ಕರಾವಳಿಯಲ್ಲಿ ಯುಗಾದಿ

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ)

ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.

ಇಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.

Image

ಸಖಿ-2050

ಹೊಸತಾಗಿ ಒಂದು Fitness Band ತಗೊಂಡೆ. ಏನು ಟೆಕ್ನಾಲಜಿ ಸ್ವಾಮಿ ಅದು. ನಾನೆಷ್ಟು ನಡೆದಿದ್ದೇನೆ, ಎಷ್ಟು ವ್ಯಾಯಾಮ ಮಾಡಿದ್ದೇನೆ, ಎಷ್ಟು ಹೊತ್ತು ಮಲಗಿದೆ, ಯಾವಾಗ ಮಲಗಿದೆ,  ಯಾವಾಗ ಎದ್ದೆ, ನನ್ನ ಹೃದಯ ಬಡಿತ ಎಷ್ಟು ಎಲ್ಲವನ್ನು ನನ್ನ ಹೆಂಡತಿಗಿಂತ ಜಾಸ್ತಿ ನೆನಪಿಟ್ಟುಕೊಳ್ಳತ್ತೆ. ಸ್ವಲ್ಪ ದಿನ ಉಪಯೋಗಿಸಿದ ನಂತರ ಹೊಳೆದಿದ್ದು ಈ ಲೇಖನ. ಇಲ್ಲಿರುವ ಪಾತ್ರಗಳು ಮತ್ತು ನಿರ್ಜೀವ ಪಾತ್ರಗಳು (!!!) ಕೇವಲ ಕಾಲ್ಪನಿಕ. ಅವುಗಳ ವರ್ತನೆಗಳು ಕೂಡ ಕಾಲ್ಪನಿಕಾನೇ, ಹಾಗೇನೇ ಸ್ವಲ್ಪ ಮಸಾಲೆ ಬೆರೆಸಿ ಅರೆದಿದ್ದೇನೆ.   ಇನ್ನು ಸ್ಮಾರ್ಟ್ ಅಸಿಸ್ಟೆಂಟ್ ಗೆ SIRI/ALEXA  ಅಂತೆಲ್ಲ ದಿಗ್ಗಜರುಗಳು  ಹೆಸರಿಟ್ಟರೆ ನಾನು ನನ್ನ ಸ್ಮಾರ್ಟ್ ಅಸಿಸ್ಟೆಂಟ್ ರೋಬೋಗೆ "ಸಖಿ" (ಅಚ್ಚ ಕನ್ನಡದ   ಹೆಸರು) ಅಂತ ನಾಮಕರಣ ಮಾಡಿದ್ದೇನೆ .

ರಾಮ ಬರುವನಿಂದು!

ಇಂದೇಕೆ ಹೂವೇ
ನಿನ್ನ ನಗುವು ಉಮ್ಮಳಿಸಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ಗಾಳಿಯಲಿಂದೇಕೆ
ಸುಗಂಧ ಪಸರಿಸಿದೆ ಹೆಚ್ಚಾಗಿ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ಇಂದೇಕೆ ಮನವರಳಿದೆ
ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ವರುಷಗಳು ಕಾದಿಹೆನು
ಅವನ ಕಾಣ್ವ ಭರವಸೆಯು ಹೆಚ್ಚಾಗಿದೆ
ರಾಮ ಬರುವೆನೆಂದು! ರಾಮ ಬರುವೆನೆಂದು!

ಕಾದಿಹೆನು ಪೂಜೆಗೆ ಅನವರತ
ಕಾತರವಿದೆ ಅವನ ಬರುವಿಕೆಗೆ
ರಾಮ ಬರುವನಿಂದು! ರಾಮ ಬರುವನಿಂದು!

ರಾಮನಿಗೆ ಶಬರಿಯ ಕಾಣ್ವ ತವಕ

ಎಂದು ಕಾಂಬೆನೋ!
ಲಕ್ಷ್ಮಣಾ
ಆ ಮಾತೃ ಹೃದಯಿಯಾ!
ಎಂದು ಕಾಂಬೆನೋ!।।

ಅವಳ ಹೆಸರು ಶಬರಿಯಂತೆ
ಮಾತಂಗ ಮುನಿಯ ಶಿಷ್ಯಳಂತೆ
ಈ ರಾಮನ ಕಾಣ್ವ ತವಕವಂತೆ ।।

ಆಶ್ರಮದಿ ಅವಳು ತಾಪಸಿಯಂತೆ
ಮಮತೆಯಲಿ ಅವಳು ತಾಯಿಯಂತೆ
ರಾಮನಾಮವೇ ಅವಳ ಉಸಿರಂತೆ ।।

ಹಲವು ಬಗೆಯ ಹೂಗಳ ಕೊಯ್ವಳಂತೆ
ಕಚ್ಚಿ ರುಚಿ ರುಚಿ ಹಣ್ಣುಗಳ ಇಟ್ಟಿಹಳಂತೆ
ಈ ರಾಮನ ದಾರಿಯನೇ ನೋಡ್ವಳಂತೆ ।।

ಈ ರಾಮನ ನೋಡಲು ಕಾತುರವಂತೆ
ಈ ರಾಮನ ಪೂಜಿಸಲು ಕಾದಿಹಳಂತೆ
ಹನುಮನ ಕಡೆ ದಾರಿ ತೋರ್ವಳಂತೆ ।।

ಅಪರಾಧ ಮತ್ತು ದಂಡನೆ

(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.

ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.

Image

ಪುಟ್ಟ ಆಮೆಗೊಂದು ಉದ್ಯೋಗ

ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ.

ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾಕಲು ಕಾಂಗರೂ ಕೂಡ ಕಾದಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ  ಇಬ್ಬರಿಗೂ ಒಂದೊಂದು ಹಸುರು ಟೊಪ್ಪಿ ಕೊಟ್ಟರು. ಪುಟ್ಟ ಆಮೆಯದು ಪುಟ್ಟ ತಲೆ. ಹಾಗಾಗಿ ಅದಕ್ಕೆ ಪುಟ್ಟ ಟೊಪ್ಪಿ - ಅರ್ಧ ಸೇಬು ಹಣ್ಣಿನ ಗಾತ್ರದ್ದು. ಹಸುರು ಟೊಪ್ಪಿ ತಲೆಗಿಟ್ಟ ಪುಟ್ಟ ಆಮೆ ಚಂದ ಕಂಡಿತು.

Image

ಬೀಜ ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ

“ಬಾ, ಬೇಗ ಬಾ, ಒಮ್ಮೆ ಈ ಮಣ್ಣು ನೋಡು” ಎಂದು ಮಡದಿ ಎರ್ರಮ್ಮನನ್ನು ಕೂಗಿ ಕರೆದ ಎನಿಮಲ ಗೋಪಾಲ. ಉರಿಬಿಸಿಲನ್ನೂ ಲೆಕ್ಕಿಸದೆ, ಇನ್ನೊಂದು ಮಾವಿನ ಗಿಡದ ಹತ್ತಿರ ಓಡಿ ಹೋಗಿ, ಅದರ ಬುಡದಿಂದ ಒಂದು ಮುಷ್ಠಿ ಒದ್ದೆ ಮಣ್ಣನ್ನೆತ್ತಿ ಎರ್ರಮ್ಮನಿಗೆ ತೋರಿಸಿದ. ಅವನ ಕಣ್ಣುಗಳಲ್ಲಿ ಅಚ್ಚರಿ, ಧ್ವನಿಯಲ್ಲಿ ರೋಮಾಂಚನ. ಯಾಕೆಂದರೆ ತಾನೊಂದು ಹಣ್ಣಿನ ತೋಟ ಮಾಡಿ, ಸಸಿಗಳಿಗೆ ನೀರು ಹಾಯಿಸುತ್ತೇನೆಂದು ಕನಸಿನಲ್ಲೂ ಕಲ್ಪಿಸಿರದ ಗೋಪಾಲನ ಬರಡು ಜಮೀನಿನಲ್ಲಿ ಇಂದು ನಳನಳಿಸುತ್ತಿವೆ ೧೬೦ ಮಾವಿನ ಸಸಿಗಳು.

Image

ಗುಬ್ಬಿ

ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು

ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು

ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು

ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು

ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು

ಚೀಂವ್ ಚೀಂವ್ ಕೂಗಿ ಕೂಗಿ ಹರಟೆಹೊಡೆಯಿತು.

ನೂರು ಬಾರಿ ಇಟ್ಟು ಅಳಿಸಿ ಬರಹ ತಿದ್ದಿತು

ಕಾಡು ಕಲಿಸಿಕೊಟ್ಟ ಕಲಿಕೆ ಮಂತ್ರವಾಯಿತು.

ಬದುಕ ಬರಹ ಕಲಿತ ಗುಬ್ಬಿ ಗೂಡು ಕಟ್ಟಿತು

ಗೂಡಿನೊಳಗೆ ಅಂದದೆರಡು ಕವಿತೆ ಬರೆಯಿತು

ಕಾಲ ಬೆಳೆದು ದೇವನೊಲಿದು ಜೀವ ಬಳೆಯಿತು

ಪ್ರಾಸ ಛಂದ ದಂತೆ ಗುಟುಕು ಕವಿತೆ ಉಲಿಯಿತು.

ತಾಯಿ ತಂದೆ ಮರಿಗಳಿಂತು ಬದುಕುತಿದ್ದವು

ಕಾಡು ನಾಡಿನೆಲ್ಲ ಮನವು ಹರಸುತಿದ್ದವು

ಹನಿಗವನ

ಹುಡುಗಿಯರೇ

ನಗುವ ಹುಡುಗರ ನೋಡಿ

ನಂಬಬೇಡಿ

ನಗುನಗುತ್ತಲೆ

ಕಟ್ಟುವರಿವರು

ತಾಳಿ

ಬೇಡಿ ಬೇಡಿ.

ಹನಿಗವನ

ಮರಹೇಳಿತು 

ಕೊಂಬೆಗೆ ಗೂಡನಂಟಿಸಬಂದ 

ಹಕ್ಕಿಗೆ-

ಹಕ್ಕಿಯೇ ಒಂದು ಹಾಡ ಹಾಡು.

ಹಕ್ಕಿ ಹೇಳಿತು-

ಹಾಡುತ್ತೇನೆ,

ಆದರೆ, ಕಾಯಬೇಕು

ನೀನು ನನ್ನ ಗೂಡು.