ಗೀತಾಮೃತ - 8

ಗೀತಾಮೃತ - 8

ಅಧ್ಯಾಯ ೩    

ಶ್ರೀ ಭಗವಾನುವಾಚ:ಲೋಕೇಸ್ಮಿನ್ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ/ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್//೩//ಭಗವಂತನು ಹೇಳಿದನು _ಹೇ ನಿಷ್ಪಾಪನೇ ! ಈ ಲೋಕದಲ್ಲಿ ಎರಡು ಪ್ರಕಾರದ ನಿಷ್ಠೆಗಳು ನನ್ನ ಮೂಲಕ ಮೊದಲು ಹೇಳಲಾಗಿದೆ.ಅವುಗಳಲ್ಲಿ ಸಾಂಖ್ಯಯೋಗಿಗಳ ನಿಷ್ಠೆಯು ಜ್ಞಾನಯೋಗದಿಂದ ಮತ್ತು ಯೋಗಿಗಳ ನಿಷ್ಠೆಯು ಕರ್ಮಯೋಗದಿಂದ ಇರುತ್ತದೆ.ನ ಕರ್ಮಣಾಮನಾರಂಭಾ್ನ್ನೈಷ್ಕರ್ಮ್ಯಂ ಪುರುಷೋಶ್ನುತೇ/ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ //೪//  ಮನುಷ್ಯನು ಕರ್ಮಗಳನ್ನು ಆಚರಿಸದೆ ಅರ್ಥಾತ್  _ ಕರ್ಮಾಚರಣೆ ಮಾಡದೆ ನಿಷ್ಕರ್ಮತೆಯನ್ನು ಅಂದರೆ ಯೋಗನಿಷ್ಠೆಯನ್ನು ಪಡೆಯಲಾರನು.ಮತ್ತು ಕೇವಲ ಕರ್ಮಗಳ ತ್ಯಾಗ ಮಾತ್ರದಿಂದ ಸಿದ್ಧಿ ಎಂದರೆ ಸಾಂಖ್ಯನಿಷ್ಠೆಯನ್ನೂ ಪಡೆಯಲಾರನು.

***

       ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್/

ಕಾರ್ಯತೇ ಹ್ಯವಶ: ಕರ್ಮ ಸರ್ವ: ಪ್ರಕೃತಿಜೈರ್ಗುಣೈ://೫//

   ನಿಸ್ಸಂದೇಹವಾಗಿ ಯಾವ ಮನುಷ್ಯನಾದರೂ ಯಾವುದೇ ಕಾಲದಲ್ಲಿ ,ಕ್ಷಣ ಮಾತ್ರವೂ ಸಹ ಕರ್ಮವನ್ನು ಮಾಡದೇ ಇರಲಾರನು; ಏಕೆಂದರೆ,ಎಲ್ಲ ಮನುಷ್ಯ ಸಮುದಾಯವು ಪ್ರಕೃತಿಜನ್ಯವಾದ ಗುಣಗಳ ಮೂಲಕ ಪರವಶವಾಗಿ ಕರ್ಮಮಾಡುವುದಕ್ಕೆ ಬಾಧ್ಯನನ್ನಾಗಿ ಮಾಡಲ್ಪಡುತ್ತದೆ.

   ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರಣ್/ 

ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರ: ಸ ಉಚ್ಯತೇ//೬//

 ಯಾವ ಮೂಢ ಬುದ್ಧಿಯುಳ್ಳ ಮನುಷ್ಯನು ಸಮಸ್ತ ಇಂದ್ರಿಯಗಳನ್ನು ಹಠಪೂರ್ವಕವಾಗಿ  ತಡೆದು ಮನಸ್ಸಿನಲ್ಲಿ ಇಂದ್ರಿಯಗಳ ವಿಷಯಗಳನ್ನು ಚಿಂತಿಸುತ್ತ ಇರುತ್ತಾನೋ ಅವನು ಮಿಥ್ಯಾಚಾರಿ ಅರ್ಥಾತ್ ಡಾಂಭಿಕನೆಂದು ಹೇಳಲ್ಪಡುತ್ತಾನೆ.

****

ಯಜ್ಞಾರ್ಥಾತ್ಕರ್ಮಣೋನ್ಯತ್ರ ಲೋಕೋಯಂ ಕರ್ಮಬಂಧನ:/

ತದರ್ಥಂ ಕರ್ಮ ಕೌಂತೇಯ ಮುಕ್ತಸಂಗ: ಸಮಾಚರ//೯//

   ಯಜ್ಞದ ನಿಮಿತ್ತವಾಗಿ ಮಾಡಲ್ಪಡುವ ಕರ್ಮಗಳಲ್ಲದೆ ಬೇರೆಯಾದ ಕರ್ಮಗಳಲ್ಲಿ ತೊಡಗಿದ್ದುಕೊಂಡೇ  ಈ ಮನುಷ್ಯ ಸಮುದಾಯವು ಕರ್ಮಗಳಿಂದ ಬಂಧಿತವಾಗಿದೆ.ಆದ್ದರಿಂದ ಹೇ ಅರ್ಜುನನೇ ! ನೀನು ಆಸಕ್ತಿ ರಹಿತನಾಗಿ ಆ ಯಜ್ಞದ ನಿಮಿತ್ತವಾಗಿಯೇ ಚೆನ್ನಾಗಿ ಕರ್ತವ್ಯಕರ್ಮವನ್ನು ಮಾಡು.

