ಚೆಲುವೆ ಮನದೊಳು ಮತ್ತು ಇತರೆ ಹನಿಗಳು

ಚೆಲುವೆ ಮನದೊಳು ಮತ್ತು ಇತರೆ ಹನಿಗಳು

ಕವನ

*ಟಂಕಾಗಳು*

 ತಾಯಿ

ಭೂಮಿತೂಕದ

ಸಹನೆಯ ಮೂರುತಿ

ಹೆಮ್ಮೆಯ ತಾಯಿ

ಧರೆಯ ಮೇಲಿರುವ

ನಿಜವಾದ ದೇವತೆ||

 

 ಪ್ರೀತಿ

ಕೋಟಿ ಕೊಟ್ಟರೂ

ಸಿಗದು ಈ ಲೋಕದ

ಅಂಗಡಿಯಲಿ,

ಅಮೃತ ಸಮನಾದ

ತಾಯಿ ನೀಡುವ ಪ್ರೀತಿ||

 

ವಾತ್ಸಲ್ಯ

ಕಷ್ಟಗಳೆಲ್ಲ 

ಮಂಜಿನಂತೆ ಕರಗಿ

ನೀರಾಗುವವು,

ತಾಯಿಯ ವಾತ್ಸಲ್ಯಕೆ

ಮಮತೆಯ ಮಾತಿಗೆ||

 

*ಶ್ರೀ ಈರಪ್ಪ ಬಿಜಲಿ*
 

 ಚೆಲುವೆ ಮನದೊಳು

ಚೆಲುವೆ ಮನದೊಳು

ಚೆಲುವ ಬಂದನು

ಚೆಲುವಿನಾ ನಗು ಸೂಸುತ

ಚೆಲುವ ಸುಮವದು

ಚೆಲುವ ಹರಡಲು

ಚೆಲುವು ಬಂದಿತು ಬಳುಕುತ

 

ಕಾಂತಿ ನಯನದಿ

ಕಾಂತ ತುಂಬಲು

ಕಾಂತಿ ಸವಿಯದು ಹರಡುತ

ಕಾಂತ ಪ್ರಭೆಯೊಳು

ಕಾಂತಿ ಹೊಮ್ಮಲು

ಕಾಂತ ಮನವದು ಹೊಳೆಯುತ

 

ಮಧುರ ಭಾವನೆ

ಮಧುರ ಲತೆಯಲಿ

ಮಧುರ ಖುಷಿಯದು ಮೂಡುತ

ಮಧುರ ಸಪ್ನದ

ಮಧುರ ಲೋಕದಿ

ಮಧುರ ನನಸದು ತೇಲುತ

 

-ಹಾ ಮ ಸತೀಶ

 

ಚಿತ್ರ್