ಬೇಟೆಗಾರ ಮೃಗಾರಿಯ ಪರಿವರ್ತನೆ
ದೇವರ್ಷಿ ನಾರದರು ತ್ರಿಲೋಕ ಸಂಚಾರಿಗಳು. ಒಮ್ಮೆ ಅವರು ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗಕ್ಕೆ ಹೊರಟಿದ್ದರು. ಪರಿಶುದ್ದ ಭಕ್ತರಾದ ನಾರದರು ಕೃಷ್ಣನನ್ನು ಸ್ಮರಿಸುತ್ತಾ ಕಾಡಿನಲ್ಲಿ ಹೋಗುತ್ತಿರುವಾಗ ಬಾಣದಿಂದ ಗಾಯಗೊಂಡು ನರಳುತ್ತಾ ಬಿದ್ದಿದ್ದ ಜಿಂಕೆಯೊಂದನ್ನು ನೋಡಿದರು. ಮುಂದೆ ಹೋದಂತೆ ಹಲವಾರು ಪ್ರಾಣಿಗಳು ಬಾಣಗಳ ಏಟಿನಿಂದ ಅರೆ ಜೀವವಾಗಿ ಒದ್ದಾಡುತ್ತಿದ್ದುದನ್ನು ಕಂಡು ಮರುಗಿದರು. ಗಾಯಗೊಂಡಿದ್ದ ಪ್ರಾಣಿಗಳ ನೋವನ್ನು ತನ್ನ ನೋವೆಂದು ಪರಿಗಣಿಸಿದ ನಾರದ ಮುನಿಗಳು ಬಾಣದಿಂದ ಪ್ರಾಣಿಗಳನ್ನು ಘಾಸಿಗೊಳಿಸಿದವರು ಯಾರು ಎಂದು ಹುಡುಕತೊಡಗಿದರು. ಆಗ ನಾರದರಿಗೆ ಮರವೊಂದರ ಹಿಂದೆ ಅಡಗಿ ಕುಳಿತಿದ್ದ ಬೇಟೆಗಾರ ಕಾಣಿಸಿದನು.
- Read more about ಬೇಟೆಗಾರ ಮೃಗಾರಿಯ ಪರಿವರ್ತನೆ
- Log in or register to post comments