ಅಪ್ಪೆಗ್ ಬಾಲೆದ ಓಲೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು (ಸಂಪಾದಕರು)
ಪ್ರಕಾಶಕರು
ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್, ವಿಟ್ಲ
ಪುಸ್ತಕದ ಬೆಲೆ
ರೂ.50.00. ಮುದ್ರಣ: 2002

*ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಿತ ಸಂಕಲನ "ಅಪ್ಪೆಗ್ ಬಾಲೆದ ಓಲೆ"*

# 1993ರಲ್ಲಿ ವಿಟ್ಲದಲ್ಲಿ ಅಸ್ತಿತ್ವಕ್ಕೆ ಬಂದ " ತುಳುಕೂಟೊ ಇಟ್ಟೆಲ್"ಎಂಬ ಸಂಸ್ಥೆಯು 1997ರಲ್ಲಿ "ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್" ಎಂಬ ಹೊಸನಾಮಧೇಯ ಪಡೆದುಕೊಂಡು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯು ತನ್ನ ಹತ್ತನೇ ವರ್ಷದ ಸದವಸರದಲ್ಲಿ ನಡೆಸಿದ ಸ್ಪರ್ಧೆಯಾಗಿತ್ತು "ಅಪ್ಪೆಗ್ ಬಾಲೆದ ಓಲೆ".

ಪುಸ್ತಕನಿಧಿ - 12.ಕುಸುಮಾಕರ ದೇವರಗೆಣ್ಣೂರು ಅವರ ಕಾದಂಬರಿ 'ನಾಲ್ಕನೆಯ ಆಯಾಮ'

ಚಿತ್ರ

ಕುಸುಮಾಕರ ದೇವರಗೆಣ್ಣೂರು -ಇವರು ಸುಪ್ರಸಿದ್ಧ ಸಾಹಿತಿಯಂತೆ. ಅಂತರ್ಜಾಲದಲ್ಲಿ ಹುಡುಕಿದರೆ ನಿಮಗೆ ಹೆಚ್ಚಿನ ಮಾಹಿತಿ ತಿಳಿದೀತು. ಈ ಪುಸ್ತಕವನ್ನು ಕರ್ನಾಟಕ ಸರಕಾರವು ಬಹಳ ಕಡಿಮೆ ಬೆಲೆ (೨೫ ರೂ ) ಗೆ ಮಾರಾಟ ಮಾಡಿತು - ಕರ್ನಾಟಕಕ್ಕೆ 50 ವರ್ಷಗಳ ಆದ ಸಂದರ್ಭದಲ್ಲಿ,

ಶಮಿಪತ್ರವನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ?

ಶಮಿಪತ್ರ ಅಂದರೆ ಬನ್ನಿ ಮರದ ಎಲೆಗಳು. ಪ್ರತೀ ವರ್ಷ ನವರಾತ್ರಿ-ವಿಜಯ ದಶಮಿಯ ಸಂದರ್ಭದಲ್ಲಿ ಶಮೀ ವೃಕ್ಷ ಅಥವಾ ಬನ್ನಿ ಮರದ ಬಗ್ಗೆ ಕೇಳಿ ಬರುತ್ತವೆ. ಮೈಸೂರಿನ ರಾಜ ವಂಶಸ್ಥರು ಈಗಲೂ ತಮ್ಮ ಹಳೆಯ ಪರಂಪರೆಯಾದ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದನ್ನು ಮಾಡುತ್ತಾ ಬರುತ್ತಿದ್ದಾರೆ. ಏನಿದು ಬನ್ನಿ ಮರ? ಏಕೆ ಇಷ್ಟು ಮಹತ್ವ ಪಡೆದಿದೆ? ಎನ್ನುವುದನ್ನು ತಿಳಿಯೋಣ ಬನ್ನಿ.

Image

ಒಂದು ಒಳ್ಳೆಯ ನುಡಿ (16) - ನೆಮ್ಮದಿ

*ನೆಮ್ಮದಿ ಎಲ್ಲಿ ಸಿಗುತ್ತದೆ* ಅಂತ ಒಬ್ಬರು ಕೇಳಿದರು ಒಮ್ಮೆ, ಹೌದಲ್ವಾ, ಈ *ನೆಮ್ಮದಿ* ಸಂತೆಯಲ್ಲಿ ಸಿಗುವ ವಸ್ತು ಖಂಡಿತಾ ಅಲ್ಲ, ಎಲ್ಲಿಯಾದರೂ ಸಿಗುವುದಿದ್ದರೆ ತಂದು ಪೆಟ್ಟಿಗೆಯೊಳಗೆ ಇಡುತ್ತಿದ್ದರೋ ಏನೋ. ತರಗತಿ ಕೋಣೆಯೊಳಗೆ ಹೇರಿಕೆಯ ಕಲಿಕೆ, ಒತ್ತಡಗಳು, ನಾನಾ ಧೋರಣೆಗಳನ್ನು ಹೊತ್ತ ವಿದ್ಯಾಭ್ಯಾಸ ಮಗುವಿಗೆ ದೊರೆಯುತ್ತದೆ. ಇನ್ನೊಂದೆಡೆ ಟ್ಯೂಷನ್ ಹಾವಳಿ, ಹೋಗಲೇ ಬೇಕು, ಕಲಿಯಲೇ ಬೇಕು. ಇಂಥ ಒತ್ತಡಗಳಿಂದಲೇ ಆ ಮಗು ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ನೆಮ್ಮದಿಯನ್ನು ಕಳೆದುಕೊಂಡ ಸ್ಥಿತಿಗೆ ತಲುಪುತ್ತಾನೆ. ಜೀವನ ನಿರ್ವಹಣೆಗೆ ಬೇಕಾದ ಕಲಿಕೆ ಬಹಳ ಅಪರೂಪವಾಗಿದೆ ಇಂದಿನ ದಿನಗಳಲ್ಲಿ.

