ಮಹಾಗೌರಿಗೆ ನಮಿಸೋಣ

ಅಂದದ ಚಂದದ ಗೌರಿಯ ನೋಡಿರಿ

ಬಾಲ್ಯದಿ ಹೊಳೆಯುವ ಮಹಾಗೌರಿ

ಸುಂದರ ಸುಗುಣಿಯು ದಂಥದ ಬೊಂಬೆಯ

ಮಿಂಚುವ ಅರಗಿಣಿ ಚೆಲುವಸಿರಿ...

 

ಅಷ್ಟಮಿ ದಿನದಲಿ ಪೂಜಿಪ ಸರ್ವರು

ಬಾಳಿಗೊಂದು ಚಿಂತನೆ (9) - ಸಮಯ

ನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು ಹೋದ ಸಮಯ ನಮ್ಮ ಬದುಕಿನಲ್ಲಿ ಮತ್ತೆಂದೂ ಬರದು* ಗಡಿಯಾರದ ಮುಳ್ಳುಗಳು ಮುಂದೆ ಸಾಗುವುದು ಸತ್ಯ. ಆ ಸಾಗುವ ಮುಳ್ಳುಗಳೊಂದಿಗೆ ನಾವು ಸಹ ಸಾಗೋಣ, ನಮಗೆ ಬೇಕಾದ್ದನ್ನು ಸಾಧಿಸಿಕೊಳ್ಳೋಣ.

Image

ವಾಕಿಂಗ್‌ನ ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ

ವಾಕಿಂಗ್‌ ಅಥವಾ ನಡಿಗೆಯಿಂದ ಹಲವು ಪ್ರಯೋಜನಗಳಿವೆ ಎಂದು ಹಲವರು ಹೇಳುತ್ತಾರೆ. ವಾಕಿಂಗ್‌ನ ಪ್ರಯೋಜನಗಳನ್ನು ತಿಳಿದಿದ್ದರೂ ಅನೇಕ ಜನರು ನಡೆಯುವುದನ್ನು ತಪ್ಪಿಸುತ್ತಾರೆ. ಆದರೆ ಇಂದಿನ ಜೀವನಶೈಲಿಯಲ್ಲಿ ವಾಕಿಂಗ್ ಬಹಳ ಅವಶ್ಯಕವಾಗಿದೆ. ಚುರುಕಾದ ವಾಕಿಂಗ್ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ. ವೇಗವಾಗಿ ನಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯ ಮತ್ತು ಕಡಿಮೆ ಸಮಯ ಉಳಿಯಬೇಕಾಗುತ್ತದೆ.

Image

ಇದು ವಿಚಿತ್ರ ಉಯಿಲುಗಳ ಲೋಕವಯ್ಯಾ!

ಉಯಿಲು ಅಂದರೆ ವಿಲ್ (Will) ಈಗೀಗ ಬಹಳಷ್ಟು ಪ್ರಚಲಿತದಲ್ಲಿರುವ ವಿಷಯ. ಒಬ್ಬ ವ್ಯಕ್ತಿ ತನ್ನ ಮರಣಾನಂತರ ಏನೆಲ್ಲಾ ಕಾರ್ಯಗಳು ಆಗಬೇಕು, ಆಸ್ತಿ ಹೇಗೆ ವಿಲೇವಾರಿಯಾಗಬೇಕು, ಹಣ ಯಾರಿಗೆ ಸಿಗಬೇಕು, ಎಷ್ಟು ಪಾಲು ಹಂಚಬೇಕು ಎಂಬೆಲ್ಲಾ ವಿಷಯಗಳನ್ನು ತನ್ನ ಜೀವಿತಾವಧಿಯಲ್ಲಿ ಬರೆದು ಇಡುವ ಮರಣ ಪತ್ರವೇ ಉಯಿಲು ಅಥವಾ ವಿಲ್. ಮಾನಸಿಕವಾಗಿ ಸ್ವಸ್ಥವಿರುವ ವ್ಯಕ್ತಿ ತನಗೆ ಬೇಕಾದ ರೀತಿಯಲ್ಲಿ ಉಯಿಲು ಬರೆದು ಇಬ್ಬರು ಸಾಕ್ಷಿಗಳ ಸಹಿ ಮಾಡಿಸಿದರೆ ಉಯಿಲು ಅಧಿಕೃತವಾಗುತ್ತದೆ. ಅದನ್ನು ನೊಂದಾಯಿಸಿದರೆ ಇನ್ನೂ ಉತ್ತಮ. ಸಾಕ್ಷಿಗಳಿಗೆ ಉಯಿಲಿನಲ್ಲಿ ಬರೆದ ವಿಷಯ ತಿಳಿಸಬೇಕೆಂದೇನೂ ಇಲ್ಲ. ಆ ವ್ಯಕ್ತಿ ತಾನು ಬರೆದ ಅಥವಾ ಬರೆಸಿದ ಉಯಿಲನ್ನು ತನ್ನ ಜೀವಿತಾವಧಿಯಲ್ಲಿ ಎಷ್ಟು ಸಲ ಬೇಕಾದರೂ ಬದಲಿಸಬಹುದು.

