ಮಹಾಗೌರಿಗೆ ನಮಿಸೋಣ

ಮಹಾಗೌರಿಗೆ ನಮಿಸೋಣ

ಕವನ

ಅಂದದ ಚಂದದ ಗೌರಿಯ ನೋಡಿರಿ

ಬಾಲ್ಯದಿ ಹೊಳೆಯುವ ಮಹಾಗೌರಿ

ಸುಂದರ ಸುಗುಣಿಯು ದಂಥದ ಬೊಂಬೆಯ

ಮಿಂಚುವ ಅರಗಿಣಿ ಚೆಲುವಸಿರಿ...

 

ಅಷ್ಟಮಿ ದಿನದಲಿ ಪೂಜಿಪ ಸರ್ವರು

ಒಳಿತನು ಮಾಡುವ ಚಂದ್ರವದನೆ

ಚತುರ್ಭುಜಧಾರಿಣಿ ತ್ರಿನೇತ್ರರೂಪಿಣಿ

ವೃಷಭವಾಹನೆ ದಿವ್ಯವದನೆ...

 

ತ್ರಿಶೂಲಧಾರಿಣಿ ಢಮರುಗ ಹಿಡಿಯುತ

ಶಿವನಿಗೆ ಧ್ಯಾನಿಸಿ ಕುಳಿತವಳೆ

ಸಾವಿರ ವರ್ಷದ ತಪಸ್ಸಿನ ಫಲದಲಿ

ಪರಶಿವನ ಮನವನು ಗೆದ್ದವಳೆ...

 

ಗಂಗೆಯ ಜಲವನು ಸೇಚನ ಮಾಡುತ

ಹೊಳೆವ ಬೊಂಬೆ ಜಗದೀಶ್ವರಿ

ಶಿವನನು ವರಿಸುತ ಪರಿಣಯವಾಗುತ

ಅರ್ಧನಾರೀಶ್ವರಿಯಾದಳು ಗೌರಿ...

 

ಗೌರಿಯ ಪೂಜೆಯು ಶ್ರೇಷ್ಠತೆ ಪಡೆದಿದೆ

ಜಗದಲಿ ಶುಭವನು ಪಡೆಯುತಲಿ

ಶ್ವೇತವರ್ಣೆ ಧಾರಣಿ ವರಮುದ್ರೆ ಸ್ವರೂಪಿ

ಭುವನವ ಪಾಲಿಸೋ ಪರಮೇಶ್ವರಿ...

 

ಶಿವನನು ವರಿಸಲು ಧರೆಯಲಿ ಜನ್ಮತಾಳಿ

ಮಹಾತಪಸ್ಸು ಗೈದ ಒಲವಪೋರಿ

ಧ್ಯಾನದ ಜೊತೆಯಲಿ ಸಿಂಹವು ಕುಳಿತಿದೆ

ಮೆಚ್ಚಿದ ದೇವಿಯು ಸಿಂಹರೂಢಧಾರಿ...

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್