ಸವೆಯದ ದಾರಿ -ಆತ್ಮ ವೃತ್ತಾಂತ
*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*
- Read more about ಸವೆಯದ ದಾರಿ -ಆತ್ಮ ವೃತ್ತಾಂತ
- Log in or register to post comments
*ಡಾ. ರಮಾನಂದ ಬನಾರಿಯವರ ಆತ್ಮ ವೃತ್ತಾಂತ "ಸವೆಯದ ದಾರಿ"*
ದೇವಿಯೆ ಕಾಪಾಡು ಕರವನು ಮುಗಿದೆವು
ನೀ ಸಲಹುತಿರು ಮಾತೆ ನಮ್ಮನೆಲ್ಲಾ
ಅಭಯಹಸ್ತ ನೀಡು ತಾಯಿ ಸದಾ ಬೇಡುವೆ
ದೈನ್ಯತೆಯಲಿ ಬೇಡುವೆ ಮಹಾದೇವಿ...
ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ
ಈ ಎರಡು ಸಂಗತಿಗಳನ್ನು ನೀವು ಎಲ್ಲಿಯಾದರೂ ಓದಿರಬಹುದು.
1) ಅವನಿಗೆ ಸಾವಿರ ತಲೆಗಳು, ಸಾವಿರ ಕಣ್ಣುಗಳು, ಸಾವಿರ ಕೈಗಳು, ಸಾವಿರ ಕಾಲುಗಳು ಇತ್ಯಾದಿ
2) ಅವನ ಮುಖದಿಂದ ಬ್ರಾಹ್ಮಣರೂ, ಅವನ ತೋಳುಗಳಿಂದ ಕ್ಷತ್ರಿಯರೂ ಅವನ ತೊಡೆಗಳಿಂದ ವೈಶ್ಯರೂ ಅವನ ಅಡಿಗಳಿಂದ ಶೂದ್ರರೂ ಹುಟ್ಟಿದರು.
ಇವು ಪುರುಷಸೂಕ್ತದಲ್ಲಿ ಬರುತ್ತವೆ. ಇತ್ತೀಚೆಗೆ ಗೂಗಲ್ - e-ಪುಸ್ತಕಗಳಲ್ಲಿ ಡಿ ವಿ ಜಿ ಅವರು ಬರೆದ ಈ ಪುಸ್ತಕವು ಗಮನ ಸೆಳೆಯಿತು. ಗೂಗಲ್ ನ e-ಪುಸ್ತಕಗಳ ಅನುಕೂಲ ವೆಂದರೆ ಖರೀದಿಸುವ ಮೊದಲೇ ಕೆಲವು ಪುಟಗಳನ್ನು sample ಎ೦ದು ಓದುವ ಸೌಲಭ್ಯ ಇದೆ. ಹಾಗೆ ಓದಿ ಪುಸ್ತಕಕ್ಕಾಗಿ ಹಣ ಕೊಡುವ ಬಗ್ಗೆ ನಿರ್ಧರಿಸಬಹುದು.
ಕಲೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದೆ ವಿಶ್ವಕರ್ಮರು ಯಾಕೆಂದರೆ ನಮ್ಮ ಕನ್ನಡನಾಡು ಹಾಗೂ ದೇಶದಲ್ಲಿಯ ದೇಗುಲಗಳ ಕಲಾವೈಭವ ವಿಶ್ವಕರ್ಮ ವಂಶಜ ಅಮರ ಶಿಲ್ಪಿ ಜಕಾಣಾಚಾರ್ಯ ಅವರು ಮತ್ತು ಅವರ ತಂಡದಿಂದ ಈ ನಾಡಿಗೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ಅಂತ ಇತಿಹಾಸ ಹೇಳುತ್ತದೆ. ನಾನು ಈಗ ತಿಳಿಸಲು ಹೊರಟಿರುವ ವಿಷಯ ವಿಶ್ವಕರ್ಮ ವಂಶದಲ್ಲಿ ಹುಟ್ಟಿ ಬೆಳೆದು ಕಲೆಯನ್ನೆ ಉಸಿರಾಗಿಸಿಕೊಂಡು ಬಂದ ಉತ್ತರಕರ್ನಾಟಕದ ಹಿರಿಯ ಕಲಾವಿದರೊಬ್ಬರ ಉನ್ನತ ಜಾನಪದ ಕಲೆಯ ಬಗ್ಗೆ. ಶ್ರೀ ಗಂಗಾಧರ ಬಸಪ್ಪಾ ವಿಶ್ವಕರ್ಮ ಅವರು ತೀರಾ ಬಡತನದಲ್ಲಿ ಬೆಳೆದು ಬಂದವರು ಇವರ ತಂದೆ ಕೂಡ ಒಬ್ಬ ಶಿಲ್ಪಿಯಾದ್ದರಿಂದ ಗಂಗಾಧರ ಕೂಡ ತಮ್ಮ ಬಾಲ್ಯದಲ್ಲಿಯೇ ಶಿಲ್ಪಕಲೆಯನ್ನೆ ಮೈಗೂಡಿಸಿಕೊಂಡವರು.