Image

ಕಾಲರಾತ್ರಿದೇವಿ (ಮಹಾ ಕಾಳಿ)

ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ

ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ

ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ

ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ||

 

ಚಿಗುರೆಲೆಗಳ ತಂಬುಳಿ

Image

ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, 4 ಗಾಂಧಾರಿ ಮೆಣಸು, ಸಣ್ಣ ತುಂಡು ಹಸಿ ಶುಂಠಿ, ಚಿಟಿಕೆ ಜೀರಿಗೆ ಮತ್ತು ಅರಶಿನಹುಡಿ ಸೇರಿಸಿ ನುಣ್ಣಗೆ ರುಬ್ಬಿ, ಎರಡು ಸೌಟು ಮಜ್ಜಿಗೆ ಸೇರಿಸಿ ಮಿಶ್ರ ಮಾಡಬೇಕು.ಒಗ್ಗರಣೆ ಕೊಟ್ಟರೂ ಕೊಡದಿದ್ದರೂ ಆಗುತ್ತದೆ. ಸಾಸಿವೆ, ಒಣಮೆಣಸು, ಬೇಕಾದರೆ ಬೆಳ್ಳುಳ್ಳಿ ಹಾಕಬಹುದು. ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಬೇಕು.

ಬೇಕಿರುವ ಸಾಮಗ್ರಿ

ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು ,ಬಾಳೆ ಹೂವು ಎಲ್ಲವನ್ನು ಚೆನ್ನಾಗಿ ಸ್ವಚ್ಛ ಮಾಡಿರಿ. 

 

ನಮ್ಮ ಹೆಮ್ಮೆಯ ಭಾರತ (21 - 22)

೨೧.ಭಾರತದ ಅದ್ಭುತ ವನ್ಯಜೀವಿಗಳು
ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.

ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ ಸುಮಾರು ಶೇಕಡಾ ೩೩ರಷ್ಟು ಸಸ್ಯ ಪ್ರಭೇದಗಳು (ಸ್ಪಿಷೀಸ್) ಭಾರತದಲ್ಲಿ ಮಾತ್ರ ಇವೆ.

ಭಾರತದಲ್ಲಿ ೩೭೨ ಸಸ್ತನಿಗಳ ಸ್ಪಿಷೀಸ್‌ಗಳಿವೆ. ಆನೆ, ಭಾರತೀಯ ಕಾಡುಕೋಣ, ಖಡ್ಗಮೃಗ, ಹಿಮಾಲಯದ ಕುರಿ ಇವುಗಳಲ್ಲಿ ಸೇರಿವೆ. ದೊಡ್ಡ ಬೆಕ್ಕುಗಳಾದ ಹುಲಿ ಮತ್ತು ಸಿಂಹಗಳೂ ಭಾರತದಲ್ಲಿವೆ.

Image

ನವರಾತ್ರಿಯ ಆರನೆಯ ದಿನದ ಪೂಜಾ ಮಾತೆ- ಕಾತ್ಯಾಯಿನಿ ದೇವಿ

ನವರಾತ್ರಿಯ ಆರನೆಯ ದಿವಸ ಮಾತೆಯನ್ನು ಕಾತ್ಯಾಯಿನಿಯಾಗಿ ಆರಾಧಿಸಲಾಗುವುದು.ಕಾತ್ಯಾಯಿನಿ ಮಾತೆಯ ಸ್ವರೂಪವು ಉಗ್ರರೂಪವಾಗಿರುತ್ತದೆ. ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹೌದು. ಆದರೆ ಶಿಷ್ಟರ ಪಾಲಿಗೆ ಮಾತ್ರ ಸಂಹಾರಕಾರಿಣಿಯಾದ ಮಾತೆ ದುರ್ಗೆಯಾಗಿರುವಳು. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.

 *ಪುರಾಣದ ಪ್ರಕಾರ*-*ಕಾತ್ಯಾಯಿನಿ ಮಾತೆಯ ಕಥೆ* 

Image

ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ

ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು. ಯಾವುದೇ ಕಷ್ಟ ಬಂದಾಗ, ನೋವು ಪಟ್ಟಾಗ ಮಾತ್ರ ಭಗವಂತನನ್ನು ಸ್ಮರಿಸಿಕೊಳ್ಳುತ್ತೇವೆ.

Image

ಊಟವಾದ ನಂತರ ಏನು ಮಾಡಬಾರದು...?

ಮದ್ಯಾಹ್ನ ಅಥವಾ ರಾತ್ರಿ ನಾವು ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದೋ, ವ್ಯಾಯಾಮ ಮಾಡುವುದೋ, ನೀರು ಕುಡಿಯೋದೋ ಮಾಡುತ್ತೇವೆ. ಆದರೆ ಊಟ ಆದ ತಕ್ಷಣ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು ಎಂದು ಬಲ್ಲವರ ಅನಿಸಿಕೆ.

Image