ಸ್ಕಂದಮಾತಾ ದೇವಿ

ಸ್ಕಂದಮಾತಾ ದೇವಿ

ಕವನ

ಸಿಂಹವಾಹಿನಿ ದೇವಿ ಚರಣಕೆ

ನಮಿಸಿ ಭಕ್ತಿಲೆ ಬಾಗುವೆ|

ಕಾರ್ತಿಕೆಯನನು ಮಡಿಲಿನಲ್ಲಿಯೆ

ಪೊರೆದ ಮಾತೆಗೆ ನಮಿಸುವೆ||

 

ಕಮಲ ದಳದಲಿ ಪದ್ಮಾಸನದಲಿ

ಕುಳಿತ ಉಗ್ರದ ದೇವಿಯೆ |

ವಿಮಲ ಪಾದಕೆ ಶರಣು ಎನುತಲಿ

ಲೀಲೆ ಹರುಷದಿ ಪಾಡುವೆ||

 

ಫಾಲ ಕುಂಕುಮ ಧರಿಸಿ ಮೆರೆಯುವೆ

ಕಾರ್ತಿಕೆಯನ ಮಾತೆಯೆ|

ಅಂದ ವದನದಿ ಮುಗುಳು ನಗೆಯನು

ತೋರಿ ಭಕುತರ ಪೊರೆಯುವೆ||

 

ದುಷ್ಟ ಶಕ್ತಿಯ ದೂರ ಮಾಡುವ

ಅಂಬಾ ಭವಾನಿ ದುರ್ಗೆಯೆ|

ಶಿಷ್ಟ ಜನರನು ಪೊರೆದು ನಲಿಯುವ

ಮಹಿಷ ಮರ್ಧಿನಿ ತಾಯಿಯೆ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್