 ಸಹಯಜ್ಞಾ: ಪ್ರಜಾ: ಸೃಷ್ಟ್ವಾ ಪುರೋವಾಚ ಪ್ರಜಾಪತಿ: /

ಅನೇನ ಪ್ರಸವಿಷ್ಯಧ್ವಮೇಷ ವೊಸ್ತ್ವಿಷ್ಟಕಾಮಧುಕ್//೧೦//

ಪ್ರಜಾಪತಿ ಬ್ರಹ್ಮನು ಕಲ್ಪದ ಆದಿಯಲ್ಲಿ ಯಜ್ಞಸಹಿತವಾಗಿ ಪ್ರಜೆಗಳನ್ನು ರಚಿಸಿ ಅವರಿಗೆ _ ನೀವುಗಳು ಈ ಯಜ್ಞದ ಮೂಲಕ ವೃದ್ಧಿಯನ್ನು ಪಡೆಯಿರಿ ಮತ್ತು ಈ ಯಜ್ಞವು ನಿಮ್ಮಗಳಿಗೆ ಇಚ್ಛಿಸಿದ ಭೋಗಗಳನ್ನು ಪ್ರಧಾನ ಮಾಡುವಂತಹುದಾಗಲಿ ಎಂದು ಹೇಳಿದನು.

****

    ದೇವಾನ್ಭಾವಯತಾನೇನ ತೇ ದೇವಾ ಭಾವಯಂತು ವ:/ 

ಪರಸ್ಪರಂ ಭಾವಯಂತ: ಶ್ರೇಯ: ಪರಮವಾಪ್ಸ್ಯಥ//೧೧//

 ನೀವುಗಳು ಈ ಯಜ್ಞದ ಮೂಲಕ ದೇವತೆಗಳನ್ನು ತೃಪ್ತಿಪಡಿಸಿರಿ ಮತ್ತು ಆ ದೇವತೆಗಳು ನಿಮ್ಮಗಳ ಉನ್ನತಿ ಮಾಡಲಿ. ಈ ಪ್ರಕಾರವಾಗಿ ನಿ:ಸ್ವಾರ್ಥಭಾವದಿಂದ ಒಬ್ಬರು ಇನ್ನೊಬ್ಬರನ್ನು ತೃಪ್ತಿಪಡಿಸುತ್ತಾ ನೀವುಗಳು ಪರಮ ಶ್ರೇಯಸ್ಸನ್ನು ಪಡೆಯುವಿರಿ.

ಇಷ್ಟಾನ್ಭೋಗಾನ್ಹಿವೋ ದೇವಾ ದಾಸ್ಯಂತೇ ಯಜ್ಞಭಾವಿತಾ: /

ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸ://೧೨//

ಯಜ್ಞದ ಮೂಲಕ ತೃಪ್ತರಾದ ದೇವತೆಗಳು ನಿಮ್ಮಗಳಿಗೆ ಬೇಡದಿದ್ದರೂ ಇಚ್ಛಿಸಿದ ಭೋಗಗಳನ್ನು ನಿಶ್ಚಯವಾಗಿಯೂ ಕೊಡುತ್ತಿರುವರು.ಈ ಪ್ರಕಾರವಾಗಿ ಆ ದೇವತೆಗಳ ಮೂಲಕ ಕೊಡಲ್ಪಟ್ಟ ಭೋಗಗಳನ್ನು ಯಾವ ಪುರುಷನು ಅವರಿಗೆ ಏನನ್ನೂ ಕೊಡದೆ ತಾನೇ ಭೋಗಿಸುತ್ತಾನೋ ಅವನು ಕಳ್ಳನೇ ಆಗಿದ್ದಾನೆ.

****

ಯಜ್ಞಶಿಷ್ಟಾಶಿನ: ಸಂತೋ ಮುಚ್ಯಂತೇ ಸರ್ವಕಿಲ್ಬಿಷೈ:/

ಭಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್//೧೩//

ಯಜ್ಞದಲ್ಲಿ ಉಳಿದ ಅನ್ನವನ್ನು ಸೇವಿಸುವ ಶ್ರೇಷ್ಠ ಪರುಷರು ಎಲ್ಲ ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ಯಾವ ಪಾಪೀ ಜನರು ತಮ್ಮ ಶರೀರ ಪೋಷಣೆಗಾಗಿಯೇ ಅನ್ನವನ್ನು ತಯಾರಿಸುತ್ತಾರೋ ಅವರಾದರೋ ಪಾಪವನ್ನೇ ತಿನ್ನುತ್ತಾರೆ.

ಅನ್ನಾದ್ಬವಂತಿ ಭೂತಾನಿ ಪರ್ಜನ್ಯಾದನ್ನಸಂಭವ:/

ಯಜ್ಞಾದ್ದವತಿ ಪರ್ಜನ್ಯೋ ಯಜ್ಞ: ಕರ್ಮಸಮುದ್ಬವ://೧೪//

ಸಂಪೂರ್ಣ ಪ್ರಾಣಿಗಳು ಅನ್ನದಿಂದ ಉತ್ಪನ್ನವಾಗುತ್ತವೆ.ಅನ್ನದ ಉತ್ಪತ್ತಿಯು ವೃಷ್ಠಿಯಿಂದ ಆಗುತ್ತದೆ ಮತ್ತು ಯಜ್ಞವು ವಿಹಿತವಾದ ಕರ್ಮಗಳಿಂದ ಉತ್ಪನ್ನವಾಗುತ್ತವೆ.

****

-(ಸಾರ ಸಂಗ್ರಹ) ವಿಜಯಾ ಶೆಟ್ಟಿ, ಸಾಲೆತ್ತೂರು