ನಲ್ಲೆಯ ಕೋಪ (ಚಂಪಕಮಾಲ ವೃತ್ತ)

ನಲ್ಲೆಯ ಕೋಪ (ಚಂಪಕಮಾಲ ವೃತ್ತ)

ಕವನ

ಹರಿಯುತ ಲಕ್ಷ್ಯವಂ  ತರುಣಿಯಂದದ

ನೋಟದಿ ಕಂಗಳಲ್ಲಿಯುಂ |

ಕರೆದೆನು ನಲ್ಲೆಯಂ ಪ್ರಣಯದಾಟಕೆ

ಮಂಚಕೆ ಕಾದನಲ್ಲಿಯೇ|

ಮರುಚಣದಲ್ಲಿಯೇ ಮುನಿಸುತಾಳಲು

ಕಾಂತೆಗೆ ನೋಳ್ಪ ತಾನಲ್ಲೀ|

ಭರದಲಿ ಭಾರ್ಯೆಗಿಂ ಸರಳಮಾರ್ಗದಿ

ಸಿಗ್ಗಿನ ತಾಪವನ್ನಲಿಂ||

 

ಜರೆಯುತ ನಲ್ಲ ಮಾತಿನಲಿ ಕೋಪದ

ಧಾಟಿಯ ಕೇಳುತಲ್ಲಿಯೇ|

ಬೆರೆಯದ ಭಾವವಂ ಮನದೊಳಲ್ಲಿಯೆ

ಕೇಳುತ ಪೋದನಲ್ಲಿಯೇ|

ಮರೆಯದ ನಾರಿಯನ್ನೊಲಿಸುವಂ

ಪರಿಯಿಂದಲಿ ಕಾಣು ತೋಷದಿಂ|

ಸೆರೆಯಲಿ ಸಿಲ್ಕುತ ಪ್ರಣಯ ಕಾಣದೆ

ನೋವದು ತುಂಬಿ ತಾನದುಂ||

 

ಮರುಗಿದ ತನ್ನಯಂ ಮನದ ಬೇಗುದಿ

ಕಾಡಿದೆ ಬೆಂದ ನೀರಲಿಂ|

ತರುಣಿಯ ತೋಳನಪ್ಪಲಲಿ ಕಾದಿಹೆ

ತಾಳಿದ ನೋಳ್ಪವನ್ನೆಗಂ|

ವಿರಹವ ತಾಳ್ವೆನುಂ ಸುಮದ ಸುಂದರಿ

ಯೊಲ್ಮೆಗೆ ತಾಳುತಾನಲೀ|

ತೆರೆಯುತ ಬಾಗಿಲಂ ಖುಷಿಯ ಭಾವದಿ

ಕಾಣುತ ನೋಡುವಂದದೀ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್