ಗೀತಾಮೃತ - 7
ಅಧ್ಯಾಯ ೨
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋ ನು ವಿಧೀಯತೇ/
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ//೬೭//
ಏಕೆಂದರೆ ಹೇಗೆ ನೀರಿನಲ್ಲಿ ಚಲಿಸುವ ನಾವೆಯನ್ನು ವಾಯುವು ಅಪಹರಿಸುತ್ತದೋ,ಹಾಗೆಯೇ _ ವಿಷಯಗಳಲ್ಲಿ ಚರಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯವು ಈ ಅಯುಕ್ತಪುರುಷನ ಬುದ್ಧಿಯನ್ನು ಅಪಹರಿಸುತ್ತದೆ.
ತಸ್ಮಾದ್ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶ:/
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ//೬೮//
ಅದಕ್ಕಾಗಿ ಹೇ ಮಹಾಬಾಹುವೇ ! ಯಾವ ಪುರುಷನ ಇಂದ್ರಿಯಗಳ ವಿಷಯಗಳಿಂದ ಎಲ್ಲಾ ಪ್ರಕಾರವಾಗಿ ನಿಗ್ರಹಿಸಲ್ಪಟ್ಟಿದೆಯೋ, ಅವನ ಬುದ್ಧಿಯು ಸ್ಥಿರವಾಗಿದೆ.
*****
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ/
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯಂತೋ ಮುನೇ://೬೯//
ಸಂಪೂರ್ಣ ಪ್ರಾಣಿಗಳಿಗಾಗಿ ಯಾವುದು ರಾತ್ರಿಗೆ ಸಮಾನ ವಾಗಿದೆಯೋ ಆ ನಿತ್ಯಜ್ಞಾನಸ್ವರೂಪವಾದ ಪರಮಾನಂದದ ಪ್ರಾಪ್ತಿಯಲ್ಲಿ ಸ್ಥಿತಪ್ರಜ್ಞನಾದ ಯೋಗಿಯು ಎಚ್ಚರಿರುತ್ತಾನೆ ಮತ್ತು ಯಾವ ನಾಶವಾಗುವ ಸಾಂಸಾರಿಕ ಸುಖದ ಪ್ರಾಪ್ತಿ ಯಲ್ಲಿ ಎಲ್ಲ ಪ್ರಾಣಿಗಳು ಎಚ್ಚರವಾಗಿತ್ತವೆಯೋ ಪರಮಾತ್ಮ ತತ್ವವನ್ನು ಅರಿತಿರುವ ಮುನಿಗೆ ಅದು ರಾತ್ರಿಗೆ ಸಮಾನವಾಗಿದೆ.
ಆಪೂರ್ಯಮಾಣಮಚಲಪ್ರತಿಷ್ಠಂ
ಸಮುದ್ರ ಮಾಪ: ಪ್ರವಿಶಂತಿ ಯದ್ವತ್/
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ
ಸ ಶಾಂತಿಮಾಪ್ನೋತಿ ನ ಕಾಮಕಾಮೀ//೭೦//
ಯಾವ ರೀತಿಯಲ್ಲಿ ನಾನಾ ನದಿಗಳ ಜಲವು ಯಾವಾಗ ಎಲ್ಲ ಕಡೆಯಿಂದ ಪರಿಪೂರ್ಣವಾದ ಅಚಲ ಪ್ರತಿಷ್ಠೆಯುಳ್ಳ ಸಮುದ್ರದಲ್ಲಿ, ಅದನ್ನು ವಿಚಲಿತವಾಗಿಸದಯೇ ಸೇರಿಹೋಗುತ್ತವೆಯೋ ಹಾಗೆಯೇ ಎಲ್ಲ ಭೋಗಗಳು ಸ್ಥಿತಪ್ರಜ್ಞಪುರುಷನಲ್ಲಿ ಯಾವ ಪ್ರಕಾರವಾದ ವಿಕಾರವನ್ನೂ ಉಂಟುಮಾಡದೆಯೇ ಸೇರಿಹೋಗುತ್ತದೆ, ಆ ಪುರುಷನು ಪರಮಶಾಂತಿಯನ್ನು ಪಡೆಯುತ್ತಾನೆ _ ಭೋಗಗಳನ್ನು ಬಯಸುವವನು ಪಡೆಯುವುದಿಲ್ಲ.
