ಜನಾರ್ದನ ದುರ್ಗಾ ಅವರ ಹನಿ-ಫನ್ನಿ

ಜನಾರ್ದನ ದುರ್ಗಾ ಅವರ ಹನಿ-ಫನ್ನಿ

ಕವನ

 *ಉ-ದರ!* 

 *ದಿನದಿಂದ* 

 *ದಿನಕ್ಕೆ* 

 *ಏರುತ್ತಲೇ ಇದೆ...* 

 *ಈರುಳ್ಳಿ ದರ..!* 

 *ಇದರಿಂದ* 

 *ದೊಡ್ಡದಾಗಿದೆ* 

 *ನೋಡಿ...* 

 *ಮಧ್ಯವರ್ತಿಗಳ ಉದರ..!!*

*****

 *ಭಾರ-ಹಾರ!* 

 *ಕಷ್ಟಗಳು* 

 *ಬಂದೆರಗಿದಾಗ* 

 *ಹಾಕ್ತೀವಿ...* 

 *ದೇವರ ಮೇಲೆ ಭಾರ...!* 

 *ಗೆದ್ದು ಬಂದಾಗ* 

 *ಮಾತ್ರ...* 

 *ನಮ್ಮ ಕೊರಳಿಗೆ ಹಾರ..!!* 

***

 *ಮೇ(ಮೈ)ಕಪ್ಪಲಿ..!* 

 *ಮದುವೆ ದಿನ* 

 *ಮಿಂಚುತ್ತಿದ್ದಳಾಕೆ* 

 *ದಸರಾ ಗೊಂಬೆಯಂತೆ* 

 *ಮೇಕಪ್ಪಲಿ..!* 

 *ಮರುದಿನವೆನಗೆ* 

 *ಗುರುತಿಸಲೇ ಆಗಲಿಲ್ಲ* 

 *ಆಕೆಯನ್ನು...* 

 *ಆ ಮೈ ಕಪ್ಪಲಿ..!!* 

***

*ಹಬ್ಬ* 

 *ಸಾಮಾಜಿಕ* 

 *ಅಂತರದೊಂದಿಗೆ* 

 *ಆಚರಿಸಬೇಕು* 

 *ದಸರಾ ಹಬ್ಬ.!* 

 *ಮರೆತು ಬೆರೆತರೆ* 

 *ಮಾತ್ರ...* 

 *ಕೊರೋನಾಗೆ* 

 *ಭರಪೂರ ಹಬ್ಬ..!!!* 

- *ಜನಾರ್ದನ ದುರ್ಗ*

 

ಚಿತ್ರ್