ಬಟ್ಟೆ ಇಲ್ಲದ ಊರಿನಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಮಿರ್ಜಾ ಬಷೀರ್
ಪ್ರಕಾಶಕರು
ಅಂತಃಕರಣ ಪ್ರಕಾಶನ, ಶಿವಮೊಗ್ಗ
ಪುಸ್ತಕದ ಬೆಲೆ
ರೂ.110/-

ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಹತ್ತು ಕತೆಗಳನ್ನು ಒಳಗೊಂಡ ಸಂಗ್ರಹ. ತಮ್ಮ ವೃತ್ತಿ ಜೀವನದಲ್ಲಿ ಸಂಭವಿಸಿದ ಅಥವಾ ಸಂಭವಿಸಿರಬಹುದಾದ ಘಟನೆಗಳ ಸುತ್ತ ಹೆಣೆದಿರುವ ಕತೆಗಳಲ್ಲದೆ ಲೇಖಕರು ಕಲ್ಪನೆಯ ಲೋಕಕ್ಕೆ ನಮ್ಮನ್ನು ಒಯ್ಯುವ ಕತೆಗಳೂ ಇವೆ. ಈ ಕತೆಗಳ ಮೂಲಕ ಬಷೀರರು ನಮ್ಮ ಸಮಾಜದ ಆಗುಹೋಗುಗಳಿಗೆ ಕನ್ನಡಿ ಹಿಡಿಯುತ್ತಾರೆ.

ನಮ್ಮ ನಾಡು

ಹಸಿರ ರಾಶಿ ಚೆಲ್ಲಿರುವ ಗಿರಿವನ,
ಪ್ರಕೃತಿಯ ರಂಗೇರಿಸಿಹ ಜಲಪಾತಗಳ ಮಿಶ್ರಣ,
ಭೂಸ್ವರ್ಗವಾಗಿಸಿಹ ಮಲೆನಾಡ ಚಿತ್ರಣ,
ಪಾವನವಾಗಿಸಿವೆ ಈ ಐಸಿರಿ ತುಂಬಿಸಿ, ನಮ್ಮ ಕಣ್ಮನ.

ಮಕ್ಕಳ ತೊದಲಲಿ ಸರಿಗಮ ಗಾನ,
ತಾಯಿಯ ನುಡಿಯಲಿ ಜೋಗುಳ ಗಾನ,
ಮಂದಿಯ ನುಡಿಯಲಿ ಜನಪದ ಗಾನ,
ನುಡಿ ಇದು ನುಡಿದರೆ, ಅಮೃತಪಾನ.

ಕವಿತಾಲೋಕಕೆ ಎಲ್ಲರ ಕೊಂಡೊಯ್ಯುತ,
ಕಾವ್ಯರಸಧಾರೆಯ ಹೊನಲನು ಹರಿಸುತ,
ನುಡಿಯನು ಕಾವ್ಯಮಾಲೆಯಿಂದಲಂಕರಿಸಿ ಶ್ರೀಮಂತವಾಗಿಸಿಹ,
ಶಾರದೆ ಪೀಠವಿದು, ಕವಿಗಳ ತಾಣ.

ನೀತಿಗಳ ಸಾರುವ ವಚನಾಮೃತವು,
ಭಕ್ತಿಯ ಪಾಡುವ ದಾಸರ ಪದವು,
ಸಂತರು ತೋರಿದ ಮುಕ್ತಿಯ ನಿಲುವು,
ಮಾರ್ಗವ ತೋರಿದವು ಗುರಿ ಸೇರಲು ಮನವು.

ಎರಡು ವರುಷ ಮುಂಚೇನೇ ಮಾಡ್ಬೇಕಿತ್ತು !

"ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ ನೆಲೆಸಿತ್ತು.

Image

ನಾಲಗೆ ಗೆಲ್ಲಬಲ್ಲ ಪುಲಾಸಾನ್

ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.”     ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು. ಬಹುಶಃ ಒಂದೆರಡು ಕೊಯಿಲಿನಲ್ಲಿ ಪೂರ್ತಿ ಖಾಲಿಯಾಗುವ ಹಂತಕ್ಕೆ ತಲುಪಿತ್ತು. ಕಪ್ಪು ಮಿಶ್ರಿತ ಕಡು ನೇರಳೆ ವರ್ಣದ ಹಣ್ಣುಗಳ ನೋಟ ಸೆಳೆಯುವಂತಹುದಲ್ಲವಾದರೂ ಆಕರ್ಷಕ.  

