ಭಕ್ತಿ ಗೀತೆ - ಶ್ರೀ ಜಯದುರ್ಗೆ

ಭಕ್ತಿ ಗೀತೆ - ಶ್ರೀ ಜಯದುರ್ಗೆ

ಕವನ

ಓಂಕಾರ ರೂಪಿಣಿ

 ಅಂಬಾ ಭವಾನಿ

ಶ್ರೀ ಜಯದುರ್ಗೆ ಶರಣೆನ್ನುವೆ//

ಶಿಷ್ಟರನು ಪೊರೆಯುತಲಿ

ದುಷ್ಟರನು ತರಿಯುತಲಿ

ಭಕುತರಿಗೆ ದಯೆ ತೋರಿದೆ//

 

ಚಂಡ ಮುಂಡರನು

ವಧೆ ಮಾಡಿ ಕುಣಿಯುತಲಿ

ಶುಂಭ ನಿಶುಂಭರ ಪ್ರಾಣವನು ಹೀರಿದೆ//

ಲೋಕ ಕಂಟಕನಾದ

ದುರುಳ ಮಹಿಷನ 

ಶಿರವನ್ನು ಛೇಧಿಸಿದೆ ರಣದಲ್ಲಿಯೆ//

 

ನವರಾತ್ರಿ ದಿವಸದಿ

ನವಶಕ್ತಿ ರೂಪದಿ

ಅವತಾರ ಎತ್ತಿದೆ ನವದುರ್ಗೆಯಾಗಿ//

ಸೌಮ್ಯ ಮಾನವರನ್ನು

ಹಿಡಿದೆತ್ತಿ ಕಾಪಾಡು

ದುಷ್ಟ ಜನರನು ವಧಿಸು ಶ್ರೀ ದುರ್ಗೆಯಾಗಿ//

 

-ರತ್ನಾ ಭಟ್ ತಲಂಜೇರಿ

 

ಚಿತ್ರ್