ಕಾತ್ಯಾಯಿನಿ ದೇವಿ

ಕಾತ್ಯಾಯಿನಿ ದೇವಿ

ಕವನ

ದೇವಿಯೆ ಕಾಪಾಡು ಕರವನು ಮುಗಿದೆವು

ನೀ ಸಲಹುತಿರು ಮಾತೆ ನಮ್ಮನೆಲ್ಲಾ

ಅಭಯಹಸ್ತ ನೀಡು ತಾಯಿ ಸದಾ ಬೇಡುವೆ

ದೈನ್ಯತೆಯಲಿ ಬೇಡುವೆ ಮಹಾದೇವಿ...

 

ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ

ತ್ರಿನೇತ್ರಧಾರಿಣಿ ಸಿಂಹರೂಢವಾಹಿನಿ

ಶಕ್ತಿ ಪ್ರೀತಿ ಬಿಂಬಿಸುವ ಮಹಾಕಾಳಿ ಜನನಿಯೆ

ಮಹಿಷನ ವಧಿಸಿದ ಮಹಿಷಾಸುರವರ್ಧಿನಿ..

 

ನಾಡನು ಪೊರೆಯುವ ಶಕ್ತಿಮಾತೆ ವಿಶ್ವಕಾರ್ತಿ

ದುಷ್ಟಶಕ್ತಿ ಸಂಹರಿಸೋ ನಮೋಸ್ತುತೆ

ಶಿಷ್ಟರನು ರಕ್ಷಿಸು ಹೇ ಅಂಬಾ ವಿಶ್ವಹಾರ್ತಿ

ಸಿಂಹಸ್ಥಿತಂ ಪದ್ಮಹಸ್ತ ನಮೋಸ್ತುತೆ...

 

ಜ್ಞಾನ ವಿವೇಕ ಸ್ವರೂಪಿಣಿ ವಿಶ್ವವಿನೋದಿನಿ

ಕರುಣಿಸೈ ಕಾತ್ಯಾಯಿನಿ ಮಹಾದೇವಿ

ನಂಬಿದವ ಸಲಹುವ ವಿಶ್ವಾತೀತ ವಿಶ್ವಭಾರತಿ

ಭುವನ ಪಾಲಿತದಲಿ ಜಯದೇವಿ...

 

ಶರ್ದೂಲ ವರವಾಹನ ಕಾತ್ಯಾಯಿನಿ ದೇವಿ

ಕರಮುಗಿದು ಬೇಡುವೆ ಕರುಣಿಸು

ವರವ ನೀಡು ಸರ್ವಭೂತೇಸು ಗೀರ್ವಾಣಿ

ಭಜಿಸುತ ನಿತ್ಯವೂ ಜಗಜ್ಜನನಿ...

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್