ಕರೋನ ನೀ ಮಾಡಿದ್ದು ಸರಿನಾ?
ಕರೋನನೀಮಾಡಿದ್ದುಸರಿನಾ?
ಅಲ್ಲಲ್ಲಿಅಲೆದುನಿಶೆಯಲಿನೇತಾಡುವಬಾವಲಿಯಬಳಿಸಾರಿ
ಮುಳ್ಳಿನಚಂಡಿನಮಳ್ಳಿನೀನುಕಳ್ಳಿಯಂತೆ
ಗಾಳಿಯಲ್ಲಿ ಬಂದುಗೂಳಿಯಂತೆನುಗ್ಗಿ
ಎಗ್ಗಿಲ್ಲದೆಜಗ್ಗಾಡಿಭಾವಜೀವಗಳಬಿಗಡಾಯಿಸಿ
ಅಡಿಗಡಿಗೆಆವರಿಸಿಬೆದರಿಸಿಬದುಕಿದವಳು
ಜೀವಇಲ್ಲದವಳುನೀನು
ಜೀವದೊಳಗೆಸುಳಿದಾಡಿ
ಹೀಗೆಗೋಳಾಡಿಸುವುದುಸರಿಏನು?
ಬರೀಕಣ್ಣಿಗೆಕಾಣದನೀನು
ಶರವೇಗದಿಹರಿದಾಡಿಹಿರಿಕಿರಿದೇಶಗಳ/ ದೇಹಗಳಕುಗ್ಗಿಸಿಬಗ್ಗಿಸಿದಹಿಸಿ
ಗಹಗಹಿಸಿಹಿಗ್ಗುವೆಏನು?
ಸಹಜೀವನದಸವಿಯನ್ನುಜೊತೆಗೂಡಿಇರಲುಬಿಡದೆ
ಸಿರಿಸಿಹಿಜೀವನವನುಬಿಗಡಾಯಿಸಿ
ಕಹಿಉಣಿಸಿಉಳಿಸಿದವೈರಿಹುಳುವೈರಾಣುನೀನು
ಬಂಧುಬಾಂಧವರಅತ್ತಿತ್ತಸರಿಸಿ
ಗೃಹಬಂಧನದಿಸೆರೆಹಾಕಿ
ನಗುಚಟಾಕಿಯನುಹಿಸುಕಿಕೇಕೆಹಾಕಿದಕುಹಕಿನೀನು
ಅಣುಅಣುವಿನಲ್ಲಿಕುಣಿದಾಡಿಕಣಕಣದಲ್ಲುಸಂಚರಿಸಿ
ಬಣ್ಣದಬಾಳಕ್ಷಣಗಳನ್ನುಚಣದೊಳಗೆಬಣಗುಡಿಸಿ
ಒಣಬದುಕಿನಲ್ಲಿಬಿಟ್ಟವಳುನೀನು
ಇಷ್ಟೆಲ್ಲಾಕಷ್ಟಗಳನ್ನುಕೊಟ್ಟುಬಾಎಂದುಹೇಳಿಕೊಟ್ಟವರುಯಾರುನಿನಗೆ?
ಇರಲಾರದುಬಲುದಿನಈನಿನ್ನಕ್ಷಣಿಕಕುಹಕನಗೆ
ಕುಲಶ್ರೇಷ್ಠಜ್ಞಾನಿಗಳಅನ್ವೇಷಣೆಯಬತ್ತಳಿಕೆಯಲಸಿಕೆಯಭರಕೆ
ತಡೆಯದೆಸುರುಟಿಹೊರಟುಹೋಗುವೆತಟಕೆ
ಆದರೂ...
ದಟ್ಟಮೋಡಗಳಮಾಡಿನಂಚಿನಲಿಮಿಂಚುವಬೆಳ್ಳಿಬೆಳಕಿನಂತೆ
ಪ್ರತಿನಿತ್ಯಬಾಳಲಿಸ್ವಚ್ಫಸ್ವಸ್ಥತೆಯರೂಢಿಯನುತಿಳಿಸಿಉಳಿಸಿದೆನೀನು
ಸ್ವಚ್ಫಸ್ವಸ್ಥತೆಯನು ಬೆಳೆಸಿಅನುಸರಿಸಿಅನುದಿನವುಬಾಳಬೇಕಿನ್ನು
——ರುಕ್ಕುರೂಪಾ