Image

ಆನೆ ಲದ್ದಿಯಿಂದ ಪೇಪರ್!

ಆನೆ ಲದ್ದಿಯಾ? ಎಂದು ಮೂಗು ಮುಚ್ಚಿಕೊಳ್ಳದಿರಿ. ಲದ್ದಿಯಿಂದ ತಯಾರಿಸಿದ ಪೇಪರ್ ಗೆ ಏನು ಕೆಟ್ಟ ವಾಸನೆ ಇರುತ್ತೋ? ಎಂದು ಗಾಬರಿ ಪಡ ಬೇಡಿ. ನಾನಿಂದು ಸಾಮಾಜಿಕ ಜಾಲತಾಣದಲ್ಲಿ ಕಣ್ಣಾಡಿಸುವಾಗ ಈ ಬಗ್ಗೆ ಒಂದು ವಿಡಿಯೋ ನೋಡಿದೆ. ಅದರ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಳ್ಳುವ ಎಂದು ಮನಸ್ಸಾಯಿತು. 

Image

ಝೆನ್ ಪ್ರಸಂಗ: ಎಲ್ಲ ಪ್ರಶ್ನೆಗಳಿಗೂ ಇಲ್ಲ ಉತ್ತರ

ಗಿಡದಲ್ಲಿ ಅರಳಿದ್ದ ಹೂವನ್ನು ನೋಡುತ್ತಿದ್ದ ಶಿಷ್ಯ ಉದ್ಗರಿಸಿದ, “ಈ ಹೂ ನನಗೆ ಬಹಳ ಇಷ್ಟವಾಯಿತು.”
“ಅದ್ಯಾಕೆ?" ಎಂಬ ಗುರುಗಳ ಪ್ರಶ್ನೆಗೆ ಶಿಷ್ಯನ ಉತ್ತರ: “ಈ ಹೂ ಬಹಳ ಚಂದ; ಅದಕ್ಕೆ…" ಈ ಉತ್ತರದಿಂದ ಸಮಾಧಾನವಾಗದ ಗುರುಗಳು ಇನ್ನೊಬ್ಬ ಶಿಷ್ಯನನ್ನು ಪ್ರಶ್ನಿಸಿದರು, “ಏನಯ್ಯಾ? ನಿನಗ್ಯಾವುದು ಇಷ್ಟ?"

ಆತ ಕಣ್ಣು ಮಿಟುಕಿಸದೆ ನೀಡಿದ ಉತ್ತರ, “ನನಗೆ ದೇವರು ಬಹಳ ಇಷ್ಟ." ಇವನಿಗೂ ಗುರುಗಳಿಂದ ಅದೇ ಮರುಪ್ರಶ್ನೆ: "ಯಾಕೆ?"
ಇವನ ನೇರ ಉತ್ತರ: "ದೇವರು ಜಗನ್ನಿಯಾಮಕ, ಅದಕ್ಕೆ…" ಈ ಉತ್ತರದಿಂದಲೂ ಸಮಾಧಾನವಿಲ್ಲ ಗುರುಗಳಿಗೆ. ಅನಂತರ ಮೂರನೆಯ ಶಿಷ್ಯನಿಗೂ ಗುರುಗಳಿಂದ ಅದೇ ಪ್ರಶ್ನೆ.

Image

ಬಾಳಿಗೊಂದು ಚಿಂತನೆ (10) - ಮನಸ್ಸು

ಮನಸ್ಸು ಎನ್ನುವುದು *ನೀರು ತುಂಬಿದ ಬಾಟಲಿಯಂತೆ*. ಯಾವ ಬಣ್ಣದ ಬಾಟಲಿಯಲ್ಲಿ ನೀರು ಹಾಕುತ್ತೇವೆಯೋ, ಆ ಬಾಟಲಿಯ ಬಣ್ಣ ಬರುತ್ತದೆ. ಮನಸ್ಸು ಓಡುವ ಕುದುರೆಯಂತೆ. ಅದನ್ನು ಬೇಕಾದ ಹಾಗೆ ನಿಲ್ಲಿಸಲು ನಮಗೆ ತಿಳಿದಿರಬೇಕು. ಏರುಪೇರುಗಳಿಂದ ಮನಸ್ಸು ಒಮ್ಮೊಮ್ಮೆ ಓಲಾಡುತ್ತದೆ, ನಮ್ಮ ಕೈಯಿಂದ ಜಾರಿ ಹೋಗುತ್ತದೆ. ಜಾರುವ ದಾರಿ ಹೇಗಿದೆ, ಹೇಗೆ ಜಾರಿದರೆ ಒಳಿತಾಗಬಹುದು? ಅದು ನಮ್ಮ ನಮ್ಮ ಕೈಯಲ್ಲೇ ಇದೆ.

Image