ಕನ್ನಡಮ್ಮನ ಒಡಲು

ಕನ್ನಡಮ್ಮನ ಒಡಲು

ಕವನ

ಮೂಡು ದಿಸೆಯಲಿ ಸೂರ್ಯ 

ಉದಯಿಸಿ ಕನ್ನಡಮ್ಮನ ಹರಸಿದ

ಪಡುವ ಕಡಲಲಿ ಹೊನ್ನ ಬಣ್ಣದಿ 

ನಲಿಸಿ ಕುಣಿಸುತ ಸಾಗಿದ

 

ತಾಯೆ ಸರಸ್ವತಿ ನುಡಿಗಳೆಡೆಯಲಿ

ಕುಳಿತು ಸ್ವರಗಳ ಬರೆಸುತ

ತನುವಿನಾಳದ ಮನಸ್ಸಿನಾಳಕೆ

ಕನ್ನಡದಾ ನುಡಿ ಕಲಿಸುತ

 

ಭಾಷೆ ಕನ್ನಡ ವೇಷ ಕನ್ನಡ

ತಿಳಿವು ಕನ್ನಡವೆನುತಲಿ

ಜಗದ ಭಾಷೆಗೆ ಸಮವು ಎನ್ನುತ

ಹೆಜ್ಜೆ ಇಡುತಲೆ ಸಾಗಲಿ

 

ಮೌನವಾಗಿಹ ಜನರ ನಡುವೆಯೆ

ಇರುತ ಮಾತನು ಕಲಿಸುತ

ನಮ್ಮ ನಡೆಯೊಳು ನುಡಿಯ ತತ್ವವ

ಚೆಲುವ ಸಂಸ್ಕೃತಿ ಬೀರುತ

 

ಕನ್ನಡದ ನುಡಿ ಹಬ್ಬ

ಮೊಳಗುತ್ತ ಸಾಗಲಿ

ಕನ್ನಡವೆ ನನ್ನುಸಿರು

ಜನತೆಯದು ಹಾಡಲಿ

 

ಜಯವೆನುತ ಜಯವೆನುತ

ಜಯಘೋಷ ಮೊಳಗಲಿ

ಹಸಿರಾಗಿ ಒಲುಮೆಯೊಳು

ಪ್ರಕೃತಿಯೂ ನಲಿಯಲಿ

 

-ಹಾ ಮ ಸತೀಶ

 

ಚಿತ್ರ್