ಅತೃಪ್ತಿ

ಓ ಮನುಜನೇ, ಎಂದು ಕಾಣುವುದು ನಿನ್ನಲಿ ತೃಪ್ತಿ?
ದಿನವೂ ಬೆಳೆಯುತಿದೆ ನಿನ್ನ ಬೇಡಿಕೆಗಳ ವ್ಯಾಪ್ತಿ.
ಭೂಮಂಡಲವೇ ನಿನಗಿದ್ದರೂ, ನಿನಗಿಲ್ಲ ಸಂತೃಪ್ತಿ,
ಈ ಮೋಹಕೆ ಬಂಧಿಯಾದ ನಿನಗೆ ಎಲ್ಲಿದೇ ಮುಕ್ತಿ?

ಭೂಭಾಗವನೇ ಖಂಡಗಳಾಗಿ ವಿಂಗಡಿಸಿರುವೆ.
ಖಂಡಗಳನು ದೇಶಗಳಾಗಿ ವಿಭಜಿಸಿರುವೆ.
ನಿನ್ನ ಪ್ರಾಂತ್ಯಕೆ ಗಡಿ ರೇಖೆಯನು ಗುರುತಿಸಿರುವೆ.
ಪ್ರತಿಕ್ಷಣವೂ ಗಡಿಯನ್ನುಲ್ಲಂಘನೆಯ ಮಾಡಲು ಸಂಚು ಹೂಡುತಿರುವೆ.

ಅನ್ಯ ಜನಾಂಗವೆಂದು ಇವರ ದ್ವೇಷಿಸುತಿರುವೆ.
ಇವರು ಜೀವಿಸುವ ಹಕ್ಕನು ಕಸಿದುಕೊಳ್ಳುತಿರುವೆ.
ಉಗ್ರವಾದಿಯ ರೂಪವ ತಾಳಿ, ಇವರಲಿ ಭೀತಿ ಹುಟ್ಟಿಸಿರುವೆ.
ಎಲ್ಲರ ಮೃತ್ಯುವಾಗಿ ಇಡಿಶಾಪಕ್ಕೊಳಗಾದರೂ, ಮಹಾಸಾಧಕನೆಂದು ಬೀಗುತಿರುವೆ.

ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ? 

ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳುತ್ತಿರುವ ಪೋಷಕರ ಸಮ್ಮಿಲನವಾಗಿತ್ತು. ಬಹುಶಃ ಆಗಾಗ ಅವರೆಲ್ಲರೂ ಜೊತೆಗೂಡಿ ಮಾತನಾಡುತ್ತಿದ್ದರೆಂದು ಕಾಣುತ್ತದೆ - ಅಲ್ಲಿ ಕೆಲವು ಮಕ್ಕಳು ದೂರದಿಂದಲೇ ಒಬ್ಬರಿನ್ನೊಬ್ಬರ ಹೆಸರು ಕೂಗಿಕೊಂಡು, ಜೊತೆಗೂಡಿ ಕೈ ಹಿಡಿದು, ಆಡಲಿಕ್ಕೆಂದು ಹೊರಟುಬಿಟ್ಟಿದ್ದರು. ಅಲ್ಲಿ ನೆರೆದಿದ್ದ ಮಕ್ಕಳಲ್ಲೊಂದು ವಿಶೇಷತೆಯಿತ್ತು. ಸಾಧಾರಣ ಮಕ್ಕಳಂತೆ ಇವರ ಮುಖದಲ್ಲಿ ಯಾವುದೇ ಒತ್ತಡ ಕಾಣುತ್ತಿರಲಿಲ್ಲ. ಮಹಾನಗರಗಳ ಮಕ್ಕಳಲ್ಲಿ ಕಾಣುವ ದುಗುಡ, ಅವಸರ ಇವರಲ್ಲಿರಲಿಲ್ಲ.

