ಸಮರ

Submitted by prakashajjampur on Tue, 12/10/2019 - 19:27

ದೇಹಕ್ಕೆ ನಾಟಿದ ಬಾಣಗಳನೆಲ್ಲ, ನೋವಿನ ಮಧ್ಯೆಯೇ ಕಿತ್ತು ಹಾಕ್ಕುತ್ತಿದ್ದೇನೆ, ಒಂದೊಂದು ಬಾಣದ ಹಿಂದೆ ಒಂದೊಂದು ಕಥೆ, 
ಬಾಣಗಳ್ಳನ್ನು ಎಣಿಸೋ ಕೆಲಸನೇ ಇಲ್ಲ, ಮತ್ತೆ ಬೀಳದಂತೆ ತಪ್ಪಿಸಿಕೊಳ್ಳಬೇಕು, ಇನ್ನು ಹಂಚಿಕೊಳ್ಳೋದೆಲ್ಲಿ ವ್ಯಥೆ?, 
ಸಮಯ ಒಮ್ಮೆ ನಿಮ್ಮ ವಿರುದ್ಧ ಯುದ್ಧ ಸಾರಿದರೆ, ಕರುಣೆ ಇಲ್ಲದ ಕಟುಕನಂತೆ ಬಾಣ, ಹೂಡತಾನೆ ಇರುತ್ತೆ, 
ಯಾರ ಹತ್ರ ಸಹಾಯ ಕೇಳೋದು?, ಯಾರ ಹತ್ರ ಶರಣು ಬೇಡೋದು, ಈ ಯುದ್ಧ ಜಗತ್ತಿಗೆ, ನೀವೆಂತಾ ಕ್ಷತ್ರಿಯ ಅಂತ ಸಾರುತ್ತೆ, 
ಒಂದೊಂದು ಬಾಣವೂ ಒಂದೊಂದು ಅನುಭವ ಕಲಿಸಿ ಹೋಗುತ್ತೆ, ಕೊನೆಗೆ ಇದು ಯುದ್ದನಾ ಅನ್ನೋದನ್ನ ಮರೆಸುತ್ತೆ,
ವಿಧಿ ಬಾಳಿನ ರಂಗಮಂದಿರದಲ್ಲಿ ಖಳನಾಯಕನ ಪಾತ್ರ ವಹಿಸಿದಂತೆ ತೋರುತ್ತೆ, ಆದರೆ ಅಸಲಿ ಅದು ನಿಮ್ಮ ಪಾತ್ರಕ್ಕೆ ಜೀವ ತುಂಬುತ್ತೆ, 

ಜೈವಿಕ ವೈವಿಧ್ಯ ರಕ್ಷಕರಿಗೆ ಲಾಭದ ಪಾಲು ನೀಡಿಕೆ ಕಡ್ಡಾಯ

Submitted by addoor on Sat, 12/07/2019 - 22:38

ಬೇಸಗೆ ಮತ್ತು ಚಳಿಗಾಲಗಳಲ್ಲಿ ಮಹಾರಾಷ್ಟ್ರದ ಮೇಲ್‍ಘಾಟ್ ಹತ್ತಿರ ವಾಸ ಮಾಡುವ ಕೊರ್ಕು ಬುಡಕಟ್ಟಿನ ಜನರು ಬಲೆಯಿಂದ ಆವರಿಸಿದ ಹತ್ತಿ ಬಟ್ಟೆಯ ಉಡುಪು ಧರಿಸಿ ಕಾಡಿಗೆ ಹೊರಡುತ್ತಾರೆ.

