ಗೀತಾಮೃತ - 10

*ಅಧ್ಯಾಯ೩*
*ಶ್ರೀ ಭಗವಾನುವಾಚ**ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವ:*/*ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್*//೩೭// ಭಗವಂತನು ಹೇಳಿದನು _ರಜೋಗುಣದಿಂದ ಉತ್ಪನ್ನವಾದ ಈ ಕಾಮವೇ ಕ್ರೋಧವಾಗಿದೆ.ಇದು ಬಹಳ ತಿನ್ನುವವನು ಅರ್ಥಾತ್ ಭೋಗಗಳಿಂದ ಬೇಸರಪಡದಿರುವವನು ಮತ್ತು ಮಹಾಪಾಪಿಯಾಗಿದೆ.ಇದನ್ನೇ ನೀನು ಈ ವಿಷಯದಲ್ಲಿ ವೈರಿಯೆಂದು ತಿಳಿ. *ಧೂಮೇನಾವ್ರಯತೇ ವಹ್ನಿರ್ಯಥಾದರ್ಶೋ ಮಲೇನ ಚ/**ಯಥೋಲ್ಬೇನಾವೃತೋ ಗರ್ಭಾಸ್ತಥಾ ತೇನೇದಮಾವೃತಮ್//೩೮//* ಯಾವ ಪ್ರಕಾರವಾಗಿ ಹೊಗೆಯಿಂದ ಅಗ್ನಿಯು ಮತ್ತು ಕೊಳೆಯಿಂದ ಕನ್ನಡಿಯು ಮುಚ್ಚಲ್ಪಡುತ್ತದೆಯೋ ಹಾಗೂ ಯಾವ ಪ್ರಕಾರವಾಗಿ ಜರಾಯು ಎಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿದೆಯೋ ಹಾಗೆಯೇ ಆ ಕಾಮದ ಮೂಲಕ ಈ ಜ್ಞಾನವು ಮುಚ್ಚಲ್ಪಟ್ಟಿರುತ್ತದೆ.
***
*ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ/*
*ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನ ನಾಶನಮ್//೪೧//*
ಹೇ ಅರ್ಜುನನೇ! ನೀನು ಮೊದಲು ಇಂದ್ರಿಯಗಳನ್ನು ವಶಪಡಿಸಿಕೊಂಡು ಈ ಜ್ಞಾನ ಮತ್ತು ವಿಜ್ಞಾನವನ್ನು ನಾಶಪಡಿಸುವ ಮಹಾಪಾಪಿಯಾದ ಕಾಮವನ್ನು ಅವಶ್ಯವಾಗಿ,ಬಲಪೂರ್ವಕವಾಗಿ ಕೊಂದುಬಿಡು.
*ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯ: ಪರಂ ಮನ:/*
*ಮನಸಸ್ತು ಪರಾ ಬುದ್ಧರ್ಯೋ ಬುದ್ಧೇ: ಪರಸ್ತುಸ://೪೨//*
ಇಂದ್ರಿಯಗಳು ಸ್ಥೂಲ ಶರೀರಕ್ಕಿಂತ, ಶ್ರೇಷ್ಠ ಬಲಶಾಲಿ ಮತ್ತು ಸೂಕ್ಷ್ಮವೆಂದು ಹೇಳುತ್ತಾರೆ; ಈ ಇಂದ್ರಿಯಗಳಿಗಿಂತ ಶ್ರೇಷ್ಠ ವಾದುದು ಮನಸ್ಸು, ಮನಸ್ಸಿಗಿಂತಲೂ ಶ್ರೇಷ್ಠ ವಾದುದು ಬುದ್ಧಿಯಾಗಿದೆ ಮತ್ತು ಯಾವುದು ಬುದ್ಧಿಗಿಂತಲೂ ಕೂಡ ಅತ್ಯಂತ ಶ್ರೇಷ್ಠ ವಾಗಿದೆಯೋ ಅದೇ ಆತ್ಮವಾಗಿದೆ.
*ಏವಂ ಬುದ್ಧೇ: ಪರಂ ಬುದ್ದ್ವಾ ಸಂಸ್ತಭ್ಯಾತ್ಮಾನಮಾತ್ಮನಾ/*
*ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದರಾಸದಮ್*//
ಈ ಪ್ರಕಾರವಾಗಿ ಬುದ್ಧಿಗಿಂತ ಪರ ಅರ್ಥಾತ್ ಸೂಕ್ಷ್ಮವೂ,ಬಲಶಾಲಿಯೂ ಮತ್ತು ಅತ್ಯಂತ ಶ್ರೇಷ್ಠ ವಾದ ಆತ್ಮವನ್ನು ಅರಿತುಕೊಂಡು ಮತ್ತು ಬುದ್ಧಿಯ ಮೂಲಕ ಮನಸ್ಸನ್ನು ವಶಪಡಿಸಿಕೊಂಡು ಹೇ ಮಹಾಬಾಹುವೇ! ನೀನು ಈ ಕಾಮರೂಪೀ ದುರ್ಜಯವಾದ ಶತ್ರುವನ್ನು ಕೊಂದು ಹಾಕು.
*ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು*
*ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಯೋಗೋ ನಾಮ ತೃತೀಯೋಧ್ಯಾಯ://೩//*
****
*//ಅಥ ಚತುರ್ಥೋಧ್ಯಾಯ://*
*ಜ್ಞಾನಕರ್ಮ ಸಂನ್ಯಾಸ ಯೋಗವು*
*ಶ್ರೀ ಭಗವಾನುವಾಚ*
*ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್/*
*ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್//೧//*
ಶ್ರೀ ಭಗವಂತನು ಹೇಳಿದನು:
ನಾನು ಈ ಅವಿನಾಶಿಯಾದ ಯೋಗವನ್ನು ಸೂರ್ಯನಿಗೆ ಹೇಳಿದ್ದೆ.ಸೂರ್ಯನು ತನ್ನ ಪುತ್ರನಾದ ವೈವಸ್ವತ ಮನುವಿಗೆ ಹೇಳಿದನು ಮತ್ತು ಮನುವು ತನ್ನ ಪುತ್ರನಾದ ರಾಜಾ ಇಕ್ಷ್ವಾಕುವಿಗೆ ಹೇಳಿದನು.
*ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿಮ:/*
*ಸ ಕಾಲೇನೇಹ ಮಹತಾ ಯೋಗೋ ನಷ್ಟ: ಪರಂತಪ//೨//*
ಹೇ ಪರಂತಪ ಅರ್ಜುನನೇ!
ಈ ಪ್ರಕಾರವಾಗಿ ಪರಂಪರೆಯಿಂದ ಪ್ರಾಪ್ತವಾದ ಈ ಯೋಗವನ್ನು ರಾಜರ್ಷಿಗಳು ತಿಳಿದರು.ಆದರೆ ಅದರ ನಂತರ ಆ ಯೋಗವು ಬಹಳ ಕಾಲದಿಂದ ಈ ಭೂಲೋಕದಲ್ಲಿ ಲುಪ್ತಪ್ರಾಯವಾಗಿ ಹೋಯಿತು.
***
-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)