ನವರಾತ್ರಿಯ ಐದನೆಯ ದಿನದ ಪೂಜೆಯ ಸ್ಕಂದಮಾತಾ ದೇವಿ
ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ.
ದೇವಿಯ ಐದನೇ ರೂಪವು ಸ್ಕಂದ ಮಾತೆಯಾಗಿದ್ದಾಳೆ. ಈ ದೇವಿಯನ್ನು ಪಂಚಮಿಯ ದಿವಸ ಪೂಜಿಸುವರು. ಈ ದೇವಿಯನ್ನು ಪಂಚಮಿ ಎಂದೂ ಕೂಡ ಕರೆಯುತ್ತಾರೆ. ಇವಳ ಶರೀರವು ಬಿಳಿಯ ಬಣ್ಣವಾಗಿ, ಮಮತಾಮಯಿಯಾಗಿ, ಮಾತೃಸ್ವರೂಪಿಯಾಗಿ ವಿರಾಜಿಸುತ್ತಿದ್ದಾಳೆ.
ಸ್ಕಂದಮಾತೆಯ ತೊಡೆಯ ಮೇಲೆ ಸ್ಕಂದನು ಬಾಲರೂಪದಲ್ಲಿ ಆಸೀನನಾಗಿದ್ದಾನೆ. ಕಾರ್ತಿಕೇಯನನ್ನು (ಸುಬ್ರಮಣ್ಯ) ಸ್ಕಂದ ಎಂದು ಕರೆಯುತ್ತಾರೆ. ಹಾಗಾಗಿ ಆಕೆಯ ಹೆಸರು ಸ್ಕಂದ ಮಾತೆ ಎಂದಾಗಿದೆ. ದೇವತೆಗಳನ್ನು ರಾಕ್ಷಸರಿಂದ ಸಂರಕ್ಷಿಸಲು ಶಿವಪಾರ್ವತಿಯರ ಸುತನಾಗಿ ಜನಿಸಿದ ಸ್ಕಂದ ಭಗವಾನನ ಮಾತೆಯಾಗಿರುವಳು.
ಸ್ಕಂದ ಮಾತೆಯು ನಾಲ್ಕು ಭುಜಗಳನ್ನು ಹೊಂದಿದ್ದು, ಸ್ಕಂದನನ್ನು ಮಡಿಲಿನಲ್ಲಿ ಇಟ್ಟುಕೊಂಡಿರುತ್ತಾಳೆ. ಬಲಗೈನಲ್ಲಿ ಬಾಲಕ ಸ್ಕಂದನನ್ನು ಆಧರಿಸಿ ಹಿಡಿದಿದ್ದು, ಎಡಗೈನಲ್ಲಿ ವರದ ಹಸ್ತ, ಉಳಿದ ಎರಡು ಕೈನಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ.
ಇಲ್ಲಿ ದೇವಿಯು ಮಾತೃ ಸ್ವರೂಪಿಣಿಯಾಗಿ ಭಕ್ತರನ್ನು ಹರಸುವಳು. ಎನ್ನುವ ಸೂಚನೆಯಿದು. ಅವಳು ಉಗ್ರವಾದ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ತ್ರಿನೇತ್ರ ಧಾರಿಣಿಯಾಗಿರುತ್ತಾಳೆ. ಶುಕ್ಲ ಪಕ್ಷ ಪಂಚಮಿಯ ದಿನವಾದ ಇಂದು (ನವರಾತ್ರಿಯ ಐದನೇ ದಿನ) ಸ್ಕಂದ ಮಾತೆಗೆ ವಿಶೇಷ ಪೂಜೆ ಮಾಡಲಾಗುವುದು...
ಕಾರ್ತಿಕೇಯನಿಗೆ ಮಯೂರವಾಹನ, ಕುಮಾರ, ಶಕ್ತಿಧರ, ಮುಂತಾದ ಹೆಸರುಗಳಿವೆ. ಈ ಹೆಸರುಗಳಿಂದ ಭಜಿಸಲ್ಪಡುವ ಭಗವಾನ್ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ *'ಸ್ಕಂದಮಾತಾ'* ಎಂದು ಪ್ರಸಿದ್ಧಳಾಗಿದ್ದಾಳೆಂದು ಕೂಡ ಹೇಳುವರು.. ಈ ಸ್ಕಂದಮಾತೆಯನ್ನು ಆರಾಧನೆ ಮಾಡಿದಲ್ಲಿ ಭಗವಾನ್ ಸ್ಕಂದನ ಉಪಾಸನೆಯನ್ನೂ ಕೂಡ ಮಾಡಿದಂತಾಗುತ್ತದೆ...