Image

ನಮಸ್ಕಾರ, ೬ ವರ್ಷಗಳ ನಂತರ

Submitted by prasca on Sat, 12/07/2019 - 21:05

ನಮಸ್ಕಾರ, ೬ ವರ್ಷಗಳ ನಂತರ ಸಂಪದಕ್ಕೆ ಭೇಟಿ ಇತ್ತೆ. ನನ್ನ ಸಾಮಾಜಿಕ ಜಾಲತಾಣದ ಪರಿಚಯ ಆರಂಭವಾಗಿದ್ದೆ ಸಂಪದದಿಂದ. ಶರಂಪರ ಕಿತ್ತಾಟಗಳು ಫೇಸ್ಬುಕ್ ಪ್ರಪಂಚಕ್ಕೆ ಸ್ಥಳಾಂತರವಾದ ನಂತರ ಈ ಕಡೆಗೆ ಬರುವುದೆ ನಿಂತೋಯ್ತು. ಈಗ್ಯಾಕೊ ನೆನಪಾಯ್ತು, ಹಾಗೆ ಬಂದೆ. ಹೇಗಿದ್ದೀರಿ ಎಲ್ರೂ? ಆರಾಮ?

ಶಾಲಾ ಮಕ್ಕಳ ದಿನಚರಿ

Submitted by Omprasad K V on Fri, 12/06/2019 - 12:10

ಚುಮುಚುಮು ಚಳಿಯಲಿ

ಹೊದ್ದಿಗೆ-ಶಾಲು ಚೀಲ ಕೈಯಲಿ,

ಕುರುಕುಲು ಇರಲು ಬಾಯಲಿ...

 

ಮುಂಜಾನೆಯ ಮಂಜಲಿ,

ಬೆಚ್ಚಗೆ ಹೊರಟರು ಭರದಲಿ

ಪಾಠವ ಕಲಿತರು ಶಾಲೆಯಲಿ....

 

ಬಿಡುವಿನ ಅಂತರ ವೇಳೆಯಲಿ

ಆಟಿಕೆ ಗೆಳೆಯರ ಜೊತೆಯಲಿ

ನೋಟವ ಸವಿದರು ಬಯಲಲಿ....

 

ಸಂಜೆಗೆ ಮರಳುವ ದಾರಿಯಲಿ

ಸ್ನೇಹಿತರೊಂದಿಗೆ ಹರಟೆಯಲಿ,

ಮನೆಯ ತಲುಪಿ ದಣಿವಿನಲಿ....

 

ಬಡವರಿಗೆ ಕೊಳವೆಬಾವಿ ನೀರು ದಕ್ಕಲಿಲ್ಲ

Submitted by addoor on Tue, 12/03/2019 - 15:10

ಊರು ರಾಣಿಬೆನ್ನೂರು. ಅಲ್ಲಿಂದ ಸುಮಾರು ೧೦ ಕಿಮೀ ದೂರದ ಒಂದು ಹಳ್ಳಿ. ಅಲ್ಲಿನ ೨೦ ಕಡು ಬಡತನದ ಕುಟುಂಬಗಳಿಗೆ ಸರಕಾರ ತಲಾ ಒಂದೆಕ್ರೆ ಜಮೀನು ನೀಡಿತು. ಅವರೆಲ್ಲ ಪರಿಶಿಷ್ಟ ವರ್ಗದವರು.

ಕೇವಲ ಜಮೀನು ನೀಡಿದರೆ ಅವರ ಉದ್ಧಾರ ಆಗದು ತಾನೇ? ಅದಕ್ಕಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಕಾರ ಹಣ ಸಹಾಯದ ಯೋಜನೆ ರೂಪಿಸಲಾಯಿತು: ಬ್ಯಾಂಕಿನಿಂದ ಶೇಕಡಾ ೪ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಮತ್ತು ಗುಂಪಿಗೆ ಸಾಲ ನೀಡುವ ಕಾರಣ ಯೋಜನಾ ವೆಚ್ಚದ ಶೇಕಡಾ ೫೦ ಸಹಾಯಧನ. ಇದು ’ವ್ಯತ್ಯಾಸ ಬಡ್ಡಿ ದರ’ (ಡಿ.ಆರ್. ಐ.) ಸಾಲವಾದ್ದರಿಂದ ಸಾಲಕ್ಕೆ ಚಕ್ರಬಡ್ಡಿ ವಿಧಿಸುವಂತಿಲ್ಲ ಹಾಗೂ ಸೊತ್ತುಗಳ ವಿಮೆಯ ವೆಚ್ಚವನ್ನು ಬ್ಯಾಂಕ್ ಭರಿಸತಕ್ಕದ್ದು.