ಅಂತರಗಂಗೆ ಜಲಕಳೆಯಿಂದ ಉಪಯುಕ್ತ ಉತ್ಪನ್ನಗಳು

ಕೆರೆಗಳನ್ನೇ ಕೊಲ್ಲುವ ಜಲಕಳೆ ಅಂತರಗಂಗೆ! ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ವೇಗವಾಗಿ ಬೆಳೆದು, ವಿಸ್ತಾರವಾದ ಪ್ರದೇಶ ಆಕ್ರಮಿಸುತ್ತದೆ. ಕೊನೆಗೆ, ಆ ನೀರಿನಲ್ಲಿ ಜೀವಿಸುವ ಜಲಸಸ್ಯಗಳಿಗೆ ಅಗತ್ಯವಾದ ಸೂರ್ಯನ ಬೆಳಕು ಸಿಗದಂತೆ ಮಾಡಿ, ಅವನ್ನೆಲ್ಲ ಸಾಯಿಸುವ ಕಳೆ ಇದು.
ಸೂಕ್ತ ಹವಾಮಾನ ಮತ್ತು ಪೋಷಕಾಂಶ ಸಿಕ್ಕರೆ, ಕೇವಲ ೮-೧೦ ದಿನಗಳಲ್ಲಿ ಎರಡು ಪಟ್ಟು ಬೆಳೆಯುತ್ತದೆ ಅಂತರಗಂಗೆ (ವಾಟರ್ ಹೈಯಾಸಿಂಥ್). ನೀರಿನ ಮೇಲ್ಮೈಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಆವರಿಸುವ ಇದರ ಧಾಳಿಯಿಂದಾಗಿ ಕೆರೆ, ಸರೋವರಗಳ ಜಲಸಸ್ಯಗಳು ಸತ್ತು ಕೊಳೆಯುತ್ತವೆ. ಆಗ, ಅಲ್ಲಿನ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಅಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಬಲಿಯಾಗುತ್ತವೆ.

Image

llವೈರಾಗಿll

ನಟನೆಯಲ್ಲಿ ಸೃಷ್ಟಿಯ ನಡೆಸುವವನೇ 
ಧ್ಯಾನದಲ್ಲಿ ಅದರ ರಹಸ್ಯ ತಿಳಿಸುವವನೇ 

ಯೋಗದಲ್ಲಿ ಯೋಗಿಯ ಸೇರುವವನೇ 
ಆಧ್ಯಾತ್ಮದಲ್ಲಿ ಆತ್ಮದ ಅರಿವ ನೀಡುವವನೇ 

ಬಿಡಿಸೋ ಭ್ರಮೆಗಳ, ನಾನು ನನ್ನದೆಂಬ 
ಸಡಿಲಿಸೋ ಕಾಮನೆಗಳ, ಇನ್ನೂ ಬೇಕೆಂಬ 

ಡಮರುವಿನಲ್ಲಿ ನೀನು ನಾದವ ಮಾಡಿ
ಮಲಗಿರುವ ಮನಗಳೆಲ್ಲ ಜಾಗೃತವಾಗಿ

ಗಣಗಳ ಗುಂಪಲ್ಲಿ ನೀನು ಓಡಾಡಿ 
ಗುಣಗಳ ಆಭರಣ ಕಳಚಿದ ವೈರಾಗಿ 

ಕಳೆಯೋ ಋಣಗಳ, ಜನ್ಮಜನ್ಮದ ಗಂಟು 
ನೀಡೋ ಮುಕುತಿಯ, ಬಿಡಿಸಿ ಸಂಸಾರದ ಕಗ್ಗಂಟು

-ಕೆಕೆ (ಕೀರ್ತನ್ ಕೆ)

ನೀರ ನೆಮ್ಮದಿಗೆ ದಾರಿ ಯಾವುದಯ್ಯಾ?

ಕಡೂರಿನಿಂದ ಚಿಕ್ಕಮಗಳೂರಿನ ಹಾದಿಯಲ್ಲಿ ೧೧ ಕಿಮೀ. ಸಾಗಿದಾಗ ಎಡಬದಿಯಲ್ಲಿ ಕಾಣಿಸಿತು ’ರಾಮನಹಳ್ಳಿ’ ಫಲಕ. ಅಲ್ಲಿ ಎಡಕ್ಕೆ ತಿರುಗಿ ೨ ಕಿಮೀ. ಮುಂದೆ ಹೋಗಿ ನಿಂತದ್ದು ಪ್ರವೀಣರ ಹೊಲದಲ್ಲಿ. ಅಂದು, ಮೇ ೧೯, ೨೦೦೪ರಂದು, ಅಲ್ಲಿ ನಾನು ಬೈಕಿನಿಂದಿಳಿದಾಗ ಕಾಣಿಸಿದ್ದು ಅಗಲವಾದ ತೋಡಿಗೆ ಅಡ್ಡವಾಗಿ ಕಟ್ಟಿದ್ದ ೨೦ ಅಡಿಗಳುದ್ದದ ಕಲ್ಲು-ಸಿಮೆಂಟಿನ ತಡೆಗಟ್ಟ.