‘ಕತ್ತೆಗೇನು ಗೊತ್ತು ಕಸ್ತೂರಿಯ ಗಂಧ' ಎಂಬುದು ಹಳೆಯ ಗಾದೆ ಮಾತು. ಕಸ್ತೂರಿಯ ಸುವಾಸನೆಯು ಬಹಳ ಪ್ರಸಿದ್ಧ. ನೈಜವಾದ ಕಸ್ತೂರಿ ಉತ್ಪಾದನೆಯಾಗುವುದು ಕಸ್ತೂರಿ ಮೃಗ ಎಂಬ ಜಿಂಕೆ ಜಾತಿಯ ಪ್ರಾಣಿಯ ಗ್ರಂಥಿಗಳಲ್ಲಿ. ಕಸ್ತೂರಿ ಪರಿಮಳ ಸೂಸುವಾಗ ಕಸ್ತೂರಿ ಮೃಗಕ್ಕೆ ಆ ಸುವಾಸನೆ ಎಲ್ಲಿಂದ ಬರುತ್ತದೆ ಎಂದು ತಿಳಿಯದೇ, ಇಡೀ ಕಾಡಿನಲ್ಲಿ ಓಡಾಡಿ ಸುಸ್ತು ಮಾಡಿಕೊಳ್ಳುತ್ತದೆಯಂತೆ. ಹೀಗೆ ಬಳಲಿದ ಪ್ರಾಣಿಯನ್ನು ಬೇಟೆಗಾರರು ಸುಲಭವಾಗಿ ಹಿಡಿದು ಕೊಂಡು ಅದರ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆಯುತ್ತಾರಂತೆ. ಇದು ಎಷ್ಟು ಸತ್ಯ ಮಾತೋ ಗೊತ್ತಿಲ್ಲ. ಆದರೆ ಬಹು ಸಮಯದಿಂದ ಪ್ರಚಲಿತವಿರುವ ಸಂಗತಿ.
ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ.
ದೇವಿಯ ಐದನೇ ರೂಪವು ಸ್ಕಂದ ಮಾತೆಯಾಗಿದ್ದಾಳೆ. ಈ ದೇವಿಯನ್ನು ಪಂಚಮಿಯ ದಿವಸ ಪೂಜಿಸುವರು. ಈ ದೇವಿಯನ್ನು ಪಂಚಮಿ ಎಂದೂ ಕೂಡ ಕರೆಯುತ್ತಾರೆ. ಇವಳ ಶರೀರವು ಬಿಳಿಯ ಬಣ್ಣವಾಗಿ, ಮಮತಾಮಯಿಯಾಗಿ, ಮಾತೃಸ್ವರೂಪಿಯಾಗಿ ವಿರಾಜಿಸುತ್ತಿದ್ದಾಳೆ.
ಅಧ್ಯಾಯ ೨
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ ನು ವಿಧೀಯತೇ/
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ//೬೭//
ಸಿಂಹವಾಹಿನಿ ದೇವಿ ಚರಣಕೆ
ನಮಿಸಿ ಭಕ್ತಿಲೆ ಬಾಗುವೆ|
ಕಾರ್ತಿಕೆಯನನು ಮಡಿಲಿನಲ್ಲಿಯೆ
ಪೊರೆದ ಮಾತೆಗೆ ನಮಿಸುವೆ||
ಕಮಲ ದಳದಲಿ ಪದ್ಮಾಸನದಲಿ
ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ
ಇಲ್ಲದ ಬೀಗದ ಕೈ ಹುಡುಕುವ
ಮೊದಲು ಸೆರೆಮನೆಯಾಗಿತ್ತೆಂದು
ಬಳಲುವದೇಕೆ
ಅಳುವದೇಕೆ
ಮುಂದೆ ತಲೆ ಎತ್ತಿ ನೋಡಿದಂತೆಲ್ಲ
ಇರುವಷ್ಟು ದಿನ ಈ ಕಡೆಯಿಂದ
ಆ ಕಡೆಯವರೆಗೆ
ನಾವಿಬ್ಬರೂ
ಇದ್ದ ಮೇಲೆ ಹರಟುವದೆಷ್ಟು
ನೀ
ಬಳಿ ಇಲ್ಲವಾದ ಮೇಲೆ
ಎಲ್ಲರ ಪಾಡಂತೆ ನನ್ನದಾಗಿರಲಿಲ್ಲ
ನಿನ್ನಯವೇ ಎಲ್ಲ ಕಟ್ಟುಪಾಡುಗಳು
ಅಲ್ಲಲ್ಲಿ ಹೂತು ಹೋಗಿದ್ದರೂ
ನನ್ನನ್ನೇ ನಿರುಕಿಸುತ್ತ ನಿಟ್ಟುಸಿರಿನಲ್ಲೇ
ಅಳಿದುಳಿದ ಕನಸುಗಳನು
ಎಣಿಸುತ್ತ,
ಅಣಕಿಸುತ್ತ ಅತ್ತಿತ್ತ ಹರಡಿಕೊಂಡವು
ನಿನ್ನನ್ನೇ ತಿಳಿದುಕೊಳ್ಳಲು ಸಕಲ
ಓಂಕಾರ ರೂಪಿಣಿ
ಅಂಬಾ ಭವಾನಿ
ಶ್ರೀ ಜಯದುರ್ಗೆ ಶರಣೆನ್ನುವೆ//
ಶಿಷ್ಟರನು ಪೊರೆಯುತಲಿ
ದುಷ್ಟರನು ತರಿಯುತಲಿ