ಯಾವ ಚೆಲುವಿನ ಭಾವ

ಯಾವ ಚೆಲುವಿನ ಭಾವ

ಕವನ

ಯಾವ ಚೆಲುವಿನ ಭಾವ

ಮೂಡಿ ನನ್ನೊಳು ಇಂದು

ಪ್ರೀತಿ ಪ್ರೇಮದ ತೀರ ಕರೆಯಿತಿಂದು

ಸವಿಯಾಸೆ ಮುಗಿಲಾಗಿ

ಕ್ಷಣದೊಳಗೆ ಕರಗುತಲಿ

ತನುವೆನುವ ಮನದೊಳಗೆ ಬಂದಿಯಿಂದು

 

ಕತ್ತಲೆಯ ಸನಿಹದೊಳು

ಮಲಗಿ ವರಗುತಲಿರೆ

ಪ್ರಣಯ ಕಾವ್ಯಕೆಯಿಂದು ಸೋಲು ಬಂತು

ಮೆತ್ತನೆಯ ಹಾಸಿಗೆಯು

ಮುಳ್ಳ ಹಾಸುತ ಕರೆಯೆ

ಮೈಯೆಲ್ಲ ನೋವಿನಲಿ ನರಳಿ ಕೂಂತು

 

ಹಸಿಯ ಮಣ್ಣಿನ ಗೋಡೆ

ನಲುಮೆಯೊಂದೇ ತಿಳಿದು

ಮತ್ತೆ ಮೌನಕೆ ಜೀವ ಶರಣು ಬರಲು

ಬಂದ ಕರ್ಮವ ಪಡೆದು

ಜೀವನವ ಸವೆಸುತಲಿ

ಸಂತ ಮಾರ್ಗದಿ ನಡೆಯೆ ಮುಕ್ತಿ ಸಿಗಲು

 

-ಹಾ ಮ ಸತೀಶ

 

ಚಿತ್ರ್