ಆ ವಾರ ಸುರಿದ ಮಳೆ ನೀರನ್ನೆಲ್ಲ ತಡೆಗಟ್ಟ ೨೦ ಅಡಿಗಳ ಆಳಕ್ಕೆ ತಡೆದು ನಿಲ್ಲಿಸಿತ್ತು. ಅದನ್ನ್ಜು ತೋರಿಸುತ್ತಾ "ಇಲ್ಲಿರೋ ನೀರು ನೋಡಿ ಧೈರ್ಯ ಬಂದಿದೆ. ಇಷ್ಟು ನೀರಿಂಗಿದರೆ ನನ್ನ ಬೋರ್‍ವೆಲ್‍ನಲ್ಲಿ ನೀರು ಸಿಗ್ತದೆ. ಇಲ್ಲದಿದ್ರೆ ನನ್ನ ಎರಡು ವರ್ಷಗಳ ಅಡಿಕೆ ಸಸಿಗಳನ್ನು ಉಳಿಸಿಕೊಳ್ಳೋದೇ ಕಷ್ಟ ಆಗ್ತಿತ್ತು" ಎಂದರು ಕಡೂರಿನ ವಿ.ಎಸ್. ಪ್ರವೀಣ್.

Image

ಹೊಸ ನಗೆಹನಿಗಳು- 62 ನೇ ಕಂತು

- ನನ್ನ ಹೆಂಡತಿ ಒಬ್ಬ ದೇವತೆ,
- ಪುಣ್ಯವಂತನಪ್ಪಾ ನೀನು, ನನ್ನ ಹೆಂಡತಿ ಇನ್ನೂ  ಬದುಕಿದ್ದಾಳೆ.

---------

- ನಾವು ಗಂಡ ಹೆಂಡಿರಲ್ಲಿ ತುಂಬಾ  ಸಾಮರಸ್ಯ ಇದೆ - ಯಾವಾಗಲೂ ನಾನು ತಪ್ಪಾಯಿತು ಅನ್ನುತ್ತೇನೆ , ಅವಳು ಅದಕ್ಕೆ ಸಮ್ಮತಿಸುತ್ತಾಳೆ.

---------
 ನಾನು ನನ್ನ ಗಂಡನಿಗೆ ಕೇಳಿದೆ ಅಷ್ಟೇ - ಇವತ್ತು ಯಾವ ದಿನ ಅಂತ.  ಗಂಡಂದಿರನ್ನು ಹೆದರಿಸುವುದು ತುಂಬಾ ಸುಲಭ!

---------

ಒಬ್ಬಾತನು ಮದುವೆ ಮಂಟಪದಲ್ಲಿ ಕೆಲವು ಶಬ್ದ ಉಚ್ಚರಿಸಿದ್ದರಿಂದ ಅವನ ಮದುವೆ ಆಯಿತು , ಆಮೇಲೆ ಒಂದು ವರುಷದ ನಂತರ ರಾತ್ರಿ ನಿದ್ದೆಯಲ್ಲಿ  ಕೆಲವು ಶಬ್ದ ಉಚ್ಚರಿಸಿದ್ದರಿಂದ ಅವನು ಮದುವೆ ಮುರುಗಡೆ ಆಯಿತು!

ಹೊಸ ನಗೆಹನಿಗಳು- 61 ನೇ ಕಂತು

ಪ್ರೀತಿಗೂ ಮದುವೆಗೂ  ಏನು ವ್ಯತ್ಯಾಸ ?
ಪ್ರೀತಿ ಒಂದು ಸುಂದರ ಸಿಹಿಗನಸು, ಮದುವೆ ಆ ಕನಸಿನಿಂದ  ಬಡಿದೆಬ್ಬಿಸುವ ಅಲಾರಾಂ ಗಡಿಯಾರ!

---------

-   ಹೆಂಡತಿಯ ಹುಟ್ಟು ಹಬ್ಬವನ್ನು  ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ ?
- ಒಮ್ಮೆ ಮರೆತು ಬಿಡುವುದರ ಮೂಲಕ !