Image

ಬಂಪರ್ ಅಲಸಂಡೆ ಬೆಳೆ: ಯುವ ಕೃಷಿಕರಿಬ್ಬರ ಸಾಧನೆ

ಕೇರಳದ ವಯನಾಡಿನ ಮೀನನ್‍ಗಾಡಿ ಪಂಚಾಯತಿನ ಮೈಲಂಬಾಡಿ ಗ್ರಾಮದ ಬಿನು ಮತ್ತು ಬೆನ್ನಿ ಬಾಲ್ಯಕಾಲದ ಗೆಳೆಯರು. ಇಬ್ಬರೂ ಕೃಷಿ ಕುಟುಂಬದವರು.
ವಿದ್ಯಾಭ್ಯಾಸ ಮುಗಿಸಿದ ನಂತರ, ಅವರಿಬ್ಬರೂ ಕೃಷಿ ಬದುಕಿಗೆ ಹೆಜ್ಜೆಯಿಡಲಿಲ್ಲ. ಬದಲಾಗಿ, ಬಿನು ಚಿನ್ನದೊಡವೆ ಮಳಿಗೆಯಲ್ಲಿ ದುಡಿದರು. ಬೆನ್ನಿ ಸ್ವಂತ ಟ್ಯಾಕ್ಸಿ ಸೇವೆ ಶುರು ಮಾಡಿದರು. ವರುಷಗಳು ಉರುಳಿದವು. ಇಬ್ಬರಿಗೂ ನೆಮ್ಮದಿಯಿಲ್ಲ.

Image

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ.

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ. ಅದಕ್ಕಾಗಿ ಈ ಎರಡು ಸಾಲುಗಳು.

"ಅನುಭವ"

" ಮೈ

ಸೋಕಿದಾಗ

ಅವಳೇ

ಎಂದು 

ಭಾವಿಸಿಕೊಂಡರೆ,

ಚಳಿಯೂ ಸಹ,

ಬೆಚ್ಚನೆಯ

ಅನುಭವ

ನೀಡುತ್ತದೆ"

ಬಳಕೆದಾರರ ಕೋರ್ಟಿನ ತೀರ್ಪು: ರೈತರೇ ನೀರಾವರಿ ಇಲಾಖೆಯ ಬಳಕೆದಾರರು

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ. ಹಾಗಂತ ರೈತರಿಗೆ ನೀರಾವರಿ ಶುಲ್ಕ ವಿನಾಯ್ತಿ ಮಾಡಿದರೇ? ಅದನ್ನೂ ಮಾಡಲಿಲ್ಲ.

ತುಂಗಾ ಏತ ನೀರಾವರಿ ಯೋಜನೆ ಕಾರ್ಯಗತವಾದದ್ದು ೧೯೭೨ರಲ್ಲಿ. ಕೆ. ಕಣಬೂರು ಗ್ರಾಮದ ೧೦೧೮ ಎಕ್ರೆ ಜಮೀನಿಗೆ ನೀರು ಒದಗಿಸಲಿಕ್ಕಾಗಿ. ಅಲ್ಲಿಂದ ೫ ಕಿ.ಮೀ. ದೂರದ ಕೊರಲುಕೊಪ್ಪದ ಜಮೀನಿಗೂ ಆಗ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ ಗದ್ದೆಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಿಲ್ಲ. ಇದರಿಂದಾಗಿ ಇಲ್ಲಿನ ತೋಟಗಳು ಒಣಗಿ ಹೋದವು ಎಂಬುದು ಗ್ರಾಮದ ಹಿರಿಯರ ದೂರು.

Image

ಕನ್ನಡಿಸಿದ ಹಿಂದಿ ಹಾಡು - ಅಬ್ ತೋ ಹೈ ತುಮ ಸೆ (ಅಭಿಮಾನ್ )

(ಅದೇ ಧಾಟಿಯಲ್ಲಿ ಹಾಡಬಹುದು)

ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

ನಿನ್ನ ಪ್ರೀತಿಯಲ್ಲಿ  ನಾನು ಮರುಳಾಗಿರೆ
ಯಾರೇ ಏನೇ ಹೇಳಲಿ ನಲ್ಲಾ ಈ ಲೋಕದಲ್ಲಿ
ಆಡಿಕೊಂಡರೇನು ಊರು ಎಷ್ಟು ಬೇಕಷ್ಟು

ಓಹೋ.. 
ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

 

ನಿನ್ನ ಪ್ರೀತಿಯಲ್ಲಿ  ಹೆಸರು  ಕೆಟ್ಟು ದೂರ ದೂರ
ನಿನ್ನ ಜತೆಯೇ  ನಾನೂ ನಲ್ಲಾ ಹೆಸರಾಂತಳು
ಎಲ್ಲಿ ತಲುಪಿಸೀತೋ  ಅರಿಯೆ ನನ್ನ ಈ ಹುಚ್ಚು
ಓಹೋ.. 
ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ  ನಾನು ನಿನಗಾಗಿ

 

ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ

ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.

Image