***
ವಿಹಾಯ ಕಾಮಾನ್ಯ: ಸರ್ವಾನ್ ಪುಮಾಂಶ್ಚರತಿ ನಿ:ಸ್ಪ್ರ ಹ:/
ನಿರ್ಮಮೋ ನಿರಹಂಕಾರ: ಸ ಶಾಂತಿಮಧಿಗಚ್ಛತಿ//೭೧//
ಯಾವ ಪುರುಷನು ಸಂಪೂರ್ಣವಾಗಿ ಎಲ್ಲಾ ಕಾಮನೆಗಳನ್ನು ತ್ಯಜಿಸಿ, ಮಮತಾರಹಿತನೂ,ಅಹಂಕಾರರಹಿತನೂ,ಸ್ಪ್ರಹಾರಹಿತನೂ ಆಗಿ ವಿಚರಿಸುತ್ತಾನೋ ಅವನೇ ಶಾಂತಿಯನ್ನು ಪಡೆದಿದ್ದಾನೆ.
ಏಷಾ ಬ್ರಾಹ್ಮೀ ಸ್ಥಿತಿ: ನೈನಾಂ ಪ್ರಾಪ್ಯ ವುಮುಹ್ಯತಿ/
ಸ್ಥಿತ್ವಾಸ್ಯಾಮಂತಕಾಲೇಪಿ ಬ್ರಹ್ಮನಿರ್ವಾಣಮೃಚ್ಛತಿ//೭೨//
ಹೇ ಅರ್ಜುನನೇ ! ಇದು ಬ್ರಹ್ಮವನ್ನು ಪಡೆದುಕೊಂಡ ಪುರುಷನ ಸ್ಥಿತಿ ಯಾಗಿದೆ.ಇದನ್ನು ಪಡೆದ ಯೋಗಿಯು ಎಂದೂ ಮೋಹಿತನಾಗುವುದಿಲ್ಲ, ಮತ್ತು ಅಂತ್ಯಕಾಲದಲ್ಲಿ ಕೂಡ ಈ ಬ್ರಾಹ್ಮೀ ಸ್ಥಿತಿಯಲ್ಲಿ ಸ್ಥತನಾಗಿದ್ದು ಬ್ರಹ್ಮಾನಂದವನ್ನು ಪಡೆಯುತ್ತಾನೆ.
*****
ಓಂ ತತ್ಸದಿತಿ ಶ್ರೀ ಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನಸಂವಾದೇ
ಸಾಂಖ್ಯಯೋಗೋ ನಾಮ ದ್ವಿತೀಯೋಧ್ಯಾಯ://೨//
//ಅಥ ತೃತೀಯೋಧ್ಯಾಯವು//
ಕರ್ಮ ಯೋಗವು
ಅರ್ಜುನ ಉವಾಚ
ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ದರ್ಜನಾರ್ದನ/
ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ//೧//
ಅರ್ಜುನನು ಹೇಳಿದನು _ ಹೇ ಜನಾರ್ದನನೇ ! ಒಂದು ವೇಳೆ ನಿನಗೆ ಕರ್ಮಕ್ಕಿಂತ ಜ್ಞಾನವು ಶ್ರೇಷ್ಠ ವೆಂದು ಮಾನ್ಯವಾದರೆ ಹೇ ಕೇಶವನೇ ! ಮತ್ತೇಕೆ ನನ್ನನ್ನು ಭಯಂಕರವಾದ ಕರ್ಮದಲ್ಲಿ ತೊಡಗಿಸುತ್ತೀಯೆ?
ವ್ಯಾಮಿಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ/
ತದೇಕಂ ವದ ನಿಶ್ಚಿತ್ಯ ಯೇನ ಶ್ರೇಯೋಹಮಾಫ್ನುಯಾಮ್//೨//
ನೀನು ಗೊಂದಲದಂತಿರುವ ವಚನಗಳಿಂದ ನನ್ನ ಬುದ್ಧಿಯನ್ನು ಮೋಹಗೊಳಿಸುತ್ತಿರುವಂತೆ ಕಾಣುತ್ತಿದೆ.ಆದ್ದರಿಂದ ಯಾವುದರಿಂದ ನಾನು ಶ್ರೇಯಸ್ಸನ್ನು ಹೊಂದುವೆನೋ ಆ ಒಂದು ಮಾತನ್ನು ನಿಶ್ಚಯಿಸಿ ಹೇಳು.
****
-ವಿಜಯಾ ಶೆಟ್ಟಿ, ಸಾಲೆತ್ತೂರು (ಸಾರ ಸಂಗ್ರಹ)