---------

- ಭಾರತದಲ್ಲಿ ಮದುವೆಗೆ ಮುಂಚೆ ಹೆಂಡತಿಯ ಪರಿಚಯವೇ ಇರುವುದಿಲ್ಲವಂತೆ, ಹೌದೆ , ಅಪ್ಪ?
- ಮಗನೇ, ಜಗತ್ತಿನಲ್ಲಿ ಎಲ್ಲಾ ಕಡೆ ಅದು ಹಾಗೆಯೇ !

---------

- ನಾನೂ ನನ್ನ ಹೆಂಡತಿ ಐದು ವರುಷ ಸುಖವಾಗಿ ಇದ್ದೆವು
- ಆಮೇಲೆ ಏನಾಯಿತು ?
- ನಾವು ಮದುವೆ ಆಗಿ ಬಿಟ್ಟೆವು .

---------

ವೃತ್ತಿಯಾಗಿ 'ಹ್ಯಾಕಿಂಗ್'

“ಹ್ಯಾಕಿಂಗ್" ಎನ್ನುವುದು “ಎಥಿಕಲ್ ಹ್ಯಾಕಿಂಗ್” ಎನ್ನುವುದರ ಪಡಿನುಡಿಯೇ ಆಗಿತ್ತು. ಆದರೆ ಕಾಲಕ್ರಮೇಣ ಡಿಜಿಟಲ್ ಜಗತ್ತಿನಲ್ಲಿ ಅಪರಾಧಗಳಲ್ಲಿ ತೊಡಗಿಕೊಂಡಿರುವವರನ್ನು ಉದ್ದೇಶಿಸಲು ‘ಹ್ಯಾಕರ್' ಪದದ ಬಳಕೆ ಹೆಚ್ಚಾದುದರಿಂದ ಹ್ಯಾಕಿಂಗ್ ಎನ್ನುವುದು ಕೂಡ ಏನೋ ಕೆಟ್ಟದ್ದನ್ನು ಸೂಚಿಸುವ ಪದವಾಗಿಬಿಟ್ಟಿತು. ಆದರೆ ಈಗಲೂ ಮುಕ್ತ ತಂತ್ರಾಂಶ ಮೊದಲಾದುವುಗಳ ಮೇಲೆ ಕೆಲಸ ಮಾಡುವ ತಂತ್ರಜ್ಞರು ತಮ್ಮನ್ನು “ಹ್ಯಾಕರ್” ಎಂದು ಸಕಾರಾತ್ಮಕವಾಗಿ ಕರೆದುಕೊಳ್ಳುವುದು ರೂಢಿಯಲ್ಲಿ ಇದೆ. ಹ್ಯಾಕರ್ ಆಗಲು ಸರ್ವರ್ ಒಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಪ್ರಯತ್ನಿಸಬೇಕಿಲ್ಲ ಅಥವ ಮಾಹಿತಿ ದರೋಡೆ ಮಾಡುವ ಪ್ರಯತ್ನ ಮಾಡಬೇಕಿಲ್ಲ.

ಹೊಸ ನಗೆಹನಿಗಳು- ೬೦ ನೇ ಕಂತು

ಮದುವೆ  ಎನ್ನುವುದು ಒಂದು ಸಂಸ್ಥೆಯೇ ಸರಿ - ಇಲ್ಲಿ ಗಂಡ  ಬ್ಯಾಚಲರ್ ಪದವಿಯನ್ನು ಕಳೆದುಕೊಳ್ಳುತ್ತಾನೆ , ಹೆಂಡತಿ ಮಾಸ್ಟರ್ಸ್ ಪದವಿಯನ್ನು ಗಳಿಸುತ್ತಾಳೆ!

---------

ಮದುವೆ ಎಂಬುದು  ಗಂಡನಾದವನು ತನ್ನ ಹೆಂಡತಿ ಎಂಥ ಗಂಡನನ್ನು ಬಯಸಿದ್ದಳು ಎಂಬುದನ್ನು ಕಂಡುಕೊಳ್ಳುವ ಪ್ರಕ್ರಿಯೆ!

---------

ಮದುವೆ ಒಂದು ತಂತಿ ವಾದ್ಯ ಇದ್ದಂತೆ. ಮಧುರವಾದ ಸಂಗೀತ ಮುಗಿದ ಮೇಲೂ ತಂತಿಗಳು ಕೂಡಿಕೊಂಡೇ ಇರುತ್ತವೆ , ತುಂಡಾಗಿರುವುದಿಲ್ಲ.