ತನ್ನ ಮಗ ಸ್ಕಂದನನ್ನು ಹೊತ್ತಿರುವ ದುರ್ಗಾ ದೇವಿಯ ಈ ಅವತಾರವು ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುವುದು. ಈ ಅವತಾರದಲ್ಲಿ ದೇವಿಯು ತುಂಬಾ ಸಂತೋಷದಿಂದ ಮತ್ತು ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಂಡಿದ್ದಾಳೆ. ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ಎರಡು ಆಶೀರ್ವಾದವನ್ನು ಪಡೆದುಕೊಳ್ಳಬಹುದು. ಒಂದು ದೇವಿಯ ಆಶೀರ್ವಾದ ಹಾಗೂ ಸ್ಕಂದ ಪುತ್ರನ ಆಶೀರ್ವಾದ. ಈ ಅವತಾರಕ್ಕೆ ಪೂಜೆ ಸಲ್ಲಿಸುವುದರಿಂದ ಭಕ್ತರು ಜೀವನದ ಸಮಸ್ಯೆಯಿಂದ ಮುಕ್ತರಾಗಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವರು.
*ಸ್ಕಂದ ಮಾತೆಯ* *ಪ್ರಾಮುಖ್ಯತೆ*
ಈ ದೇವಿಯು ಬುಧಗ್ರಹದ ಅಧಿದೇವತೆಯಾಗಿದ್ದು, ಈಕೆಯನ್ನು ಪೂಜಿಸುವುದರಿಂದ ಸಕಲ ವ್ಯಾಪಾರ, ವ್ಯವಹಾರಗಳು ಅಡೆತಡೆ ಇಲ್ಲದೇ ನಡೆಯುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೆ. ಅಂತಹವರಿಗೆ ದೇವಿ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ತನ್ನ ಭಕ್ತರಿಗಾಗಿ ದೇವಿ ಸಹಾನುಭೂತಿ ತೋರುವಳು. ಜನ್ಮ (ಜಾತಕ ) ಕುಂಡಲಿಯಲ್ಲಿ ಬುಧನು ಪ್ರತಿಕೂಲದ ಸ್ಥಾನದಲ್ಲಿದ್ದರೆ ಉಂಟಾಗುವ ಎಲ್ಲಾ ತೊಂದರೆಗಳನ್ನು ನಿವಾರಿಸುವಳು...
ಸ್ಕಂದ ಮಾತೆಯು ಕೆಂಪು ಬಣ್ಣದ ಹೂವು, ಪಾರಿಜಾತ, ವಿಶೇಷವಾಗಿ ಗುಲಾಬಿ ಹೂವನ್ನು ಪ್ರೀತಿಸುತ್ತಾಳೆ. ಈ ಹೂವುಗಳಿಂದ ದೇವಿಯನ್ನು ಪೂಜಿಸಬಹುದು. ತಾಯಿಗೆ ಬಾಳೆಹಣ್ಣು ಅರ್ಪಿಸಿದರೆ ಒಳ್ಳೆಯದಾಗುತ್ತದೆ ಹಾಗೂ
ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.
*ಐದನೇ ದಿನದ* *ಪ್ರಾಮುಖ್ಯತೆ*
ನವರಾತ್ರಿಯ ಐದನೇ ದಿವಸದ ಮಾತೆಯ ಪೂಜೆಯಿಂದಾಗಿ ಭಕ್ತರ ಹೃದಯವು ಶುದ್ಧವಾಗುವುದು. ಅಲ್ಲದೆ ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುವಳು. ದೇವಿಯ ಆರಾಧನೆಯಿಂದ ಭಕ್ತರು ಪ್ರಖ್ಯಾತಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವರು.
ನವರಾತ್ರಿಯ ಐದನೇ ದಿನದ ಪೂಜೆಯ ದಿನವು ಮಹಾಲಕ್ಷ್ಮಿಯ ಎರಡನೇ ಪೂಜೆಯಾಗಿರುತ್ತದೆ. ಆದ್ದರಿಂದ ನವರಾತ್ರಿಯ ಐದನೇ ದಿನ ಸಂಪತ್ತು ಮತ್ತು ಖ್ಯಾತಿಗಾಗಿ ದೇವಿಯನ್ನು ಆರಾಧಿಸಬಹುದು. ಸಾಧಕರು ವಿಶುದ್ಧಿ ಚಕ್ರದ ಮೇಲೆ ಗಮನವಿರಿಸಿ ಧ್ಯಾನ ಮಾಡುವರು.
*ಸ್ಕಂದ ಮಾತೆಯ* *ಮಂತ್ರಗಳು*
"ಓಂ ದೇವಿ ಸ್ಕಂದಮಾತಾಯ ನಮಃ
ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ
ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ."
*ಸ್ಕಂದ ಮಾತೆಯ* *ಪ್ರಾರ್ಥನೆ*
"ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ
ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ."
*ಸ್ಕಂದ ಮಾತೆಯ ಸ್ತುತಿ*
"ಯಾ ದೇವಿ ಸರ್ವಭಯತೇಶು ಮಾ ಸ್ಕಂದಮಾತಾ ರೂಪೇಣ ಸಮಷಿತಃ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ."
