ಶಂಕರ ನಾಟ್ಯದಿಂ ಚಣದಿ ನೋಡುತ ನಿಲ್ಲಲು ಪುಣ್ಯವನ್ನಲಿಂ|

ತೆಂಕಣಗಾಳಿಯಂ ಬರುತ ಬೀಸಿದೆ ಜೋರಲಿ

ಸಿಗ್ಗವನ್ನಲಿಂ|

ಕಿಂಕರ ಸೇವೆಗಿಂ ನಿರತನಾಗಿಹ ದೇವನು

ಬಂದನಂ ಶಿವಂ|