Image

ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ

Submitted by addoor on Sat, 11/30/2019 - 22:30

೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ ಎಂಬುದನ್ನು ತಿಳಿಯಲು ಯಾವುದೇ ಸಂಶೋಧನೆ ಅಗತ್ಯವಿಲ್ಲ.
ಈ ಸಂದರ್ಭದಲ್ಲಿ, ಐದಾರು ದಶಕಗಳ ಮುಂಚೆಯೇ ಹಿಮಾಲಯ ಪರ್ವತ ಶ್ರೇಣಿಯ ಉದ್ದಕ್ಕೂ ಸುಂದರಲಾಲ್ ಬಹುಗುಣ “ಚಿಪ್ಕೋ” (ಮರಗಳನ್ನು ರಕ್ಷಿಸಲಿಕ್ಕಾಗಿ ಅಪ್ಪಿಕೋ) ಆಂದೋಲನದ ಮೂಲಕ ಅರಣ್ಯ ರಕ್ಷಣೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದು ಅಗತ್ಯ.

Image

ಜಲಜಾಗೃತಿಗೆ ಹಳ್ಳಿಗೊಬ್ಬ ಸಾಕು

Submitted by addoor on Fri, 11/29/2019 - 22:29

"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.

Image

ಮೌನ ಮೀರಲಿಲ್ಲ!

Submitted by rajeevkc on Fri, 11/29/2019 - 13:18

ಕಡಲಾಳದಂತಿರುವ ಬಡತನದ ಬವಣೆಯಲಿ,
ಈಜಲೆಂದು ದೂಡಿದೆ ನೀನು.
ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ |
ಬಡತನದ ಬೇಗೆಯನು ಸಹಿಸುತಲಿ,
ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು.
ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ |

ಜೀವನ ಯಾನದ ಪ್ರತಿಹಂತದಲು,
ದುಃಖದ ಬಾಣಗಳ ಮಳೆಗರೆದೆ ನೀನು.
ನಾ ದೂಷಿಸಲಿಲ್ಲ| ಮೌನವ ಮೀರಲಿಲ್ಲ |
ನೋವುಗಳ ನುಂಗುತಲಿ, ಮುಂಬರುವ
ನಲಿವುಗಳ ನೆನೆಯುತಲಿ, ಯಾನವ ಬೆಳೆಸಿದೆ ನಾನು.
ನಾ ಹೆದರಲಿಲ್ಲ| ದುಃಖದ ಬಾಣಗಳ ಇರಿತಕ್ಕೆ, ನಾ ಮಣಿಯಲಿಲ್ಲ |

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

Submitted by Na. Karantha Peraje on Thu, 11/28/2019 - 11:54

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತೆನೆಗಳನ್ನು ತಂದು ನಮ್ಮ ಮನೆಯನ್ನು ತುಂಬಿಸಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ. ಯೋಚಿಸಿ ನೋಡಿ, ಇದರಲ್ಲಿ ನಿಜವಾಗಿಯೂ ಖುಷಿ ಇದೆಯಾ? ಬದಲಿಗೆ ಮನೆ ತುಂಬಿಸಲೆಂದೇ ಅಂಗಳದ ಬದಿಯಲ್ಲಿ ಸ್ವಲ್ಪ ಭತ್ತ ಬೆಳೆಯಿರಿ,” ಎನ್ನುವ ಕಿವಿಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಅಮೈ ದೇವರಾವ್ ಹೇಳುತ್ತಾರೆ. ಇವರಲ್ಲಿ ನೂರೈವತ್ತು ಭತ್ತದ ತಳಿಗಳು ಸಂರಕ್ಷಣೆಯಾಗತ್ತಿವೆ.

Image

ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ

Submitted by addoor on Wed, 11/27/2019 - 22:55

ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ ೧೫೦ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ ೨೦೧೯ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.

Image