*ಸ್ಕಂದ ಮಾತೆಯ ಧ್ಯಾನ*
"ವಂದೇ ವಂಚಿತ ಕಾಮರ್ಥೇ ಚಂದ್ರಧರಿತ್ರಶೇಖರಂ
ಸಿಂಹರುಧ ಚತುರ್ಭುಜಾ ಸ್ಕಂದಮಾತಾ ಯಶಸ್ವಿನಿಂ
ಧವಲವರ್ಣ ವಿಶುದ್ಧ ಚಕ್ರಸ್ಥಿತೋಮ್ ಪಂಚಮ ದುರ್ಗಾ ತ್ರಿನೇತ್ರಮ್
ಅಭಯ ಪದ್ಮ ಯುಗ್ಮ ಕರಮ್ ದಕ್ಷಿಣ ಉರು ಪುತ್ರಧರಂ ಭಜೆಮ್
ಪತಂಬರಾ ಪರಿಧನಮ್ ಮೃದುಹಾಸ್ಯ ನಾನಾಲಂಕಾರ ಭೂಷಿತಂ
ಮಂಜಿರಾ, ಹರಾ, ಕೀರುರಾ, ಕಿಂಕಿನಿ, ರತ್ನಕುಂಡಲ ಧಾರಿಣಿಂ
ಪ್ರಫುಲ್ಲ ವಂದನಾ ಪಲ್ಲವಧಾರಣಂ ಕಾಂತಾ ಕಪೋಲಮ್ ಪಿನಾ ಪಯೋಧರಂ
ಕಾಮನಿಯಮ್ ಲಾವಣ್ಯಂ ಚಾರು ತ್ರೈವಲಿ ನಿತಾಂಬನಿಮ್."
*ಸ್ಕಂದ ಮಾತೆಯ ಸ್ತೋತ್ರ*
"ನಮಾಮಿ ಸ್ಕಂದ ಮಾತಾ ಸ್ಕಂದಾಧಾರಿಣಿಂ
ಸಮಗ್ರತಾಸ್ವಾಸಗರಂ ಪರಪರಗಹರಾಮ್
ಶಿವಪ್ರಭ ಸಮುಜ್ವಲಾಂ ಸ್ಪೂಚ್ಚಾಶಾಶಶೇಖರಂ
ಲಲತಾರತ್ನಭಾಸ್ಕರಂ ಜಗತ್ಪ್ರದೀಪ್ತಿ ಭಾಸ್ಕರಂ
ಮಹೇಂದ್ರಕಶ್ಯಪಾರ್ಚಿತ ಸನಂತಕುಮಾರ ಸಮಸ್ತುತಂ
ಸುರಸುರೇಂದ್ರವಂದಿತಂ ಯಥಾರ್ಥನಿರ್ಮಲಾದ್ಭುತಂ
ಅಟಾರ್ಕಿರೋಚಿರುವಿಜಂ ವಿಕಾರ ದೋಷವಾರ್ಜಿತಂ
ಮುಮುಕ್ಷುಭಿರ್ವಿಚಿಂತಿತಂ ವಿಶೇಷತತ್ವಮುಚ್ಚಿತಂ
ನಾನಾಲಂಕಾರ ಭೂಷಿತಂ ಮೃಗೇಂದ್ರವಾಹನಗೃಜಂ
ಸುಶುದ್ಧಾತತ್ವೊಶನಮ್ ತ್ರಿವೇಂದಮರ ಭೂಷಣಂ
ಸುಧಾರ್ಮಿಕಾಪುಕಾರಿನಿ ಸುರೇಂದ್ರ ವೈರಿಗ್ರತಿನಿಮ್
ತಮೋಂದಕರಾಯಮಿನಿ ಶಿವಾಶುಭಾವಕಾಮಿನಿಮ್
ಸಹಸ್ರಸೂರ್ಯರಂಜಿಕಮ್ ಧನಜ್ಜೋಗಕಾರಿಕಮ್
ಸಿಶುದ್ಧಾ ಕಾಲ ಕುಂಡಲಾ ಸುಭ್ರಿದವೃಂದಮಾಜ್ಜುಲಮ್
ಪ್ರಜಾಯಿಣಿ ಪ್ರಜಾವತಿ ನಮಾಮಿ ಮಾತರಂ ಸತೀಂ
ಸ್ವಕರ್ಮಕಾರಣೇ ಗತಿಂ ಹರಿಪ್ರಯಾಚ ಪಾರ್ವತಿಂ
ಅನಂತಶಕ್ತಿ ಕಾಂತಿದಾಮ್ ಯಶೋರ್ಥಭಕ್ತಿಮುಕ್ತಿದಾಮ್
ಪುನಃ ಪುನಾರ್ಜಗದ್ದಿತಮ್ ನಮಾಮ್ಯಮ್ ಸುರಾರ್ಚಿತಮ್
ಜಯೇಶ್ವರಿ ತ್ರಿಲೋಚನೆ ಪ್ರಸಿದ್ ದೇವಿ ಪಾಹಿಮಾಮ್."
ಸರ್ವರಿಗೂ ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಚಿತ್ರ: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತಿರುವ ಸ್ಕಂದಮಾತಾ ದೇವಿ
(ಮಾಹಿತಿ ಸಂಗ್ರಹ)