ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು
ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ ಕೃಷಿಗೆ ಆಧಾರ.
ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು ಅವಲಂಬಿಸಿರಲಿಲ್ಲ. ಆದರೆ ಈಗ ಇದುವೇ ಕೃಷಿ ನೀರಾವರಿಯ ಮೊದಲ ಆಕರವಾಗಿದೆ.
೧೯೭೦ರ ದಶಕದ ವರೆಗೆ ಹಲವು ರಾಜ್ಯಗಳಲ್ಲಿ ಕೆರೆಗಳೇ ಕೃಷಿ ನೀರಾವರಿಯ ಆಕರಗಳಾಗಿದ್ದವು. ಕ್ರಮೇಣ, ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣವೇ ಪ್ರಧಾನವಾಯಿತು ಮತ್ತು ಕೆರೆ ನೀರಾವರಿಯಂತಹ ಸಣ್ಣ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಲಾಯಿತು.
- Read more about ಪಾರಂಪರಿಕ ಕೆರೆಗಳು: ನೀರಾವರಿ ಮತ್ತು ಕುಡಿನೀರಿನ ಆಕರಗಳು
- Log in or register to post comments