ಅವಳಿಗೆ…
ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ
ನಾನಿನ್ನ ದೂರದ ಗೆಳೆಯನಾಗಿದ್ದರೂ…
ಕೆಲವೊಂದು ಬಂಧಗಳ ದೂರಮಾಡಲಾರೆ
ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು
ಎಂದೆನಿಸಿದ್ದರೂ...
ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ
ಅನಿಸಿದ್ದೆಲ್ಲವ ಹೇಳಿಬಿಟ್ಟಿದ್ದೆ, ಕೆಲವೊಮ್ಮೆ
ಹೇಳಬೇಕಿರುವುದನ್ನು ಹಾಗೇ ಉಳಿಸಿಕೊಂಡಿದ್ದೆ…
ಗೆಳೆತನವ ಬಯಸಿದ್ದ ನನ್ನಲ್ಲಿ
ನನಗ್ಯಾವ ತಪ್ಪೂ ಕಂಡಿಲ್ಲ, ಎಂದೂ
ವಿಜ್ಞಾಪನೆಯಷ್ಟೇ ನಿನ್ನಲ್ಲಿ, ಈ ಮೂಕ
ಮುಗ್ದತೆಯ ಮೂರ್ಖ ಸಂವೇದನೆಗಳ
ಸಾಧ್ಯವಾದರೆ ಸಹಿಸು ಎಂದೂ…
ನಿನಗೆ ನಾನೊಬ್ಬ ಸಾಮಾನ್ಯ ಗೆಳೆಯನಿರಬಹುದು,
ಆದರೆ ನಾ ಹಚ್ಚಿಕೊಂಡವರಲ್ಲಿ
ನಿನಗೊಂದು ವಿಶೇಷ ಸ್ಥಾನವಿದೆ…
- Read more about ಅವಳಿಗೆ…
- Log in or register to post comments